ಪಾವಂಜೆ ದೇವಾಡಿಗ ಸಮುದಾಯ ಭವನ

ಮೂಲ್ಕಿ: ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಸಮಾಜ ಸೇವಾ ಆಶೋತ್ತರಗಳ ಪೂರೈಕೆಯ ಸಲುವಾಗಿ ಸುಮಾರು1.5ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನಕ್ಕೆ ಮಾರ್ಚ್ 29ರಂದು ಹಳೆಯಂಗಡಿಯಲ್ಲಿ ಶಿಲಾನ್ಯಾಸ ನಡೆಯಲಿದೆ ಎಂದು ಕಟ್ಟಡ ಸಮಿತಿಯ ಅಧ್ಯಕ್ಷರಾದ ಪರಮೇಶ್ವರ್ ಪಿ. ಹೇಳಿದರು.
ಮೂಲ್ಕಿ ಸ್ವಾಗತ್ ಹೋಟೇಲಿನಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ದೇವಾಡಿಗ ಸಮುದಾಯದ ಜನರ ಆಶೋತ್ತರ ಈಡೇರಿಕೆಗಾಗಿ ಶತಮಾನದ ಹಿಂದೆ ರೂಪುಗೊಂಡ ದೇವಾಡಿಗ ಸಂಘಟನೆಯು ಮುಂದೆ ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ಎಂಬ ನಾಮಾಂಕಿತದಲ್ಲಿ ಪಾವಂಜೆ, ಹಳೆಯಂಗಡಿ , ಕೊಳುವೈಲು, ಸಸಿಹಿತ್ಲು, ಆರಂದು, ಖಂಡಿಗೆ, ಕರಿತೋಟ, ಪಡುಪಂಬೂರು, ಹೊಗೆಗುಡ್ಡೆ, ಬೆಳ್ಳಾಯರು, ಕೆರೆಕಾಡು, ತೋಕೂರು, ಕಿನ್ನಿಗೋಳಿ, ಪಕ್ಷಿಕೆರೆ, ಪಂಜ, ಕೊಕುಡೆ, ಕಟೀಲು ಮುಂತಾದ 16 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಸಮಾಜ ಬಾಂಧವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪುಸ್ತಕ, ವಿದ್ಯಾರ್ಥಿವೇತನ, ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರಗಳನ್ನು ನೀಡುತ್ತಾ ಬರುತ್ತಿದೆ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಸಮಾಜಬಾಂಧವರಿಗೆ ಆಕಸ್ಮಿಕ ಅನಾರೋಗ್ಯ ಅಪಫಾತಗಳ ಕಾಲದಲ್ಲಿ ಸಹಕರಿಸುತ್ತಾ ಬಂದಿರುತ್ತದೆ. ಆಈಕ ಬಡ ಸಾರ್ವಜನಿಕರಿಗೆ ಸಹಕಾರ ಮಾಡುವ ದ್ಯೇಯದೊಂದಿಗೆ ಸಮಾಜ ಭಾಂಧವರಿಗಾಗಿ ಸಮೂಹಿಕ ವಿವಾಹ ಯೋಜನೆ, ಕಡಿಮೆ ವೆಚ್ಚದಲ್ಲಿ ಧಾರ್ಮಿಕ,ಸಾಂಸ್ಕೃತಿಕ, ಕ್ವಟುಂಬಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವುದಕ್ಕಾಗಿ ಸಂಘವು ಹಳೆಯಂಗಡಿ ಚಿಲಿಂಬಿ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡ ಸಂಘದ ಸ್ವಂತ ಸ್ಥಳದಲ್ಲಿ ಸುಮಾರು೧.೫ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಅದರ ಶಿಲಾನ್ಯಾಸ ಸಮಾರಂಭವು ಮಾರ್ಚ್ 29 ನೇ ಆದಿತ್ಯವಾರ ಜರಗಲಿದ್ದು ಕೇಂದ್ರ ಸಚಿವರೂ ಹಾಗೂ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಡಾ. ಎಂ. ವೀರಪ್ಪ ಮೊಲಿಯವರು ಶಿಲಾನ್ಯಾಸ ಮಾಡಲಿದ್ದಾರೆ ಅಖಿಲಭಾರತ ವಿಶ್ವ ತುಳುಕೂಟ ಇದರ ಅಧ್ಯಕ್ಷರೂ ಧರ್ಮಪಾ ಯು.ದೇವಾಡಿಗರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಮಾರಂಭದಲ್ಲಿ ನಳಿನ್‌ಕುಮಾರ್ ಕಟೀಲು ದೀಪ ಪ್ರಜ್ವಲಿಸಲಿದ್ದಾರೆ ಕರ್ನಾಟಕ ಸರಕಾರದ ಕ್ರೀಡೆ ಮತ್ತು ಯುವಜನ ಸೇವಾ ಹಾಗೂ ಮೀನುಗಾರಿಕಾ ಸಚಿವರಾದ ಕೆ. ಅಭಯಚಂದ್ರ ಜೈನ್ ಕಟ್ಟಡದ ನೀಲಕಾಶೆ ಅನಾಚರಣ ಮಾಡಲಿದ್ದಾರೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಿ.