ಕೊಳುವೈಲು ಕಾಂಕ್ರೇಟ್ರೀಕರಣ ರಸ್ತೆ ಉದ್ಘಾಟನೆ

ಮೂಲ್ಕಿ: ರಾಜ್ಯದ ಎಲ್ಲಾ ಮೀನುಗಾರಿಕಾ ಕೊಂಡಿ ರಸ್ತೆಗಳನ್ನು ಆದ್ಯತೆಯಲ್ಲಿ ಕಾಂಕ್ರೇಟೀಕರಣಗೊಳಿಸಿ ಮೀನುಗಾರರಿಗೆ ಅನುಕೂಲ ಕಲ್ಪಿಸಲಾಗುವುದೆಂದು ಕ್ರೀಡಾ ಹಾಗೂ ಮೀನುಗಾರಿಕಾ ಸಚಿವರಾದ ಕೆ. ಅಭಯಚಂದ್ರರವರು ನುಡಿದರು.
ಮೀನುಗಾರಿಕೆ ಇಲಾಖೆ ಹಾಗೂ ಶಾಸಕರ ಅನುದಾನ ಮೂಲಕ ನಿರ್ಮಾಣಗೊಂಡ ಹಳೆಯಂಗಡಿ-ಕೊಳುವೈಲು ಕಾಂಕ್ರೇಟ್ರೀಕರಣ ರಸ್ತೆಯ ಉದ್ಘಾಟನೆ ಮಾಡಿ ಸಚಿವರು ನುಡಿದರು. ಕಾರ್ಯಕ್ರಮದಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾಶಿವ ಸಾಲ್ಯಾನ್, ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಮಧು, ಮಾಜಿ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ಮಹಾಬಲ ವಿ. ಸಾಲ್ಯಾನ್, ಇಂಜಿನಿಯರ್ ಪ್ರಶಾಂತ್ ಆಳ್ವ, ಉಪಾಧ್ಯಕ್ಷ ಅಬ್ದುಲ್ ಖಾದರ್, ಪಂಚಾಯತ್ ಸದಸ್ಯರುಗಳಾದ ಸುಜಾತ ವಾಸುದೇವ್, ಎಚ್. ಹಮೀದ್, ಪದ್ಮಾವತಿ ಶೆಟ್ಟಿ, ಜಲಜ ಬಶೀರ್ ಸಾಗ್, ಜಗನ್ನಾಥ್ ಕೋಟ್ಯಾನ್ ಮೊದಲಾದವರು ಇದ್ದರು.

Prakash Suvarna

Mulki-13031506

Comments

comments

Comments are closed.

Read previous post:
Mulki-13031505
ಖ್ಯಾತ ಜ್ಯೋತಿಷಿ ಕಿಲ್ಪಾಡಿ ಗೋವಿಂದ ಭಟ್

ಮೂಲ್ಕಿ: ಮೂಲ್ಕಿ ಸಮೀಪದ ಕಿಲ್ಪಾಡಿಯ ರಾಘವೇಂದ್ರ ಮಠದ ಖ್ಯಾತ ಜ್ಯೋತಿಷಿ,ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಞ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ತಂದೆ 85 ವರ್ಷದ ಕಿಲ್ಪಾಡಿ ಗೋವಿಂದ ಭಟ್...

Close