ಐಕಳ ಪೊಂಪೈ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ವೇಗ ತಡೆ ಹಾಗೂ ರಸ್ತೆಯಲ್ಲಿ ವೇಗ ಮಿತಿ ಫಲಕ ಅಳವಡಿಸಬೇಕು ಮತ್ತು ಅಗಲ ಕಿರಿದಾದ ಕಾಲೇಜು ರಸ್ತೆಯಲ್ಲಿ ವಿಪರೀತ ವೇಗವಾಗಿ ಹೋಗುವ ವಾಹನಗಳ ಮೇಲೆ ಕಡಿವಾಣ ಹಾಕಿ ಪೋಲೀಸರು ಹಾಗೂ ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳೊಂದಿಗೆ ಮಂಗಳವಾರ ಸ್ನಾತಕ ಮತ್ತು ಸ್ನಾತಕೋತ್ತರ ಪೊಂಪೈ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನಿಂದ ಮೂರುಕಾವೇರಿ ಬಸ್ಸು ನಿಲ್ದಾಣದ ವರೆಗೆ ಶಾಂತಿಯುತ ಪ್ರತಿಭಟನೆ ಹಾಗೂ ಜಾಥ ನಡೆಸಿದರು.
ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಸಾಲಿಯಾನ್ ಅವರಲ್ಲಿ ಮನವಿ ನೀಡುವ ಮೂಲಕ ಶಾಂತಿಯುತ ಪ್ರತಿಭಟನೆ ಹಾಗೂ ಜಾಥಾ ಪ್ರಾರಂಭಗೊಂಡಿತು.
ಮಾರ್ಚ್ 11ರಂದು ಐಕಳ ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿರುವಾಗ ಅತೀವೇಗ ಮತ್ತು ಅಜಾಗರುಕತೆಯಿಂದ ಬಂದ ಅಮ್ನಿ ಮಾರುತಿ ವಾಹನ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೋಡೆದು ಪರಾರಿಯಾಗಿತ್ತು, ಅಫಘಾತದಲ್ಲಿ ತೀವ್ರ ಗಾಯಗೊಂಡಿರುವ ವಿದ್ಯಾರ್ಥಿನಿ ಈಗ ಚೇತರಿಸಿಕೊಳ್ಳುತ್ತಿದ್ದು ಅಪಾಯದಿಂದ ಪಾರಾಗಿದ್ದಾಳೆ. ನಾಪತ್ತೆಯಾದ ವಾಹನದ ಸುಳಿವಿನ ಬಗ್ಗೆ, ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ವೇಗ ಚಾಲನೆಯ ವಿರುದ್ದ ಶಾಂತ ರೀತಿಯ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.
ಈ ಹಿಂದೆ ಕಾಲೇಜು ಮುಂಬಾಗದ ರಸ್ತೆಯಲ್ಲಿ ವೇಗ ತಡೆ ಇದ್ದು ಮರು ಡಾಮಾರೀಕರಣದ ನಂತರ ಅದನ್ನು ತೆಗೆಯಲಾಗಿದ್ದು ಈ ಬಗ್ಗೆ ಐಕಳ ಪಂಚಾಯಿತಿಗೆ ಹಲವಾರು ಬಾರಿ ಮನವಿ ನೀಡಿದ್ದೇವೆ. ಮೆನ್ನಬೆಟ್ಟು ಕಿನ್ನಿಗೋಳಿ ಮತ್ತು ಇತರ ಪಂಚಾಯಿತಿಗಳು ತಮ್ಮ ವತಿಯಿಂದ ಜನನಿಬಿಡ ಪ್ರದೇಶಗಳಲ್ಲಿ ಸಿ,ಸಿ ಕ್ಯಾಮರಗಳನ್ನು ಅಳವಡಿಸಿದರೆ ದುರ್ಘಟನೆಯನ್ನು ತಡೆಯಬಹುದು ಮಾತ್ರವಲ್ಲ ಅಪಘಾತ ನಡೆಸಿದವರ ಗುರುತು ಪತ್ತೆಯಾಗಬಹುದು. ವೇಗ ತಡೆ ಇಲ್ಲದಿರುವ ಕಾರಣ ಅದನ್ನು ನಿರ್ಮಿಸುವಂತೆ ಪ್ರತಿಭಟನಾಗಾರರು ಒತ್ತಾಯಿಸಿದರು.
ನಂತರ ಮಾತನಾಡಿದ ಪಂಚಾಯಿತಿ ಅಧ್ಯಕ್ಷೆ ಪ್ರಸ್ತುತ ಈ ರಸ್ತೆಯು ರಾಜ್ಯ ಹೆದ್ದಾರಿಯಾದುದರಿಂದ ರಸ್ತೆ ತಡೆ ನಿರ್ಮಿಸುವ ಅವಕಾಶ ಪಂಚಾಯಿತಿಗೆ ಇರುವುದಿಲ್ಲ ಆದರೆ ಎಚ್ಚರಿಕೆ ಫಲಕವನ್ನು ಹಾಕುತ್ತೇವೆ ಎಂದರು.

Kinnigoli-17031503

Kinnigoli-17031504

Kinnigoli-17031505

Kinnigoli-17031506

Kinnigoli-17031507

Kinnigoli-17031508

Kinnigoli-17031509

Kinnigoli-17031510

Kinnigoli-17031511

Comments

comments

Comments are closed.

Read previous post:
Kinnigoli-17031502
ಪಂಜ ವಿಶ್ವ ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ್ ಮಂಗಳೂರು ಯುವ ಜನ ವಿಕಾಸ ಕೇಂದ್ರ ನವಜ್ಯೋತಿ ಮಹಿಳಾ ಮಂಡಲ...

Close