ಶಿಮಂತೂರು ಬ್ರಹ್ಮಕಲಶೋತ್ಸ ಪೂರ್ವಭಾವಿ ಸಭೆ

ಮೂಲ್ಕಿ: ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವನ್ನು 2016 ರಲ್ಲಿ ನೆರವೇರಿಸುವ ಬಗ್ಗೆ ಪೂರ್ವಭಾವಿ ಸಭೆಯನ್ನು ದೇವಳದ ವಠಾರದಲ್ಲಿ ನಡೆಸಲಾಯಿತು. ಕ್ಷೇತ್ರದ ತಂತ್ರಿವರೇಣ್ಯರಾದ ವೇದವ್ಯಾಸ ತಂತ್ರಿ ಅವರು ಪ್ರತೀ 12 ವರ್ಷಕ್ಕೊಮ್ಮೆ ಅಷ್ಠಬಂಧವನ್ನು ಆಗಮ ಶಾಸ್ತ್ರದ ಪ್ರಕಾರ ಮಾಡಿದಲ್ಲಿ ಸಾನಿಧ್ಯ ಬೆಳಗುವುದೆಂದು ಸೂಕ್ತ ಸಲಹೆ ಮುಖೇನ ಮಾರ್ಗದರ್ಶನ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿಯಯ ಆಧ್ಯಕ್ಷ ಉದಯ ಶೆಟ್ಟಿ ಅವರು ಬ್ರಹ್ಮಕಲಶೋತ್ಸವದ ಸಮಯದಲ್ಲಿ ಆಗಬೇಕಾದ ಕಾರ್ಯಕ್ರಮಗಳ ಸ್ಥೂಲ ಪರಿಚಯ ನೀಡಿದರು. ಪೂರ್ವಭಾವಿ ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಸಮಯದಲ್ಲಿ ನಡೆಯಬೇಕಾದ ಕೆಲಸಗಳನ್ನು ಪೂರ್ಣಗೊಳಿಸುವ ಮತ್ತು ಒಂದು ದಿನದ ತಾಂಬೂಲ ಪ್ರಶ್ನೆಯನ್ನು ಇಟ್ಟು ಚರ್ಚಿಸಿ ನಂತರ ನಿರ್ಣಯ ತೆಗೆದುಕೊಳ್ಳುವುದೆಂದು ನಿರ್ಧಾರ ತೆಗೆದುಕೊಳ್ಳಲಾಯಿತು. ಪೂರ್ವಭಾವಿ ಸಭೆಯಲ್ಲಿ ಶೇಖರ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಉದಯ ಶೆಟ್ಟಿ ಹಾಗೂ ಯುವಕ ಸಂಘ ಸದಸ್ಯರು ಕೊಟ್ಟಿರುವ ಸಲಹೆಗಳನ್ನು ಪರಿಗಣಿಸಲಾಯಿತು.
ಸಭೆಯಲ್ಲಿ ದೇವಳದ ಅರ್ಚಕ ಪುರುಷೋತ್ತಮ ಭಟ್, ಆಡಳಿತ ಮಂಡಳಿಯ ಸದಸ್ಯರುಗಳಾದ ಪದ್ಮಿನಿ ಶೆಟ್ಟಿ, ಶಶಿಕಲ ಗುಜರನ್, ಮೋಹನ್ ಸುವರ್ಣ, ಬಿ. ರಘುನಾಥ್ ಶೆಟ್ಟಿ, ಮುಂಬೈಯ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಯ ಎ. ಶೆಟ್ಟಿ , ಕಾರ್ಯದರ್ಶಿ ಶಿಮಂತೂರು ಚಂದ್ರಹಾಸ ಸುವರ್ಣರು ಉಪಸ್ಥಿತರಿದ್ದರು.

Mulki-13031511

Comments

comments

Comments are closed.

Read previous post:
Mulki-13031510
ರಾಮನವಮಿ ರಥಯಾತ್ರೆ

ಮೂಲ್ಕಿ: ಶ್ರೀ ರಾಮ ದಾಸ ಆಶ್ರಮ ಬೆಂಗಳೂರು ಇವರ ಬೆಳ್ಳಿ ಮಹೊತ್ಸವದ ಆಶ್ರಯದಲ್ಲಿ ರಾಮನವಮಿ ಪ್ರಯುಕ್ತ ರಾಮನವಮಿ ರಥಯಾತ್ರೆಯು ಕೊಲ್ಲೂರಿನಿಂದ ಹೊರಟು ತಿರುವನಂತಪುರದ ಶ್ರೀ ರಾಮ ದಾಸ...

Close