ರಕ್ತದಾನವು ದಾನಿಯ ಆರೋಗ್ಯ ರಕ್ಷಿಸುವುದು

ಮೂಲ್ಕಿ: ನಿಯಮಿತ ರಕ್ತದಾನವು ದಾನಿಯ ಆರೋಗ್ಯ ರಕ್ಷಿಸುವುದು ಮಾತ್ರವಲ್ಲದೆ ಅಗತ್ಯ ಸಂದರ್ಭದಲ್ಲಿ ಜೀವ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಹಿರಿಯ ವ್ಯದ್ಯಾಧಿಕಾರಿ ಡಾ. ಶರತ್ ಕುಮಾರ್ ಹೇಳಿದರು.
ಮೂಲ್ಕಿ ಜಿಎಸ್‌ಬಿ ಸಭಾ ಮತ್ತು ಮಂಗಳೂರು ವೆನ್ಲಾಕ್ ಆಸ್ಪತ್ರೆ ರಕ್ತ ನಿಧಿ ವಿಭಾಗದ ಸಹಯೋಗದಲ್ಲಿ ಮೂಲ್ಕಿ ಜಿಎಸ್‌ಬಿ ಸಭಾಗ್ರಹದಲ್ಲಿ ನಡೆದ ರಕ್ತದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒರ್ವ ದಾನಿ ನೀಡುವ ರಕ್ತವನ್ನು ವರ್ಗೀಕರಿಸಿ ಸುಮಾರು 5 ರೋಗಿಗಳಿಗೆ ನೀಡಬಹುದು. ಆದುದರಿಂದ ರಕ್ತದಾನ ಬಹು ಶ್ರೇಷ್ಠ ದಾನವಾಗಿದೆ ಎಂದರು.
ಹೊಟೇಲು ಉದ್ಯಮಿ ಪ್ರಸಾದ್ ಕಾಮತ್ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಎಸ್‌ಬಿ ಸಭಾ ಅಧ್ಯಕ್ಷ ಸತ್ಯೇಂದ್ರ ಶೆಣೈ ವಹಿಸಿದ್ದರು. ಡಾ. ಪ್ರೀತಮ್,ಡಾ.ಚಂದ್ರಕಾಂತ ಭಟ್, ರಕ್ತ ನಿಧಿ ಕೇಂದ್ರದ ಆಂಟನಿ ಟಿಸೋಜಾ ಮತ್ತು ಸಿಬ್ಬಂದಿಗಳು, ಮಂಗಳೂರು ಕರ್ನಾಟಕ ಬ್ಯಾಂಕ್ ಪ್ರಭಂದಕರಾದ ಪಾಂಡುರಂಗ ಭಟ್,ಸಭಾ ಉಪಾಧ್ಯಕ್ಷ ಜಿ.ಜಿ.ಕಾಮತ್.ಕಾರ್ಯದರ್ಶಿ ಯು.ಸುರೇಂದ್ರ ಶೆಣೈ,ಕೋಶಾಧಿಕಾರಿ ಯು.ಬಾಬುರಾಯ ಶೆಣೈ ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭ ಸುಮಾರು 90 ಯುನಿಟ್ ರಕ್ತದಾನ ನಡೆಯಿತು.

Bhagyawan Sanil

Mulki-16031504

Comments

comments

Comments are closed.

Read previous post:
Mulki-16031503
ಸಮಾಜ ಮುಖಿ ಕೆಲಸ ಸೇವಾಸಂಸ್ಥೆಗಳಿಂದ ಆಗಲಿ

ಮೂಲ್ಕಿ : ಸಾಮಾರಸ್ಯದ ಚಿಂತನೆಯನ್ನು ಸಮಾಜ ಮುಖಿ ಕೆಲಸದಲ್ಲಿ ಕಾಣುವಂತಾಗಬೇಕು, ಎಲ್ಲಾ ಸಮಾಜದ ಬಡವರ್ಗಕ್ಕೆ ಸರ್ಕಾರದ ವಿವಿಧ ಯೋಜನೆಗಳು ಸಹಕಾರಿ ಆಗಲು ಸೇವಾ ಸಂಸ್ಥೆಗಳು ಪ್ರಯತ್ನ ನಡೆಸಬೇಕು,...

Close