ಪಾದೂರು ಪೈಪ್ ಲೈನ್ ಕಾರ್ಯವೈಖರಿ

ಕಿನ್ನಿಗೋಳಿ : ಮಂಗಳೂರು ಪಾದೂರು ಪೈಪ್ ಲೈನ್ ಯೋಜನೆ ಅನ್ವಯ ಉಡುಪಿ ತಾಲೂಕಿನ ಪಾದೂರು ಗ್ರಾಮದಲ್ಲಿ ನಿರ್ಮಿಸಲಾಗುವ ಕಚ್ಚಾತೈಲ ದಾಸ್ತಾನು ಸ್ಥಾವರಕ್ಕೆ ಕಚ್ಚಾತೈಲ ಸಾಗಿಸುವ ಸಲುವಾಗಿ ನೆಲದಡಿ ಕೊಳವೆಗಳನ್ನು ಅಳವಡಿಸುವ ಬಗ್ಗೆ ಭೂ ಸ್ವಾನ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಹಳೆಯಂಗಡಿ ತೋಕೂರು ಕೆಂಚನಕೆರೆ ಬಳ್ಕುಂಜೆ ಕರ್ನಿರೆ ಮಾರ್ಗವಾಗಿ ಪಾದೂರು ತಲುಪುವ ಈ ಯೋಜನೆ ಈಗ ಗೋಜಲು ಗೋಜಲು ಆಗುತ್ತಿದೆ.
ಪ್ರಥಮ ಹಂತದಲ್ಲಿ ಯಾವ ಯಾವ ಸರ್ವೆ ನಂಬ್ರಗಳ ಮೂಲಕ ಪೈಪ್ ಲೈನ್ ಹಾದು ಹೋಗಲಿದೆ. ಎಂದು ಸಾರ್ವಜನಿಕ ಪ್ರಕಟಣಾ ಪ್ರತಿ ಸಂಭಂದಿತ ಗ್ರಾಮಗಳ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಕರಣಿಕರಿಗೆ ಭೂ ಸ್ವಾನಕಾರಿ ನೀಡಿರುತ್ತಾರೆ. ಆ ನಂತರ ಕೆಲವೊಂದು ಕಾರಣಗಳಿಂದ ಪೈಪ್ ಲೈನ್ ಹಾದಿ ಬದಲಾವಣೆಗೊಂಡಿರುತ್ತದೆ. ಪರಿಷ್ಕ್ರತ ಪೈಪ್ ಲೈನ್ ಮಾರ್ಗದ ಮಾಹಿತಿ ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಮಾಹಿತಿ ಇಲ್ಲದಿರುವುದು ಅಲ್ಲದೆ ಪೈಪ್ ಲೈನ್ ಹಾದು ಹೋಗುವ ಸಂಬಂಧ ಪಟ್ಟ ಜಮೀನಿನ ಗಡಿ ಗುರುತಿನ ಕಾರ್ಯವೂ ಕೂಡ ನಡೆದಿಲ್ಲದಿರುವುದು ಗ್ರಾಮಸ್ಥರ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಜಮೀನನ್ನು ಕಳೆದುಕೊಳ್ಳುವ ರೈತರಿಗೆ ತಮ್ಮ ಜಮೀನಿನ ಯಾವ ಪಾರ್ಶ್ವದಲ್ಲಿ ಪೈಪ್ ಲೈನ್ ಹಾದು ಹೋಗಲಿದೆ ಎಂದು ನಿಖರ ಮಾಹಿತಿಯಿಲ್ಲ. ಸಾರ್ವಜನಿಕರು ಹಾಗೂ ಭೂಸ್ವಾನ ಅಕಾರಿಗಳ ಸಂವಹನದ ಲೋಪ ದೋಷಗಳಿಂದ ಯಾರ‍್ಯಾರ ಜಮೀನು ಯಾರ‍್ಯಾರ ಹೆಸರಿನಲ್ಲಿ ಪರಿಹಾರದ ದಾಖಲಿಕೆ ಕಂಡು ಬಂದಿದೆ. ನಿಜವಾಗಿ ಜಮೀನು ಕಳಕೊಳ್ಳುವವನ ಬದಲು ಅದೇ ಸರ್ವೆ ನಂಬ್ರದ ಮತ್ತೊಬ್ಬರ ಹೆಸರು ಮತ್ತು ಒಂದೇ ಹೆಸರಿನ ಬೇರೆ ಬೇರೆ ಜನರು ಪರಿಹಾರಕ್ಕೆ ಅರ್ಹರಾಗುತ್ತಿದ್ದಾರೆ.
