ಆದಿಧನ್ ಪೂರ್ವಿ ವಾಣಿಜ್ಯ ಸಂಕಿರ್ಣ ಭೂಮಿ ಪೂಜೆ

ಕಟೀಲು: ಕೆಂಜಾರ್ ವಿಮಾನ ನಿಲ್ದಾಣದಿಂದ 100 ಮೀಟರ್ ದೂರದಲ್ಲಿ, ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ಹತ್ತಿರ ಆದಿಧನ್ ಪೂರ್ವಿ ಹೆಸರಿನ 5 ಅಂತಸ್ಥಿನ ವಾಣಿಜ್ಯ ಸಂಕಿರ್ಣ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮವು ಸೋಮವಾರದಂದು ವಿ.ಎಲ್ ಬಿಲ್ಡ್‌ರ‍್ಸ್ ಸಂಸ್ಥೆಯ ಪಾಲುದಾರರ ಮುಂದಾಳತ್ವದಲ್ಲಿ ನಡೆಯಿತು.

ಮುಖ್ಯವಾಗಿ ವಿ.ಎಲ್ ಬಿಲ್ಡ್‌ರ‍್ಸ್ ಸಂಸ್ಥೆಯ ಆದಿತ್ಯ ಶೆಟ್ಟಿ, ಧನಂಜಯ ರೈ, ಕಿರಣ್ ಶೆಟ್ಟಿ, ಈ ಕಟ್ಟಡದ ಮುಖ್ಯ ಪಾಲುದಾರರಾಗಿದ್ದು ಇದು ವಿ ಎಲ್ ಬಿಲ್ಡ್‌ರ‍್ಸ್ ಸಂಸ್ಥೆಯ 2 ನೇ ಪೊಜೆಕ್ಟ್ ಆಗಿದೆ. ಸಂಸ್ಥೆಯು ಈ ಪ್ರೋಜೆಕ್ಟ್ ನಲ್ಲಿ ೫ ಅಂತಸ್ತಿನ,31 ಫ್ಲಾಟ್ ಒಳಗೊಂಡ ಆದಿಧನ್ ಪೂರ್ವಿ ಹೆಸರಿನ ನಿರ್ಮಾಣದ ಕಟ್ಟಡವು ಒಂದುವರೆ ವರ್ಷದಲ್ಲಿ ಲೋಕಾರ್ಪಣೆಯಾಗಲಿದೆ. ಈ ಕಟ್ಟಡವು ಮಂಗಳೂರು ವಿಮಾನ ನಿಲ್ದಾಣ, ಮರವೂರು ರೈಲ್ವೆ ನಿಲ್ದಾಣ, ಸ್ಮಾರ್ಟ್ ಸಿಟಿ ಹಾಗೂ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜುಗೆ ಹತ್ತಿರದಲ್ಲಿರುವುದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಆದಿತ್ಯ ಶೆಟ್ಟಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್, ದೇವ ಪ್ರಸಾದ್ ಪುನರೂರ್, ಜಯರಾಮ್ ಮುಕಾಲ್ದಿ, ದೇವಿ ಪ್ರಸಾದ್ ಶೆಟ್ಟಿ ಕೊಡೆತ್ತೂರ್, ಹಾಗೂ ಸಂಸ್ಥೆಯ ಪಾಲುದಾರರಾದ ಆದಿತ್ಯ ಶೆಟ್ಟಿ ಎಕ್ಕಾರು, ಕಿರಣ್ ಶೆಟ್ಟಿ, ದನಂಜಯ ರೈ ಎಕ್ಕಾರು ಉಪಸ್ಥಿತರಿದ್ದರು.

 

Kateel-21031501

Comments

comments

Comments are closed.

Read previous post:
Kinnigoli-20031502
ಕಿಲೆಂಜೂರು ಕಡಪು ತೂಗು ಸೇತುವೆ ಜಾಗ ಪರಿಶೀಲನೆ

ಕಿನ್ನಿಗೋಳಿ : ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಮೊದಲು 1 ಕೋಟಿ ಅನುದಾನ ಸಿಗುತ್ತಿದ್ದು ಇದೀಗ 2015-16ರ ಅನುದಾನದಲ್ಲಿ 10 ಕೋಟಿ ರೂ ಗಳನ್ನು ಮೀಸಲಿರಿಸಲಾಗುದೆಂದು ಮುಖ್ಯ ಮಂತ್ರಿ...

Close