ಖ್ಯಾತ ಜ್ಯೋತಿಷಿ ಕಿಲ್ಪಾಡಿ ಗೋವಿಂದ ಭಟ್

ಮೂಲ್ಕಿ: ಮೂಲ್ಕಿ ಸಮೀಪದ ಕಿಲ್ಪಾಡಿಯ ರಾಘವೇಂದ್ರ ಮಠದ ಖ್ಯಾತ ಜ್ಯೋತಿಷಿ,ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಞ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ತಂದೆ 85 ವರ್ಷದ ಕಿಲ್ಪಾಡಿ ಗೋವಿಂದ ಭಟ್ ರವರು ಅಲ್ಪ ಕಾಲದ ಅಸೌಖ್ಯದಿಂದ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಜ್ಯೋತಿಷಿಯಾಗಿ ಪರಿಸರದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದ ಕಿಲ್ಪಾಡಿ ಗೋವಿಂದ ಭಟ್ ರವರು ಕನ್ನಡದ ಖ್ಯಾತ ವರನಟ ಡಾ ರಾಜ್ ಕುಮಾರ್ ರವರ ಮಂಡಿ ನೋವಿಗೆ ಚಿಕಿತ್ಸೆ ನೀಡಿ ಗುಣ ಪಡಿಸುವ ಮೂಲಕ ಅವರ ಅಭಿಮಾನಕ್ಕೆ ಪಾತ್ರರಾಗಿದ್ದು ಮಾಜಿ ಮುಖ್ಯ ಮಂತ್ರಿ ಜೆ ಎಚ್ ಪಾಟೇಲ್,ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ ,ಕೆ ಪಿ ಸಿ ಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಸೇರಿದಂತೆ ರಾಜಕೀಯ ರಂಗದಲ್ಲಿ ಕೂಡ ಹಲವಾರು ಮಂದಿ ಗಣ್ಯರಿಂದ ಗೌರವಿಸಲ್ಪಟ್ಟಿದ್ದು ಮುಂಬೈ,ಬೆಂಗಳೂರು,ಆಂಧ್ರ ಪ್ರದೇಶ ಸೇರಿದಂತೆ ದೇಶಾದ್ಯಂತ ತಮ್ಮ ಜ್ಯೋತಿಷ್ಯದ ಮೂಲಕ ಪ್ರಸಿದ್ದಿಯನ್ನು ಪಡೆದಿದ್ದ ಅವರು ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಞ  ಚಂದ್ರಶೇಖರ ಸ್ವಾಮೀಜಿ, ವಿಶ್ವನಾಥ ಭಟ್, ರಾಜೇಶ್ ಭಟ್ ಸೇರಿದಂತೆ ಮೂವರು ಪುತ್ರರು ಮತ್ತು ಕುಸುಮಾ, ಪುಷ್ಪ ಸೇರಿದಂತೆ ಇಬ್ಬರು ಪುತ್ರಿಯರು, ಪತ್ನಿ ಶಾರದಮ್ಮ ಗೋವಿಂದ ಭಟ್, ಮೊಮ್ಮಕ್ಕಳು ಹಾಗೂ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.
ಮೂಲ್ಕಿಯ ಗೇರುಕಟ್ಟೆಯಲ್ಲಿನ  ಚಂದ್ರಶೇಖರ ಸ್ವಾಮೀಜಿಯವರ ಆಶ್ರಮದಲ್ಲಿ ಹಲವಾರು ಮಂದಿ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Mulki-13031505

Comments

comments

Comments are closed.

Read previous post:
Belmane-13031503
ನಂದಳಿಕೆ ಸಿರಿ ಜಾತ್ರೆಯ ಪ್ರಚಾರ ವೈಖರಿಯ ಪರಿ

ಬೆಳ್ಮಣ್: ಪ್ರತೀ ವರ್ಷವೂ ಒಂದಲ್ಲ ಒಂದು ರೀತಿಯಲ್ಲಿ ಅದ್ಬುತ ಪ್ರಚಾರದ ಪರಿಕಲ್ಪನೆಯನ್ನು ಹೊತ್ತುಕೊಂಡು ವಿಭಿನ್ನ ರೀತಿಯಲ್ಲಿ ಜಾತ್ರೆಯ ಪ್ರಚಾರವನ್ನು ಮಾಡುವ ನಂದಳಿಕೆ ಸಿರಿ ಜಾತ್ರೆ ಈ ಬಾರಿ...

Close