ಸಮಾಜ ಮುಖಿ ಕೆಲಸ ಸೇವಾಸಂಸ್ಥೆಗಳಿಂದ ಆಗಲಿ

ಮೂಲ್ಕಿ : ಸಾಮಾರಸ್ಯದ ಚಿಂತನೆಯನ್ನು ಸಮಾಜ ಮುಖಿ ಕೆಲಸದಲ್ಲಿ ಕಾಣುವಂತಾಗಬೇಕು, ಎಲ್ಲಾ ಸಮಾಜದ ಬಡವರ್ಗಕ್ಕೆ ಸರ್ಕಾರದ ವಿವಿಧ ಯೋಜನೆಗಳು ಸಹಕಾರಿ ಆಗಲು ಸೇವಾ ಸಂಸ್ಥೆಗಳು ಪ್ರಯತ್ನ ನಡೆಸಬೇಕು, ವಿಶೇಷವಾಗಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸೂಕ್ತ ವೇದಿಕೆಯನ್ನು ನಿರ್ಮಿಸಬೇಕು ಎಂದು ಸಚಿವ ಕೆ. ಅಭಯಚಂದ್ರ ಜೈನ್ ಅಭಿಪ್ರಾಯ ಪಟ್ಟರು.
ಅವರು ಮೂಲ್ಕಿಯ ಕಾರ್ನಾಡು ಹಿಮಾಯುತುಲ್ ಇಸ್ಲಾಂ ಸಮಿತಿಯ ಸಂಯೋಜನೆಯಲ್ಲಿ ಶನಿವಾರ ನಡೆದ ವಿವಿಧ ಸಾಮಾಜಿಕ ಕಾರ್ಯಕ್ರಮದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ಕೇಂದ್ರ ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಅಹಮ್ಮದ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮೂಲ್ಕಿ ಮಸೀದಿಯ ಧರ್ಮಗುರು ಅಬ್ದುಲ್ ಸಲೀಂ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಡ ಮುಸ್ಲಿಂ ಹೆಣ್ಣುಮಕ್ಕಳ ಮದುವೆಗೆ ಧನ ಸಹಾಯವನ್ನು ನೀಡಲಾಯಿತು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ತೋಡಾರ್ ಶಂಸುಲ್ ಉಲಮಾ ಅರೇಬಿಕ್ ಕಾಲೇಜಿನ ಶೈಖುನಾ ತ್ವಾಖಾ ಉಸ್ತಾದ್, ಬಂಬ್ರಾಣದ ಬಿ.ಕೆ.ಅಬ್ದುಲ್ ಖಾದರ್, ಕೇರಳದ ಪಾವೂರು ಸಯ್ಯದ್ ಬದ್ರುದ್ದೀನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮೂಲ್ಕಿ ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಸುನಿಲ್ ಆಳ್ವ, ಮಾಜಿ ಅಧ್ಯಕ್ಷ ಬಿ.ಎಣ.ಆಸಿಫ್, ಮಂಗಳೂರಿನ ಉದ್ಯಮಿ ಎಂ.ಕೆ.ಅಬ್ದುಲ್ ಖಾದರ್, ಜಿಡಿಎಸ್‌ನ ಉಡುಪಿ ಜಿಲ್ಲಾ ಕಾರ್ಯಾದ್ಯಕ್ಷ ಗುಲಾಂ ಮೊಹಮ್ಮದ್, ಮುನೀರ್ ಕಾರ್ನಾಡು, ಕಾರ್ನಾಡು ಮಸೀದಿಯ ಬಿ.ಎಚ್.ಮುಹ್ಮ್ಮದ್ ಮುಸ್ತಾಫ, ಕೆ.ಎಚ್.ನೂರ್ ಮಹಮ್ಮದ್, ಹಿಮಾಯುತುಲ್ ಇಸ್ಲಾಂ ಸಮಿತಿಯ ಅಧ್ಯಕ್ಷ ಪುತ್ತುಬಾವ, ಕಾರ್ಯದರ್ಶಿ, ಅಬ್ದುಲ್ ಹಮೀದ್ ಕಿಲ್ಪಾಡಿ, ಸದಸ್ಯರು ಹಾಜರಿದ್ದರು.ಅಬೂಬಕರ್ ಸ್ವಾಹತಿಸಿದರು, ಅಬ್ದುಲ್ ರೆಹಮಾನ್ ನಿರೂಪಿಸಿದರು.

Puneethakrishna

Mulki-16031503

Comments

comments

Comments are closed.

Read previous post:
Mulki-16031502
ಶ್ರೀ ಧೂಮಾವತಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಮೂಲ್ಕಿ: ಇತಿಹಾಸ ಪ್ರಸಿದ್ದ ಅತಿಕಾರಿಬೆಟ್ಟುವಿನ ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. Puneethakrishna

Close