ಶಾಂಭವಿ ಜೇಸಿಐ 2015 ಪದಗ್ರಹಣ ಸಮಾರಂಭ

ಮುಲ್ಕಿ : ಜೇಸಿಐ ಸಂಸ್ಥೆಯು ತರಬೇತಿ ಕಾರ್ಯಕ್ರಮದ ಮೂಲಕ ವ್ಯಕ್ತಿತ್ವ ವಿಕಸನವನ್ನು ಗೊಳಿಸುವ ಕಾರ್ಯ ಮಾಡುತ್ತಿದ್ದು ಮೂಲ್ಕಿ ನಗರ ಪಂಚಾಯತ್ ಸ್ವಚ್ಚ ನಗರ ಸೇರಿದಂತೆ ಹಲವಾರು ಯೋಜನಗಳನ್ನು ಹಮ್ಮಿಕೊಂಡಿದ್ದು ಜೇಸಿ ಸಂಸ್ಥೆಯು ಜೊತೆಗೂಡಿ ಸ್ವಚ್ಚ ನಗರ ಯೋಜನೆಯನ್ನು ಯಶಸ್ವಗೊಳಿಸಲು ಸಹಕರಿಸುವಂತೆ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ವಾಣಿ ಆಳ್ವ ಹೇಳಿದರು.
ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಜರಗಿದ ಮೂಲ್ಕಿ ಶಾಂಭವಿ ಜೇಸಿಐ ನ 2015 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮೂಲ್ಕಿ ಶಾಂಭವಿ ಜೇಸಿಐ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೇಸಿಐನ ವಲಯಾಧ್ಯಕ್ಷ ಕೃಷ್ಣ ಮೋಹನ್ ರವರು ಮೂಲ್ಕಿ ಶಾಂಭವಿ ಜೇಸಿಐನ ನೂತನ ಅಧ್ಯಕ್ಷ ವೇಣು ಗೋಪಾಲ್ ಶೆಟ್ಟಿ ಮತ್ತವರ ತಂಡದ ಪದಗ್ರಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜೇಸಿಐನ ರಾಷ್ತ್ರೀಯ ನಿರ್ದೇಕ ಸಂಪತ್ ಸುವರ್ಣ ಮತ್ತು ಯಕ್ಷಗಾಣ ಕಲಾವಿದ ಸುರೇಶ್ ಕೊಲಕಾಡಿಯವರನ್ನು ಸನ್ಮಾನಿಸಲಾಯಿತು .ಜೇಸಿಐನ ವಲಯ ಉಪಾಧ್ಯಕ್ಷ ಅನಿಲ್ ಕುಮಾರ್ ಜೇಸಿರೇಟ್ ಅಧ್ಯಕ್ಷೆ ಗೀತಾ ಜೆ ಹೆಗ್ಡೆ, ಜ್ಯೂನಿಯರ್ ಜೇಸಿ ಅಧ್ಯಕ್ಷ ಅಕ್ಷಯ ರಾಜ್ ಮತ್ತಿತರರು ಉಪಸ್ಥಿತರಿದ್ದರು

Prakash Suvarna

Mulki-22031505

Comments

comments

Comments are closed.

Read previous post:
Mulki-22031503
ಯುವ ಕೇಸರಿ ಸಂಗಮ-2015

ಮುಲ್ಕಿ : ಮುಲ್ಕಿಯ ಕೆ ಎಸ್ ರಾವ್ ನಗರದ ವೀರ ಕೇಸರಿ ತರುಣ ವೃಂದದ ಆಶ್ರಯದಲ್ಲಿ ೫ನೇ ವರ್ಷದ ಯುಗಾದಿ ಉತ್ಸವದ ಪ್ರಯುಕ್ತ ಯುವ ಕೇಸರಿ ಸಂಗಮ-2015...

Close