ಪಿಂಚಣಿದಾರರ ಸಮಾವೇಶ

ಮೂಲ್ಕಿ: ಹಿರಿಯ ನಾಗರೀಕರ ಬಗ್ಗೆ ಗೌರವಾಭಿಮಾನ ಬೆಳೆಸಿಕೊಳ್ಳುವ ಮೂಲಕ ಅವರು ಸಮಾಜಕ್ಕೆ ನೀಡಿದ ಸೇವೆಯನ್ನು ಗೌರವಿಸುವುದು ನಮ್ಮ ಅಧ್ಯ ಕರ್ತವ್ಯವಾಗಬೇಕು ಎಂದು ವಿಜಯಾ ಬ್ಯಾಂಕ್ ಡಿಜಿಎಂ ಉದಯ ಕುಮಾರ್ ಶೆಟ್ಟಿ ಹೇಳಿದರು.
ಮೂಲ್ಕಿ ವಿಜಯಾ ಬ್ಯಾಂಕಿಗೆ ಗುರುವಾರ ಅಧೀಕೃತ ಭೇಟಿ ನೀಡಿದ ಸಂದರ್ಭ ಬ್ಯಾಂಕಿನ ಸಂಸ್ಥಾಪಕರಾದ ಮೂಲ್ಕಿ ಸುಂದರರಾಮ ಶೆಟ್ಟಿಯವರ ಪುತ್ತಳಿಗೆ ಮಾಲಾರ್ಪಣೆ ನಡೆಸಿ ಬಳಿಕ ನಡೆದ ಪಿಂಚಣಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್ ಪಿಬ್ಬಂದಿಗಳಿಗೆ ಮಾಹಿತಿಯ ಕೊರತೆ ಹಾಗೂ ಅತೀ ಒತ್ತಡದ ಕಾರ್ಯ ಪ್ರವೃತ್ತಿಯಿಂದ ಪಿಂಚಣಿದಾರರ ಸವಲತ್ತುಗಳನ್ನು ವಿತರಿಸಲು ವಿಳಂಬವಾಗುವುದು ಗಮನಕ್ಕೆ ಬಂದಿದ್ದು ಸಿಬ್ಬಂದಿಗಳು ಈ ಬಗ್ಗೆ ಮಾಹಿತಿ ಪಡೆದುಕೊಂಡು ಪಿಂಚಣಿದಾರರಿಗೆ ಆದ್ಯತೆಯ ಸೇವೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಬ್ಯಾಂಕ್ ನಿವೃತ್ತ ಜಿಎಂ ಎ.ಡಿ ಪೂಂಜಾ ವಹಿಸಿದ್ದರು.
ಸುಕುಮಾರ ಶೆಟ್ಟಿಯವರು ಮೂಲ್ಕಿ ಸುಂದರರಾಮ ಶೆಟ್ಟಿಯವರ ಜನ್ಮ ಶತಮಾನೋತ್ಸವ ಆಚರಣೆಯನ್ನು ಮೂಲ್ಕಿಯಲ್ಲಿ ನಡೆಸುವ ಬಗ್ಗೆ ಮಾಹಿತಿ ನೀಡಿದರು.
ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ನಿವೃತ್ತ ಸಿಬ್ಬಂದಿಗಳಾದ ಎನ್.ಪಿ.ಶೆಟ್ಟಿ, ದೇವದಾಸ ರಾವ್, ಮೂಲ್ಕಿ ಪಟ್ಟಣ ಪಂಚಾಯತಿ ನಿವೃತ್ತ ಮುಖ್ಯಾಧಿಕಾರಿ ಹರಿಶ್ಚಂದ್ರ.ಪಿ.ಸಾಲ್ಯಾನ್, ನಿವೃತ್ತ ಮುಖ್ಯೋಪಾದ್ಯಾಯ ರವಿರಾಜ ಶೆಟ್ಟಿ ಮಾತನಾಡಿದರು.
ಬ್ಯಾಂಕ್ ಹಿರಿಯ ಪ್ರಭಂದಕರಾದ ಭುವನಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಉಪ ಪ್ರಭಂದಕರಾದ ಮಾಧುರಿ ಎಸ್ ವಂದಿಸಿದರು.

Bhagyawan Sanil

Kinnigoli-20031501

Comments

comments

Comments are closed.

Read previous post:
Kinnigoli-17031513
ಕೆಮ್ರಾಲ್ ಶ್ರೀ ಬ್ರಹ್ಮರ ಗೋಳಿಕಟ್ಟೆ ಲೋಕಾರ್ಪಣೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ಆವರಣದ ಒಳಗಿರುವ ಶ್ರೀ ಬ್ರಹ್ಮರ ಗೋಳಿಕಟ್ಟೆಯು ಜೀರ್ಣಾದ್ಧಾರಗೊಂಡು ಮಂಗಳವಾರ ಶ್ರೀ ಕೋರ‍್ದಬ್ಬು, ಶ್ರೀ ಧೂಮವತಿ ದೈವಗಳ ದರ್ಶನದೊಂದಿಗೆ ಲೋಕಾರ್ಪಣೆಗೊಂಡಿತು. ಈ ಸಂದರ್ಭ...

Close