ಮಹಿಳೆಯರು ಆರ್ಥಿಕವಾಗಿ ಸದೃಡರಾಗಬೇಕಾಗಿದೆ

ಕಿನ್ನಿಗೋಳಿ : ನಮ್ಮ ಮಕ್ಕಳಿಗೆ ಶಿಸ್ತು ಸಂಸ್ಕಾರ ನೈತಿಕತೆಯ ಪಾಠ ಹಾಗೂ ಸತ್ಪ್ರಜೆಯನ್ನಾಗಿ ಮಾಡಲು ಮಹಿಳೆಯರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸದೃಡರಾಗಬೇಕಾಗಿದೆ. ಎಂದು ಆಕಾಶವಾಣಿ ಕಾರ್ಯಕ್ರಮ ನಿರೂಪಕಿ ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ ಹೇಳಿದರು.
ಕಂಬಳಬೆಟ್ಟು-ತೋಕೂರು ಶ್ರೀ ದೇವಿ ಮಹಿಳಾ ಮಂಡಲ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು , ಲಯನ್ಸ್ ಕ್ಲಬ್ ಮೂಲ್ಕಿ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ನಡೆದ ಪೊಂಜೊವುಲೆನ ತುಡರ ಪರ್ಬ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಈ ಸಂದರ್ಭ 60 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಎಂ. ಆರ್. ಪಿ. ಎಲ್ ಡ್ಯೆಪುಟಿ ಜನರಲ್ ಮ್ಯಾನೇಜರ್ ಲಕ್ಷ್ಮೀಕುಮಾರನ್ ಅಧ್ಯಕ್ಷತೆ ವಹಿಸಿದ್ದರು.
ಆಶಾ ಹರೀಶ್ ಅಮೀನ್ ಮುಲ್ಕಿ ಕಾರ್ಯಕ್ರಮ ಉದ್ಘಾಟಿಸಿದರು.
ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಪುರಂದರ ಡಿ. ಶೆಟ್ಟಿಗಾರ್, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ರಘು ಇಡ್ಕಿದು ಅತ್ತಾವರ, ಪ್ರೊ. ಡಿ. ವೇದಾವತಿ, ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್ ಉಪಸ್ಥಿತರಿದ್ದರು.
ಶಶಿಕಲಾ ಸ್ವಾಗತಿಸಿ ಪ್ರೇಮಲತಾ ವಂದಿಸಿದರು. ವಿದ್ಯಾಲಕ್ಷ್ಮೀ, ಪಿ. ಎಸ್. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

Kinnigoli-16031508

Comments

comments

Comments are closed.

Read previous post:
Kinnigoli-16031507
ಶಾಂತಿನಗರ ಶ್ರೀ ಮೂಕಾಂಬಿಕಾ ದೇವಳ ಧಾರ್ಮಿಕ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ, ಶಾಂತಿನಗರ ಶ್ರೀ ಮೂಕಾಂಬಿಕಾ ದೇವಳದ 34ನೇ ವರ್ಷದ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಶಾಂತಿನಗರದ ಭೋಜ ಪೂಜಾರಿ, ಅಂಧ...

Close