ಆಧಾರ್ ನೋಂದಣಿಗೆ ಸಿಬ್ಬಂಧಿಯೇ ಇಲ್ಲ

ಮುಲ್ಕಿ : ಕಳೆದೆರಡು ವರ್ಷಗಳಿಂದ ಜನ ಸಾಮಾನ್ಯರಿಗೆ ತಲೆ ನೋವಾಗಿ ಪರಿಣಮಿಸಿದ ಆದಾರ್ ಕಾರ್ಡ್ ಗೊಂದಲ ಇನ್ನೂ ಸರಿಯಾಗುವ ಲಕ್ಷಣ ಗೋಚರಿಸುದಿಲ್ಲ ಇತ್ತೀಚೆಗೆ ಸುಪ್ರೀಮ್ ಕೋರ್ಟ್ ಸರಕಾರಿ ಯೋಜನೆಗಳಿಗೆ ಆದಾರ್ ಕಡ್ದಾಯವಲ್ಲ ಎಂದು ಹೇಳಿದರೂ ಕೆಲವು ಸರಕಾರಿ ಮತ್ತು ಖಾಸಗಿ ಕಛೇರಿಗಳಲ್ಲಿ ಆಧಾರ್ ಕಾರ್ಡ್ ಕೇಳುವುದು ಸರ್ವೆ ಸಾಮಾನ್ಯವಾಗಿದೆ ’
ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಆಧಾರ್ ಕಾರ್ಡ್ ನೋಂದಣಿಯ ಉದ್ದೇಶ ದಿಂದ ಸರಕಾರ ಹೋಬಳಿ ಮಟ್ಟದಲ್ಲಿ ಆಧಾರ್ ನೋಂದಣಿ ಕೇಂದ್ರವನ್ನು ತೆರೆದಿದೆ ಆದರೆ ಈಗ ಸಮಸ್ಯೆಗಳನ್ನು ಎದುರಿಸಬೇಕಾದುದು ಜನ ಸ್ನೇಹೀ ಕೇಂದ್ರದ ಸಿಬ್ಬಂದಿಗಳು, ಮುಲ್ಕಿ ಹೋಬಳಿಯ ನಾಗರಿಕರಿಗೆ ಮುಲ್ಕಿ ನಾಡ ಕಚೇರಿಯಲ್ಲಿನ ಜನಸ್ನೇಹಿ ಕೇಂದ್ರದಲ್ಲಿ ನೋಂದಣಿ ಪ್ರಾರಂಭವಾಗಿದೆ ಸರಕಾರ ಆಧಾರ್ ನೊಂದಣಿಗೆ ಬೇಕಾದ ಕಂಪ್ಯೂಟರ್ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಒದಗಿಸಿದರೂ, ಇದಕ್ಕೆ ಬೇಕಾದ ಸಿಬ್ಬಂಧಿಯನ್ನು ಒದಗಿಸದೆ ಜನಸ್ನೇಹಿ ಕೇಂದ್ರದಲ್ಲಿನ ಸಿಬ್ಬಂದಿಯೇ ಇಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ, ಜನಸ್ನೇಹಿ ಕೇಂದ್ರದಲ್ಲಿ ಪಹಣಿ ಪತ್ರಿಕೆ, ಆದಾಯ ದ್ರಡೀಕರಣ ಪತ್ರ, ವಿಧಾವಾ ವೇತನ ಸಂದ್ಯಾ ಸುರಕ್ಷ ವೇತನ ಜಾತಿ ಧೃಡಿಕರಣ ಪತ್ರ ಮುಂತಾದ ಸೇವೆಗಳು ಲಭ್ಯವಿದ್ದು ಇದಕ್ಕಾಗಿ ನೂರಾರು ಮಂದಿ ಆಗಮಿಸುತಿರುತ್ತಾರೆ, ಎಲ್ಲಾ ಕೆಲಸಗಳಿಗೆ ಈಗ ಒಬ್ಬರೇ ಸಿಬ್ಬಂದಿ ಇದ್ದು ಸಾಕಷ್ಟು ಒತ್ತಡಗಳಿವೆ ಅದರೊಟ್ಟಿಗೆ ಈಗ ಆದಾರ್ ಕಾರ್ಡ್ ನೋಂದಣಿಯೂ ಇದೇ ಸಿಬಂದಿ ಮಾಡ ಬೇಕಾದ ಅನಿವಾರ್ಯತೆ ಒದಗಿದೆ.
