ಅಮ್ಮಂಬಾಳ್ ಸುಬ್ಬರಾವ್ ಪೈ ಸಂಸ್ಮರಣೆ

ಮೂಲ್ಕಿ: ಭಾರತ ದೇಶದ ಅಭಿವೃದ್ಧಿಯ ಬನಾದಿ ಗ್ರಾಮೀಣ ವಲಯವೆಂದು ಅರಿತಿದ್ದ ಅಮ್ಮೆಂಬಾಳ್ ಸುಬ್ಬರಾವ್ ಪೈ ಯವರಯ ಆರ್ಥಿಕ ಉನ್ನತಿಗಾಗಿ ಕೆನರಾ ಬ್ಯಾಂಕ್ ಸ್ಥಾಪನೆಯೊಂದಿಗೆ ಶಿಕ್ಷಣಕ್ಕಾಗಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಅವರ ಧ್ಯೇಯ ಹಾಗೂ ಆದರ್ಶದ ಪಾಲನೆಯ ಮೂಲಕ ಕೆನರಾ ಬ್ಯಾಂಕ್ ದೇಶದ ಅತೀ ದೊಡ್ಡ ಬ್ಯಾಂಕ್ಳಲ್ಲಿ ಒಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯವಾಯಿತು ಎಂದು ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ಜಿ.ಪಿ ಕಾಮತ್ ಹೇಳಿದರು.
ಕೆನರಾ ಬ್ಯಾಂಕ್ ಸ್ಥಾಪಕ ಅಮ್ಮೆಂಬಾಳ್ ಸುಬ್ಬರಾವ್ ಪೈ ಯವರು ಹುಟ್ಟಿದ ಸ್ಥಳದಲ್ಲಿರುವ ಜಿ.ಎಸ್.ಬಿ ಸಭಾಗೃಹದಲ್ಲಿ ನಡೆದ ಅಮ್ಮಂಬಾಳ್ ಸುಬ್ಬರಾವ್ ಪೈ ಯವರ ಸಂಸ್ಮರಣೆ ಹಾಗೂ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಭಾಗೃಹ ಸಮಿತಿ ಅಧ್ಯಕ್ಷರಾದ ವಿ.ವಿಶ್ವನಾಥ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಮೂಲ್ಕಿ ಕೆನರಾ ಬ್ಯಾಂಕ್ ಹಿರಿಯ ಪ್ರಭಂದಕ ಜನಾರ್ದನ ಭಕ್ತ, ಜಿ.ಎಸ್.ಬಿ ಸಭಾ ಅಧ್ಯಕ್ಷ ಸತ್ಯೇಂದ್ರ ಶೆಣೈ,ನಯನಾ ಕಾಮತ್,ಪೂರ್ವಾಧ್ಯಕದ ವಿ ಸತೀಶ ಕಾಮತ್,ನಾರಾಯಣ ಶೆಣೈ, ಗೌಡ ಸಾರಸ್ವತ ಬ್ರಾಹ್ಮಣ ಬಡ ವಿದ್ಯಾರ್ಥಿ ಫಂಡ್‌ನ ಪ್ರೊ.ಯು.ನಾಗೇಶ್ ಶೆಣೈ,ಯು,ಬಾಬುರಾಯ ಶೆಣೈ, ಯು ಸುರೇಂದ್ರ ಶೆಣೈ ಅತಿಥಿಗಳಾಗಿದ್ದರು.
ಪ್ರೊ.ನಾಗೇಶ್ ಶೆಣೈ ಸ್ವಾಗತಿಸಿದರು.ವಕೀಲ ಸತೀಶ್ ಕಾಮತ್ ಪ್ರಸ್ತಾವಿಸಿದರು.

Bhagyawan Sanil

Mulki-16031505

Comments

comments

Comments are closed.

Read previous post:
Mulki-16031504
ರಕ್ತದಾನವು ದಾನಿಯ ಆರೋಗ್ಯ ರಕ್ಷಿಸುವುದು

ಮೂಲ್ಕಿ: ನಿಯಮಿತ ರಕ್ತದಾನವು ದಾನಿಯ ಆರೋಗ್ಯ ರಕ್ಷಿಸುವುದು ಮಾತ್ರವಲ್ಲದೆ ಅಗತ್ಯ ಸಂದರ್ಭದಲ್ಲಿ ಜೀವ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಹಿರಿಯ ವ್ಯದ್ಯಾಧಿಕಾರಿ ಡಾ. ಶರತ್...

Close