ತುಳುನಾಡಿನ ಸಂಸ್ಕೃತಿ ಉಳಿಸಿ ಬೆಳೆಸಲು ಕರೆ

ಮೂಲ್ಕಿ: ತುಳುನಾಡಿನಲ್ಲಿ ನಮ್ಮ ಹಿರಿಯರು ನಂಬಿಕೊಂಡು ಬಂದ ದೈವಗಳನ್ನು ಇಂದಿಗೂ ನಾವು ನಂಬಿದ್ದೇವೆ. ಇದರಿಂದಾಗಿಯೇ ಜನರು ಇಂದಿಗೂ ದೇವಸ್ಥಾನದ ಜೀರ್ಣೋದ್ದಾರ,ಬ್ರಹ್ಮಕಲಶ ಮತ್ತು ನಾಗಮಂಡಲದಂತಹ ದೇವತಾರಾಧನೆ ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಗಳ ಬಗ್ಗೆ ಲೇಖಕ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ತಮ್ಮ ‘ಮದಿಪು’ ಪುಸ್ತಕದಲ್ಲಿ ಚೆನ್ನಾಗಿ ಮೂಡಿಬಂದಿದೆ.ಇದರಂತೆ ತುಳುನಾಡಿನ ಸಂಸ್ಕೃತಿ ಉಳಿಸಿ ಬೆಳೆಸಲು ಯುವಕರು ಅರಿವು ಮೂಡಿಸಬೇಕು ಎಂದು ಮಾಜೀ ಸಚಿವ ಅಮರನಾಥ ಶೆಟ್ಟಿ ಹೇಳಿದರು. ಅವರು ಮೂಲ್ಕಿ ಸಮೀಪದ ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಲೇಖಕ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಬರೆದ ಮದಿಪು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಗುತ್ತಿನಾರ್ ಜಯರಾಮ ಶೆಟ್ಟಿ ವಹಿಸಿದ್ದರು.
ಈ ಸಂಧರ್ಭ ಕವಿ ಗಣೇಶ ಕೊಲೆಕಾಡಿ, ವಿಜಿತ್ ಟಿ ಶೆಟ್ಟಿ ಪುತ್ತೂರ ಬಾಳಿಕೆಮನೆ, ವಿಜಯ ಶೆಟ್ಟಿ ಪುತ್ತೂರಬಾವ, ವಿ.ಕೆ ಶೆಟ್ಟಿ ಬೆಂಗಳೂರು, ರಾಮದಾಸ ಶೆಟ್ಟಿ ಬಾಳಿಕೆಮನೆ, ಬಾಬಾ ರಂಜನ್ ಶೆಟ್ಟಿ ಮಜಲಗುತ್ತು, ಪುಷ್ಪರಾಜ ಶೆಟ್ಟಿ ಮಜಲಗುತ್ತು, ಜನಾನಂದ ಶೆಟ್ಟಿ ತಿಂಗೊಳೆಮನೆ. ರಂಗನಾಥ ಶೆಟ್ಟಿ, ಉತ್ತಮ್ ಕುಮಾರ್ ಮೈಲೊಟ್ಟು ಮತ್ತಿತರರು ಉಪಸ್ಥಿತರಿದ್ದರು.
ಲೇಖಕ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಸ್ವಾಗತಿಸಿದರು ದಯಾನಂದ ಮಟ್ಟು ಕಾರ‍್ಯಕ್ರಮ ನಿರ್ವಹಿಸಿದರು.

Puneethakrishna  

Mulki-16031501

Comments

comments

Comments are closed.