ಸಿಬ್ಬಂದಿಗಳ ಕೊರತೆಯಿಂದ ಹೈರಾಣಾಗುತ್ತಿರುವ ಜನತೆ
ಮುಲ್ಕಿಯ ನೋಂದಣಿ ಕೇಂದ್ರಕ್ಕೆ ಪ್ರತಿದಿನ ಹೋಬಳಿಯ 32 ಗ್ರಾಮಗಳ ನೂರಾರು ಜನರು ನೋಂದಣಿಗೆ ಆಗಮಿಸುತ್ತಿದ್ದಾರೆ, ಬೆಳಿಗ್ಗೆ ಸುಮಾರು 7-8 ಗಂಟೆಯ ಸುಮಾರಿಗೆ ಇಲ್ಲಿ ಸರಧಿಗಾಗಿ ಕಾಯುತ್ತಾರೆ ಆದರೆ ದಿನಕ್ಕೆ ಸುಮಾರು 30 ರಷ್ಟು ನೋಂದಣಿವಾಗುತ್ತಿದ್ದು ಅದಕ್ಕಾಗಿ ಪ್ರತೀದಿನ 30 ಜನರಿಗೆ ಮಾತ್ರ ನೋಂದಣಿಗಾಗಿ ಟೊಕನ್ ನೀಡಲಾಗುತ್ತದೆ,ನೂರಾರು ಕೆಲಸದ ಒತ್ತಡಗಳ ಮದ್ಯೆ ಆದಾರ್ ನೊಂದಣಿ ಕಾರ್ಯ ಅಲ್ಲಿನ ಸಿಬಂದಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ ಇದು ಕೇವಲ ಮುಲ್ಕಿಯಲ್ಲಿನ ಸಮಸ್ಯೆ ಮಾತ್ರವಲ್ಲ ಎಲ್ಲಾ ಹೊಸ ನೋಂದಣಿ ಕೇಂದ್ರದಲ್ಲೂ ಇದೇ ಸಮಸ್ಯೆ ಆಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಅತಂತ್ರ ಕಟ್ಟಡದಲ್ಲಿ ನಾಡಕಛೇರಿ
ಕಳೆದ ಕೆಲ ತಿಂಗಳ ಹಿಂದೆ ಇಲ್ಲಿನ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದರೂ ನೂತನ ಕಟ್ಟಡದ ವ್ಯವಸ್ಥೆ ಇನ್ನೂ ಆಗಿಲ್ಲ. ಈಗ ಇದ್ದ ಕಟ್ಟಡವನ್ನೇ ತೇಪೆ ಹಾಕಿ ಸರಿ ಮಾಡುತ್ತಿದ್ದು ಕಾಮಗಾರಿ ಅವ್ಯವಸ್ಥೆಯಿಂದ ಜನಸಾಮಾನ್ಯರು ಬವಣೆ ಪಡುತ್ತಿದ್ದಾರೆ. ಈ ರಸ್ತೆಯು ಇತಿಹಾಸ ಪ್ರಸಿದ್ದ ಬಪ್ಪನಾಡು ದೇವಸ್ಥಾನಕ್ಕೆ ಹೋಗುವ ರಸ್ತೆಯಾಗಿದೆ.ಇದರಿಂದ ವಾಹನಗಳು ಅಪಾಯದಿಂದಲೇ ಸಂಚರಿಸುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಮೂಲ್ಕಿ ನಾಡಕಛೇರಿಯನ್ನು ನೂತನಕಟ್ಟಡಕ್ಕೆ ಸ್ಥಳಾಂತರಿಸಲು ಪ್ರಯತ್ನ ಮಾಡಿ ಜನಸಾಮಾನ್ಯರ ತೊಂದರೆ ನಿವಾರಿಸಬೇಕಿದೆ.

Punnethakrishna

Mulki-22031501

Comments

comments

Comments are closed.