ಆಸ್ರಣ್ಣ – ಪಟ್ಲ ಪ್ರಕರಣ ಸುಖ್ಯಾಂತ

ಜನರಲ್ಲಿನ ಹಾಗೂ ಮಾಧ್ಯಮದಲ್ಲಿನ ವರದಿಗಳು ಕಪೋಲ ಕಲ್ಪಿತವಾಗಿದ್ದು ಹಾಗಾಗಿ ಅಭಿಮಾನಿಗಳಲ್ಲಿ ಆಸ್ರಣ್ಣ – ಪಟ್ಲ ಪ್ರಕರಣ ಗೋಜಲು ಗೋಜಲುಗಳಾಗಿ ಕಂಡು ಬಂದ್ದಿದ್ದು ಇದೀಗ ಸುಖಾಂತ್ಯ ಕಂಡಿದೆ.
ಕಳೆದ ಒಂದು ವಾರದಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಲೇಖನದ ವಿಷಯ ಹಾಗೂ ಮೇಳಕ್ಕೆ ರಾಜೀನಾಮೆ ಬಗ್ಗೆ ಹರಿದಾಡುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ನನಗೆ ಕಳೆದ ನಾಲ್ಕು ದಿನ ಹಿಂದೆ ವಿಷಯ ಗೊತ್ತಾಗಿತ್ತು. ಆದರೆ ನನಗೆ ಮನಸ್ಸಿಗೆ ವೇದನೆಯಾದದ್ದು ನಿಜವಾದರೂ ಯಾವುದೇ ವಿಚಾರಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಳ್ಳದೆ ಪ್ರಕರಣದ ಸತ್ಯಾಸತ್ಯತೆಗಳನ್ನು ಖುದ್ದು ಲಕ್ಷ್ಮೀನಾರಾಯಣ ಆಸ್ರಣ್ಣರೊಂದಿಗೆ ಕೂಲಂಕುಷವಾಗಿ ಪರಾಮರ್ಶಿಸಿದ ನಂತರವೇ ಮುಂದಿನ ನಡೆಯೆಂದು ಭಾವಿಸಿ ಅವರೊಡನೆ ಚರ್ಚಿಸಿ ವಿಷಯ ಕಪೋಲ ಕಲ್ಪಿತವಾಗಿದೆ ಎಂದು ತಿಳಿದು ಬಂತು ಎಂದು ಕಟೀಲು ಐದನೇ ಮೇಳದ ಪ್ರಧಾನ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ಹೇಳಿದರು.
ಧರ್ಮಸ್ಥಳ ಮೇಳ ಸೇರುವುದು ಎಂಬುದು ಅಪಪ್ರಚಾರವಾಗಿದೆ ಖಾಸಗಿ ಕಾರ್ಯಕ್ರಮದ ಬಗ್ಗೆ ಅಲ್ಲಿಗೆ ಹೋಗಿದ್ದೆ. ನನ್ನ ಸೇವೆ ಕಟೀಲು ತಾಯಿಗೆ ಮುಡಿಪಾಗಿಟ್ಟಿದ್ದೇನೆ. ನಾನು ಕಟೀಲು ಮೇಳವಲ್ಲದೆ ಬೇರೆ ಯಾವ ಮೇಳದ ತಿರುಗಾಟಕ್ಕೆ ಸೇರುವುದಿಲ್ಲ. ಕಲಾವಿದರು ಯಾವ ಜಾತಿಯ ಸ್ವಾಮ್ಯಕ್ಕೆ ಒಳಪಟ್ಟಿಲ್ಲ ಎಲ್ಲರೂ ಒಂದೇ ಇದರಲ್ಲಿ ಯಾರೂ ಜಾತೀ ರಾಜಕೀಯ ತರಬಾರದು ಎಂದು ನನ್ನ ವಿನಂತಿ ಎಂದು ಹೇಳಿದರು.
ಲಕ್ಷ್ಮೀನಾರಾಯಣ ಆಸ್ರಣ್ಣರು ಮಾತನಾಡುತ್ತಾ ಕಳೆದ 2 ದಿನಗಳಿಂದ ಅವಾಂತರ ಸೃಷ್ಟಿಯಾಗಿದ್ದು ಪಟ್ಲ ಅವರ ಬಗ್ಗೆ ಅಂತಹ ಮಾತುಗಳನ್ನು ಆಡಿಲ್ಲ ಪಟ್ಲರ ಬಗ್ಗೆ ಅಭಿಮಾನವಿದೆ ನಾವೂ ಮುಂದೆಯೂ ಒಟ್ಟಾಗಿ ಮುನ್ನಡೆಯುತ್ತೇವೆ. ನಮ್ಮ ಭಾಂದವ್ಯ ಗುರು ಶಿಷ್ಯರ ಹಾಗಿದೆ. ಎಂದು ಪ್ರಕರಣಕ್ಕೆ ತೆರೆ ಎಳೆದರು.
ಈ ಸಂದರ್ಭ ಕಟೀಲು ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಯುಗಪುರುಷದ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.

Kateel-16031501 Kateel-16031502

Comments

comments

Comments are closed.

Read previous post:
Kinnigoli-16031510
ಕಮ್ಮಾಜೆ ರಸ್ತೆ ಲೋಕಾರ್ಪಣೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮಾಜೆ-ಮೊರಾರ್ಜಿ ದೇಸಾಯಿ ವಸತಿ ಶಾಲಾ ಡಾಮರೀಕರಣ ಗೊಂಡ ರಸ್ತೆಯನ್ನು ಮೂಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಲೋಕಾರ್ಪಣೆಗೊಳಿಸಿದರು. ಜಿಲ್ಲಾ...

Close