ಕಿಲೆಂಜೂರು ಕಡಪು ತೂಗು ಸೇತುವೆ ಜಾಗ ಪರಿಶೀಲನೆ

ಕಿನ್ನಿಗೋಳಿ : ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಮೊದಲು 1 ಕೋಟಿ ಅನುದಾನ ಸಿಗುತ್ತಿದ್ದು ಇದೀಗ 2015-16ರ ಅನುದಾನದಲ್ಲಿ 10 ಕೋಟಿ ರೂ ಗಳನ್ನು ಮೀಸಲಿರಿಸಲಾಗುದೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಜೆಟಿನಲ್ಲಿ ಹೇಳಿರುವರು. ಹಾಗಾಗಿ ಅಗತ್ಯವಿರುವ ನದಿ, ಹೊಳೆ ತಟಗಳಲ್ಲಿರುವ ಜನರ ಸಂಪರ್ಕಗಾಗಿ 10ಕ್ಕೂ ಮಿಕ್ಕಿ ತೊಗುಸೇತುವೆಗಳ ಸೌಲಭ್ಯ ಮತ್ತು ಉತ್ತಮ ದರ್ಜೆಯ ಮೀನು ಮಾರುಕಟ್ಟೆಗಳ ನಿರ್ಮಾಣವಾಗಲಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ತಿಳಿಸಿದರು.
ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರು ಕಡುಪು ಬಳಿ ನಂದಿನಿ ನದಿಗೆ ತೂಗು ಸೇತುವೆ ನಿರ್ಮಾಣದ ಸ್ಥಳ ಪರಿಶೀಲನೆಗಾಗಿ ಗುರುವಾರ ಆಗಮಿಸಿ ಮಾಧ್ಯಮದವರಿಗೆ ಮಾಹಿತಿ ನೀಡಿದರು.
48 ಲಕ್ಷರೂ ವೆಚ್ಚದಲ್ಲಿ ಕಿಲೆಂಜೂರಿನಲ್ಲಿ ತೂಗು ಸೇತುವೆ
2011ರಲ್ಲಿ ಕಿಲೆಂಜೂರು ಕಡುಪು-ಸೂರಿಂಜೆಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆಯ ಪ್ರಸ್ತಾವನೆ ಕಳುಹಿಸಲಾಗಿದ್ದು ಇದೀಗ ಜಾಗ ಪರಿಶೀಲನೆ ಈಗಿನ ಅಂದಾಜು ವೆಚ್ಚದ ಬಗ್ಗೆ ಯೋಜನಾ ಪಟ್ಟಿ ತಯಾರಿಸಿ ಆದ್ಯತೆ ಮುಖಾಂತರ ಶೀಘ್ರದಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.
ದ. ಕ. ಉಡುಪಿ, ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸ್ತಾವನೆಯಲ್ಲಿರುವ ಹಾಗೂ ಬಾಕಿ ಉಳಿದ ಕಾಮಗಾರಿ ಯೋಜನೆಗಳನ್ನು ಕೈಗೆತ್ತಿ ಕೊಳ್ಳಲಾಗುವುದು. ಸುಳ್ಯ ತಾಲೂಕಿನ ಗುತ್ತಿಗಾರು, ಸುಬ್ರಹ್ಮಣ್ಯ ಕ್ರಾಸ್ ರಸ್ತೆ, ಬಂಟ್ವಾಳ ತಾಲೂಕಿನ ಕುಪ್ಪೆಪದವು ಮುತ್ತೂರು ಗ್ರಾಮದ ಬಳಿ ತೂಗು ಸೇತುವೆ ಶೀಘ್ರ ನಿರ್ಮಾಣವಾಗಲಿದೆ.
ಈ ಸಂದರ್ಭ ಕರಾವಳಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಸಲಹೆಗಾರ ಭಾಸ್ಕರ ಶೆಟ್ಟಿ , ನಾಗರಾಜ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಪಿಡಿಓ ಪ್ರಕಾಶ್ ಉಪಸ್ಥಿತರಿದ್ದರು.

Kinnigoli-20031502

Comments

comments

Comments are closed.

Read previous post:
Kinnigoli-20031501
ಪಿಂಚಣಿದಾರರ ಸಮಾವೇಶ

ಮೂಲ್ಕಿ: ಹಿರಿಯ ನಾಗರೀಕರ ಬಗ್ಗೆ ಗೌರವಾಭಿಮಾನ ಬೆಳೆಸಿಕೊಳ್ಳುವ ಮೂಲಕ ಅವರು ಸಮಾಜಕ್ಕೆ ನೀಡಿದ ಸೇವೆಯನ್ನು ಗೌರವಿಸುವುದು ನಮ್ಮ ಅಧ್ಯ ಕರ್ತವ್ಯವಾಗಬೇಕು ಎಂದು ವಿಜಯಾ ಬ್ಯಾಂಕ್ ಡಿಜಿಎಂ ಉದಯ...

Close