ಎ ಮೊಹಿದ್ದೀನ್ ಬಾವರವರು ಮನವಿಪತ್ರ ಬಿಡುಗಡೆ ಮಾಡಲಿದ್ದಾರೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಾದ ಅರ್ಚಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣರವರು ಆಶೀರ್ವಚನ ಮಾಡಲಿದ್ದಾರೆ. ಸಮಾರಂಭದಲ್ಲಿ ಬಿಲ್ಲವ ಮಹಾಮಂಡಲದ ಅಧ್ಯಕ್ಷರೂ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಯ ಸಿ.ಸುವರ್ಣ, ದುಬೈ ದೇವಾಡಿಗರ ಸಂಘದ ಅಧ್ಯಕ್ಷರಾ ಹರೀಶ್ ಶೇರಿಗಾರ್, ಹಳೆಯಂಗಡಿ ಗ್ರಾ.ಪಂ ಅಧ್ಯಕ್ಷೆ ಪೂರ್ಣಿಮಾ ಮಧು, ಸುವರ್ಣ ನ್ಯೂಸ್ ಚಾಣೆಲ್ ಬೆಂಗಳೂರು ಇದರ ವಿಶೇಷ ಪ್ರತಿನಿಧಿ ವಿಜಯಲಕ್ಷ್ಮೀ ಶಿಬರೂರು ಮುಂಬಾಯಿ ದೇವಾಡಿಗ ಸಂಘದ ಅಧ್ಯಕ್ಷರಾದ ವಾಸು ಎಸ್.ದೇವಾಡಿಗ, ಮುಂಬಾಯಿ ದೇವಾಡಿಗರ ಸಂಘದ ಅದ್ಯಕ್ಷ ವಾಸು.ಎಸ್.ದೇವಾಡಿಗ, ಮಾಜಿ ಅಧ್ಯಕ್ಷ ಎಚ್.ಮೋಹನ ದಾಸ್,ಗೋಪಾಲ ಮೊಲಿ, ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ವಾಮನ ಮರೋಳಿ,ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಂಜದ ಗುತ್ತು ಶಾಂತಾರಾಮ ಶೆಟ್ಟಿ, ಸುರ್ಣೋದ್ಯಮಿ ಬಿ.ಸೂರ್ಯಕುಮಾರ್,ದೇವಾಡಿಗ ಸಂಘದ ಕಾರ್ಯದರ್ಶಿಪದ್ಮನಾಭ ದೇವಾಡಿಗ, ಜತೆ ಕಾರ್ಯದರ್ಶಿ ಗಣೇಶ್ ದೇವಾಡಿಗ, ಕರ್ನಾಟ ರಾಜ್ಯ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ದಿನೇಶ್ ದೇವಾಡಿಗ, ಮಂಗಳಾ ಕ್ರಡಿಟ್ ಕೊ-ಒ ಸೊಸೈಟಿ ಕೆ.ಜೆ.ದೇವಾಡಿಗ ಮತ್ತು ಉಡುಪಿ,ಕಾರ್ಕಳ,ಮೂಡಬಿದ್ರಿ, ಕುಂದಾಪುರ,ಹಿರಿಯಡ್ಕ,ವೇಣೂರು,ಎಲ್ಲೂರು, ಬಾರ್ಕೂರು,ಸುರತ್ಕಲಗ,ಕೋಟೇಶ್ವರ,ವಿಟ್ಲ,ಬೆಳ್ಮನ್,ಹೆಬ್ರಿ,ಮೂಲ್ಕಿ,ಪಡುಬಿದ್ರಿ,ಕಾಪು, ಬ್ರಹ್ಮಾವರದ ದೇವಾಡಿಗ ಸಂಘಗಳ ಅಧ್ಯಕ್ಷರು ಉಪಸ್ಥಿತರಿರುವರು.
ಮಾ.29 ಪೂರ್ವಾಹ್ನ 8ಗಂಟೆಯಿಂದ ಸಾಮೂಹಿಕ ಶನಿಪೂಜೆ ಮತ್ತು ಸತ್ಯನಾರಾಯಣ ಪೂಜೆ ಜರುಗಲಿರುವುದು ಗಂಟೆ 10ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭ ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾದವ ದೇವಾಡಿಗ, ಸಂಘದ ಅಧ್ಯಕ್ಷ ಜನಾರ್ದನ ಪಡುಪಣಂಬೂರು, ಪ್ರಧಾನ ಕಾರ್ಯದರ್ಶಿ ರಾಮದಾಸ ಪಾವಂಜೆ,ಕೃಷ್ಣಪ್ಪ ದೇವಾಡಿಗ, ಸತೀಶ್ ಎನ್ ದೇವಾಡಿಗ ಉಪಸ್ಥಿತರಿದ್ದರು.

Bhagyavan Sanil

Comments

comments

Comments are closed.

Read previous post:
Mulki-22031505
ಶಾಂಭವಿ ಜೇಸಿಐ 2015 ಪದಗ್ರಹಣ ಸಮಾರಂಭ

ಮುಲ್ಕಿ : ಜೇಸಿಐ ಸಂಸ್ಥೆಯು ತರಬೇತಿ ಕಾರ್ಯಕ್ರಮದ ಮೂಲಕ ವ್ಯಕ್ತಿತ್ವ ವಿಕಸನವನ್ನು ಗೊಳಿಸುವ ಕಾರ್ಯ ಮಾಡುತ್ತಿದ್ದು ಮೂಲ್ಕಿ ನಗರ ಪಂಚಾಯತ್ ಸ್ವಚ್ಚ ನಗರ ಸೇರಿದಂತೆ ಹಲವಾರು ಯೋಜನಗಳನ್ನು...

Close