ರಾಮನವಮಿ ರಥಯಾತ್ರೆ

ಮೂಲ್ಕಿ: ಶ್ರೀ ರಾಮ ದಾಸ ಆಶ್ರಮ ಬೆಂಗಳೂರು ಇವರ ಬೆಳ್ಳಿ ಮಹೊತ್ಸವದ ಆಶ್ರಯದಲ್ಲಿ ರಾಮನವಮಿ ಪ್ರಯುಕ್ತ ರಾಮನವಮಿ ರಥಯಾತ್ರೆಯು ಕೊಲ್ಲೂರಿನಿಂದ ಹೊರಟು ತಿರುವನಂತಪುರದ ಶ್ರೀ ರಾಮ ದಾಸ ಆಶ್ರಮತನಕ ಹೊರಡಲಿದೆ. ಹಳೆಯಂಗಡಿ ಹಿಂದೂ ಜಾಗರಣ ವೇದಿಕೆ ಮಂಡಲದ ವತಿಯಿಂದ ಹಳೆಯಂಗಡಿಯಲ್ಲಿ ಸ್ವಾಗತಿಸಲಾಯಿತು.
ಶ್ರೀ ರಾಮನಮಿಯ ಆಚರಣೆ ನಮಗೆ ಸಾಮಾಜಿಕ ಮೌಲ್ಯಗಳು ಮತ್ತು ದೇಶದ ಆರ್ಥಿಕ ವ್ಯವಸ್ಥೆಯ ನಡುವೆ ಸ್ಪರ್ಧಾತ್ಮಕ ಸಮತೋಲನ ಮತ್ತು ಮಾನವ ಸಮಾಜಕ್ಕೆ ಆಕಾರವನ್ನು ನೀಡುವ ಒಂದು ಸಾರ್ವತ್ರಿಕ ತತ್ವ ಸ್ಥಾಪಿಸಲು ಅಗತ್ಯವನ್ನು ನೆನಪಿಸುತ್ತದೆ ಎಂದು ಶ್ರೀ ಶಕ್ತಿ ಶಾಂತಾನಂದ ಮಹಿರ್ಷಿ ಅಧ್ಯಕ್ಷರು ಸ್ವಾಮಿ ಸತ್ಯಾನಂದ ಸರಸ್ವತಿ ಫೌಂಡೇಶನ್ ಇವರು ಹೇಳಿದರು. ಈ ಸಂದರ್ಭ ಹಿಂದೂಜಾಗರಣ ವೇದಿಕೆ ಕರ್ನಾಟಕ ಪ್ರಾಂತ್ಯದ ಸತ್ಯಜೀತ್ ಸುರತ್ಕಲ್ ಸತೀಶ್ ಭಟ್ ,ವಿನೋದ್ ಬೊಳ್ಳೂರು, ಹಿಂದೂಜಾಗರಣ ವೇದಿಕೆ ಹಳೆಯಂಗಡಿ ಮಂಡಲ ಅಧ್ಯಕ್ಷ ಸನತ್ ಕುಮಾರ್, ರಾಮಚಂದ್ರ ಶೆಣೈ, ಸಾವಿತ್ರಿ.ಜಿ.ಸುವರ್ಣ, ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Sunil Bangera

Mulki-13031510

Comments

comments

Comments are closed.

Read previous post:
Mulki-13031509
ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

ಮೂಲ್ಕಿ: ಹಳೆಯಂಗಡಿಯಲ್ಲಿ ಉನ್ನತ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಪ್ರಾರಂಭಗೊಂಡ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂದಿನ ವರುಷ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದು, ಈ ಅವಧಿಯಲ್ಲಿ ಕಾಲೇಜನ್ನು...

Close