ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

ಮೂಲ್ಕಿ: ಹಳೆಯಂಗಡಿಯಲ್ಲಿ ಉನ್ನತ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಪ್ರಾರಂಭಗೊಂಡ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂದಿನ ವರುಷ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದು, ಈ ಅವಧಿಯಲ್ಲಿ ಕಾಲೇಜನ್ನು ಇನ್ನಷ್ಟು ಮೇಲ್‌ದರ್ಜೆಗೆ ಏರಿಸುವರೇ ಪ್ರಯತ್ನಿಸಲಾಗುವುದೆಂದು ಕರ್ನಾಟಕ ಸರಕಾರದ ಕ್ರೀಡಾ ಮಂತ್ರಿಯಾದ ಕೆ. ಅಭಯಚಂದ್ರ ಅವರು ನುಡಿದರು.
ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿ.ಎಸ್.ಐ ಚರ್ಚ್‌ನ ಧರ್ಮ ಗುರುಗಳಾದ ರೇ| ಫಾಧರ್ ಸೆಬೇಸ್ಟಿನ್ ಜತನ್ನ ರವರು ಮಾತನಾಡಿದರು. ಮಂಗಳೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ, ಹಳೆಯಂಗಡಿ ಕಾಲೇಜಿನ ಪ್ರಾಂಶುಪಾಲ ಪ್ರೋ.ಎಂ. ವಿಶ್ವನಾಥ್ ಭಟ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ತಾಲೂಕು ಪಂಚಾಯತ್ ಸದಸ್ಯ ರಾಜು ಕುಂದರ್, ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಖಾದರ್, ಉಪನ್ಯಾಸಕ ಜಗದೀಶ್ ಬಾಳ, ಮೊದಲಾದವರು ಉಪಸ್ಥಿತರಿದ್ದರು.

Prakash Suvarna

Mulki-13031509

Comments

comments

Comments are closed.

Read previous post:
Mulki-13031507
ಶ್ರೀ ಧರ್ಮಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಮೂಲ್ಕಿ: ಮೂಲ್ಕಿ ಕಾರ್ನಾಡು ಶ್ರೀ ಧರ್ಮಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಶ್ರೀ ಉಳ್ಳಾಯ ಮತ್ತು ಶ್ರೀ ದೂಮಾವತಿ ದೈವದ ನೇಮೋತ್ಸವವು ಜರಗಿತು. Prakash Suvarna

Close