ಪ್ರಸ್ತುತ ಭೂಸ್ವಾನತೆ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿ ಜಮೀನು ಹಾಗೂ ಅದರಲ್ಲಿದ್ದ ಮರ ಮಟ್ಟು ಇನ್ನಿತರ ವಸ್ತುಗಳ ಬಗ್ಗೆ ಮೌಲ್ಯಮಾಪನ ವಾಗಿ ಪರಿಹಾರಧನ ಪಡೆದುಕೊಳ್ಳಲು ನೋಟೀಸ್ ನೀಡಲಾಗಿದೆ.
ನೋಟೀಸನ್ನು ಗ್ರಾಮಕರಣಿಕರು ಅಥವ ಅಕೃತ ಪ್ರತಿನಿಯ ಮೂಲಕ ಜಾರಿಯಾಗದೆ ಅಂಚೆ ಮೂಲಕ ರವಾನಿಸಿರುವುದು ಸಾಕಷ್ಟು ಅವಾಂತರಗಳಿಗೆ ಕಾರಣವಾಗುತ್ತಿದೆ. ಪಹಣಿ ಪತ್ರದ ದಾಖಲೆ ನೋಡಿಕೊಂಡು ಹೆಸರು ಗ್ರಾಮ ಬರೆದು( ಸಮರ್ಪಕ ವಿಳಾಸವಿಲ್ಲದೆ) ಅಂಚೆ ಮೂಲಕ ರವಾನಿಸದರೆ ಅದು ಎಷ್ಟು ಮಂದಿಗೆ ತಲುಪಬಹುದು ಎಂದು ಯೋಚಿಸಬೇಕಾದ ವಿಷಯ.
ಜಮೀನು ಕಳೆದುಕೊಳ್ಳುವ ಸಂತ್ರಸ್ಥರಿಗೆ ಭೂ ಮೌಲ್ಯ ಪಾವತಿಸುವ ಕ್ರಮಕ್ಕಿಂತ ಮುಂಚಿತವಾಗಿ ಭೂ ಸ್ವಾನತೆಗೊಳ್ಳುವ ಜಮೀನುಗಳಿಗೆ ಗಡಿಗಲ್ಲುಗಳನ್ನು ಹಾಕಿ ಪೈಪ್ ಲೈನ್ ಹಾದಿಯನ್ನು ಬಹಿರಂಗಪಡಿಸುವುದು ಸೂಕ್ತ ಇಲ್ಲವಾದಲ್ಲಿ ಜಮೀನು ಕಳಕೊಳ್ಳುವ ವ್ಯಕ್ತಿ ಹಾಗೂ ಪರಿಹಾರ ಪಡೆಯುವ ವ್ಯಕ್ತಿ ಬೇರೆ ಬೇರೆಯಾಗಬಹುದು. ಅಲ್ಲದೆ ಕೃಷಿ ಭೂಮಿ ಹಾನಿಗೀಡಾಗುವುದು
ಭೂ ಸ್ವಾನತೆಗೊಳ್ಳುವ ಜಮೀನುಗಳ ನಕಾಶೆಗಳ ವಿವರಗಳು ಗ್ರಾಮ ಕರಣಿಕರಲ್ಲಿ ಇಲ್ಲದಿರುವುದು ಹಾಗೂ ಗಡಿಗುರುತುಗಳ ಖಾತ್ರಿಯಿಲ್ಲದೆ ಪರಿಹಾರ ಧನ ಪಾವತಿಗೆ ನೋಟೀಸು ನೀಡುತ್ತಿರುವುದು ಪಡೆಯದಿದ್ದರೆ ಪರಿಹಾರ ಕೋರ್ಟಿನಲ್ಲಿ ಠೇವಣಿ ಮಾಡುತ್ತೇವೆ ಎಂಬ ಸರ್ವಾಕಾರಿ ದೋರಣೆಯ ಉತ್ತರ ನೀಡುತ್ತಿರುವುದು ವಿಷಾಧನೀಯ
ಸುಮಾರು ೫೪ ವರ್ಷಗಳ ಹಿಂದೆ ಮಾಡಿರುವ (1962) ಪೆಟ್ರೋಲಿಯಂ ಮತ್ತು ಮಿನರಲ್ ಪೈಪ್ ಲೈನ್ ಕಾಯ್ದೆ ಇಂದಿಗೆ ಪ್ರಸ್ತುತವಲ್ಲ 1962 ರ ಈ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಪರಿಹಾರ ದಾನ ಹೆಚ್ಚಿಸಬೇಕೆಂಬುದು ಗ್ರಾಮಸ್ಥರ ಅಭಿಪ್ರಾಯ.
ಈ ಯೋಜನೆಯ ಪರಿಗೆ ಬರುವ ಎಲ್ಲಾ ಜನಪ್ರತಿನಿಗಳು ಗ್ರಾಮಸ್ಥರ ಹಿತ ಕಾಪಾಡಿ ಯೋಜನೆಯನ್ನು ಸಫಲಗೋಳಿಸಬೇಕಾಗಿದೆ.

ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಸಾರ್ವಜನಿಕರು ತಮ್ಮ ಜಮೀನು ನೀಡುತ್ತಿರುವುದು ಸರಿಯಾದ ಕ್ರಮವಾದರೂ ಇಂತಹ ಅವೈಜ್ಞಾನಿಕ ರೀತಿಯ ವ್ಯವಸ್ಥೆಯಿಂದ ಯಾರ‍್ಯಾರೋ ಜಮೀನು ಕಳೆದು ಯಾರ‍್ಯಾರೋ ಪರಿಹಾರ ಪಡೆಯುವುದು ಅಲ್ಲದೆ ಕೆಲವರು ಗೊತ್ತಿಲ್ಲದೇ ತಮ್ಮ ಜಮೀನು ಕಳಕೊಳ್ಳುವುದು ಗ್ರಾಮಸ್ಥರಲ್ಲಿ ಹತಾಶ ಮನೋಭಾವನೆ ಕಂಡುಬರುತ್ತಿದೆ ಜನಪ್ರತಿನಿಗಳು ಈ ಅವ್ಯವಸ್ಥೆಯನ್ನು ಇಲಾಖಾಕಾರಿಗಳಲ್ಲಿ ಪರಾಮರ್ಶಿಸಿ ಸೂಕ್ತ ಉತ್ತರ ಕಂಡುಕೊಳ್ಳಬೇಕಾಗಿದೆ.
ಹರೀಶ್ಚಂದ್ರ ಶೆಟ್ಟಿ ಕರ್ನಿರೆಗುತ್ತು

ಯೋಜನೆಗಳ ಬಗ್ಗೆ ವಿಚಾರ ವಿಮರ್ಶೆ ಮಾಡಿ ಜಮೀನಿನ ಬಗ್ಗೆ ನಿಖರ ಪಾರದರ್ಶಕತೆಯ ತನಿಖೆ ಸರ್ವೆ ನಡೆಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ಮುಂದಾಗಬೇಕಿದೆ
ದಿನೇಶ್ ಪುತ್ರನ್
ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರು

Comments

comments

Comments are closed.

Read previous post:
Kinnigoli-13031513
ಶ್ರೀ ಧೂಮಾವತಿ ದೈವಸ್ಥಾನಕ್ಕೆ ದೇಣಿಗೆ

ಕಿನ್ನಿಗೋಳಿ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ಯೋಜನೆಯಡಿ ಕಟೀಲು ಮಿತ್ತಬೈಲು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ನೀಡಿದ 2 ಲಕ್ಷ ರೂಗಳ...

Close