ಬಳ್ಕುಂಜೆ ರಾಜೀವ್ ಗಾಂಧಿ ಸೇವಾ ಕೇಂದ್ರ

ಕಿನ್ನಿಗೋಳಿ : ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಮಸಕಟ್ಟೆ-ಬಳ್ಕುಂಜೆ ರಸ್ತೆ ಮತ್ತು ಕಾಂತಬಾರೆ -ಬೂದಬಾರೆ ಜನ್ಮಕ್ಷೇತ್ರದ ರಸ್ತೆಯನ್ನು ಅಭಿವದ್ಧಿ ಪಡಿಸಲಾಗುವುದು. ಮಟ್ಟುವಿನಲ್ಲಿ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿ ನೀರಾವರಿಗೆ ಉಪಯೋಗವಾಗುವ ಅಣೆಕಟ್ಟು ನಿರ್ಮಾಣವಾಗಲಿದೆ ಎಂದು ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಭಾನುವಾರ ಬಳ್ಕುಂಜೆ ಗ್ರಾಮ ಪಂಚಾಯಿತಿಯಲ್ಲಿ 11 ಲಕ್ಷರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಂಚಾಯತ್ ರಾಜೀವ್ ಗಾಂಧಿ ಸೇವಾ ಕೆಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಸಭಾಭವನದ ಹೊರಾಂಗಣಕ್ಕೆ ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಿಂದ 1 ಲಕ್ಷ ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಪಂಚಾಯತ್ ಸಮುದಾಯ ಅಭಿವೃದ್ಧಿ ಯೋಜನೆಯಡಿಯಲ್ಲಿ ನಾಗೇಶ್ ಸನತ್ ಗಣೇಶ್ ಶೆಟ್ಟಿ ಅವರಿಗೆ ಅಂಗವಿಕಲರ ಗಾಲಿ ಕುರ್ಚಿಗಳನ್ನು ವಿತರಿಸಿ ಮುಂದಿನ ಹಂತದಲ್ಲಿ ಮುಲ್ಕಿಯಲ್ಲಿ ಜನಸಂಪರ್ಕ ಸಭೆ ನಡೆಸಿ ಗ್ರಾ. ಪಂ. ವ್ಯಾಪ್ತಿಯ ಅಂಗವಿಕಲರು ಮತ್ತು ವಿಕಲಚೇತನರಿಗೆ ಮಾಸಾಶನ ನೀಡುವ ಯೋಜನೆ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು.
ಬಳ್ಕುಂಜೆ ಗ್ರಾ. ಪಂ. ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜಲಜ, ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾ. ಪಂ. ಸದಸ್ಯ ನೆಲ್ಸನ್ ಲೋಬೊ, ಪಂಚಾಯತ್ ರಾಜ್ ಅಭಿಯಂತರ ಪ್ರಶಾಂತ್ ಆಳ್ವ, ತಾ. ಪಂ. ಸಹಾಯಕ ನಿರ್ದೇಶಕ ಲೋಕನಾಥ್, ಉದ್ಯಮಿ ಸೈಯದ್ ಕರ್ನಿರೆ, ಉಪಸ್ಥಿತರಿದ್ದರು.
ಬಳ್ಕುಂಜೆ ಪಿಡಿಒ ಜಲಜ ಟಿ ಸ್ವಾಗತಿಸಿದರು. ಕಾರ್ಯದರ್ಶಿ ನಾರಾಯಣ ಮೂಲ್ಯ ವಂದಿಸಿದರು. ರಾಜೇಂದ್ರ ಭಟ್ ಇನ್ನಾ ಕಾರ್ಯಕ್ರಮ ನಿರೂಪಿಸಿದರು.

Kinnigoli-22031503 Kinnigoli-22031504 Kinnigoli-22031505 Kinnigoli-22031506 Kinnigoli-22031507 Kinnigoli-22031508Kinnigoli-22031510

Comments

comments

Comments are closed.

Read previous post:
ಡಿ.ಕೆ. ರವಿ ರಾಜಕೀಯ ಒತ್ತಡಕ್ಕೆ ಬಲಿ

ಕಿನ್ನಿಗೋಳಿ : ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಆಡಳಿತ ವೈಫಲ್ಯ ಕಂಡು ಬರುತ್ತಿದೆ. ಡಿ. ಕೆ. ರವಿ ಯಂತಹ ದಕ್ಷ ಪ್ರಾಮಾಣಿಕ...

Close