ಶ್ರೀ ಧೂಮಾವತಿ ದೈವಸ್ಥಾನಕ್ಕೆ ದೇಣಿಗೆ

ಕಿನ್ನಿಗೋಳಿ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ಯೋಜನೆಯಡಿ ಕಟೀಲು ಮಿತ್ತಬೈಲು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ನೀಡಿದ 2 ಲಕ್ಷ ರೂಗಳ ದೇಣಿಗೆ ಚೆಕ್‌ನ್ನು ಗ್ರಾಮಾಭಿವೃದ್ಧಿ ಯೋಜನೆಯ ಮಂಗಳೂರು ಯೋಜನಾಧಿಕಾರಿ ಎಂ. ರಾಘವ ಅವರು ದೈವಸ್ಥಾನ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಮಿತ್ತಬೈಲು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಧ. ಗ್ರಾ. ಯೋ. ಕಿನ್ನಿಗೋಳಿ ವಲಯ ಮೇಲ್ವಿಚಾರಕ ಸತೀಶ್ ಹಾಗೂ ಶಿಬಿರಾಧಿಕಾರಿ ಭಾಸ್ಕರ್, ಯುಗಪುರುಷದ ಭುವನಾಭಿರಾಮ ಉಡುಪ, ದೈವಸ್ಥಾನ ಸಮಿತಿಯ ಈಶ್ವರ್ ಕಟೀಲ್, ಸತ್ಯಜಿತ್ ಸುರತ್ಕಲ್, ದೊಡ್ಡಯ್ಯ ಮೂಲ್ಯ ಕೆರಮ, ಸದಾನಂದ ಶೆಟ್ಟಿ ಕೆರಮ, ಯಶವಂತ ಅಂಚನ್, ಬಾಬು ಪೂಜಾರಿ, ವಿಶ್ವನಾಥ್, ಲಕ್ಷಣ್ ಪೂಜಾರಿ, ಕರಿಯಣ್ಣ ಶೆಟ್ಟಿ, ಶ್ರೀನಿವಾಸ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-13031513

Comments

comments

Comments are closed.

Read previous post:
Kinnigoli-13031512
ಶಿಸ್ತು ಸಂಸ್ಕಾರದ ಶಿಕ್ಷಣ ಜೀವನದಲ್ಲಿ ಯಶಸ್ಸಿನ ದಾರಿ

ಕಿನ್ನಿಗೋಳಿ : ಶಿಸ್ತು ಸಂಸ್ಕಾರದ ಶಿಕ್ಷಣ ಜೀವನದಲ್ಲಿ ಯಶಸ್ಸಿಯ ದಾರಿಯನ್ನು ತೋರಿಸುತ್ತದೆ ಎಂದು ಅಲ್ ಅನ್ಸಾರ್ ವಾರಪತ್ರಿಕೆಯ ಎಸ್.ಪಿ.ಹಂಝ ಸಖಾಪಿ ಹೇಳಿದರು. ಸುನ್ನೀ ಮ್ಯಾನೇಜ್‌ಮೆಂಟ್ ಎಸೋಸಿಯೇಶನ್ ಸುರತ್ಕಲ್ ವಲಯ...

Close