ಶಿಸ್ತು ಸಂಸ್ಕಾರದ ಶಿಕ್ಷಣ ಜೀವನದಲ್ಲಿ ಯಶಸ್ಸಿನ ದಾರಿ

ಕಿನ್ನಿಗೋಳಿ : ಶಿಸ್ತು ಸಂಸ್ಕಾರದ ಶಿಕ್ಷಣ ಜೀವನದಲ್ಲಿ ಯಶಸ್ಸಿಯ ದಾರಿಯನ್ನು ತೋರಿಸುತ್ತದೆ ಎಂದು ಅಲ್ ಅನ್ಸಾರ್ ವಾರಪತ್ರಿಕೆಯ ಎಸ್.ಪಿ.ಹಂಝ ಸಖಾಪಿ ಹೇಳಿದರು.
ಸುನ್ನೀ ಮ್ಯಾನೇಜ್‌ಮೆಂಟ್ ಎಸೋಸಿಯೇಶನ್ ಸುರತ್ಕಲ್ ವಲಯ ವತಿಯಿಂದ ಕಿನ್ನಿಗೋಳಿಯ ಶಾಂತಿನಗರ ಸಮುದಾಯ ಭವನದಲ್ಲಿ ನಡೆದ ಮದ್ರಸ ವಿದ್ಯಾಭ್ಯಾಸದ ಅಭಿವೃದ್ಧಿ ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಸುನ್ನೀ ಮ್ಯಾನೇಜ್‌ಮೆಂಟ್ ಎಸೋಸಿಯೇಶನ್ ಸುರತ್ಕಲ್ ವಲಯ ಅಧ್ಯಕ್ಷ ಐ.ಯಾಕೂಬ್ ಇಡ್ಯಾ ಅಧ್ಯಕ್ಷತೆ ವಹಿಸಿದ್ದರು. ಶಾಂತಿನಗರ ಜುಮ್ಮಾ ಮಸೀದಿ ಖತೀಬ ಪಿ.ಜೆ.ಅಹ್ಮದ್ ಮದನಿ ದುವಾ ನೆರವೇರಿಸಿದರು.
ಶಾಂತಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಚ್.ಮಯ್ಯದ್ದಿ, ಪುನರೂರು ಜುಮ್ಮಾ ಮಸೀದಿ ಖತೀಬ ಹಸನ್ ಸಖಾಫಿ, ಸುಲೈಮಾನ್ ನೂರಿ ಅಮಾನಿ, ಅಬ್ದುಲ್ ಲತೀಫ್ ಸಖಾಫಿ, ಅಬೂಸ್ವಾಲಿಹ್ ಝೈನಿ, ಟಿ.ಮಯ್ಯದ್ದಿ, ಅಹ್ಮದ್ ಬಾವಾ, ಟಿ.ಎ.ಅಬ್ದುಲ್ ಖಾದರ್, ಅಬ್ದುಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು. ಯೂಸುಫ್ ಸಿದ್ಧೀಕ್ ಸಖಾಫಿ ಸ್ವಾಗತಿಸಿದರು. ಜೆ.ಎಚ್.ಜಲೀಲ್ ವಂದಿಸಿದರು. ಟಿ.ಎ.ನಝೀರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-13031512

Comments

comments

Comments are closed.

Read previous post:
Mulki-13031511
ಶಿಮಂತೂರು ಬ್ರಹ್ಮಕಲಶೋತ್ಸ ಪೂರ್ವಭಾವಿ ಸಭೆ

ಮೂಲ್ಕಿ: ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವನ್ನು 2016 ರಲ್ಲಿ ನೆರವೇರಿಸುವ ಬಗ್ಗೆ ಪೂರ್ವಭಾವಿ ಸಭೆಯನ್ನು ದೇವಳದ ವಠಾರದಲ್ಲಿ ನಡೆಸಲಾಯಿತು. ಕ್ಷೇತ್ರದ ತಂತ್ರಿವರೇಣ್ಯರಾದ ವೇದವ್ಯಾಸ ತಂತ್ರಿ ಅವರು ಪ್ರತೀ...

Close