ಡಿ.ಕೆ. ರವಿ ರಾಜಕೀಯ ಒತ್ತಡಕ್ಕೆ ಬಲಿ

ಕಿನ್ನಿಗೋಳಿ : ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಆಡಳಿತ ವೈಫಲ್ಯ ಕಂಡು ಬರುತ್ತಿದೆ. ಡಿ. ಕೆ. ರವಿ ಯಂತಹ ದಕ್ಷ ಪ್ರಾಮಾಣಿಕ ಐಪಿಎಸ್ ಅಧಿಕಾರಿಯ ಸಾವು ರಾಜಕೀಯ ಒತ್ತಡಕ್ಕೆ ಬಲಿಯಾಗಿದ್ದು ಕಾಣದ ಕೈಗಳ ಕೈವಾಡವಿದೆ. ಜನರ ಭಾವನೆಗಳಿಗೆ ಒತ್ತು ಕೊಡಬೇಕಾದುದು ಮುಖ್ಯ ಮಂತ್ರಿಯ ಕರ್ತವ್ಯ ಹಾಗಾಗಿ ಕೂಡಲೇ ಪ್ರಕರಣದ ತನಿಖೆಯನ್ನು ಸಿ.ಬಿ.ಐ.ಗೆ ಒಪ್ಪಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಹಿತಿ ನೀಡಿದರು.
ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸಿದ್ಧರಾಮಯ್ಯ ಹಾಗೂ ಸಚಿವರು ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ರಕರಣವನ್ನು ಆತ್ಮಹತ್ಯೆಯೆಂದು ಮುಚ್ಚಿಹಾಕುವ ಹುನ್ನಾರದ ಗುಮಾನಿ ಅಲ್ಲದೆ ಅರ್ಕಾವತಿ ಡಿನೋಟಿಫಿಕೇಷನ್‌ಗಳ ವಿಷಯದಲ್ಲಿಯೂ ಸರಕಾರ ತಿರುಚಿದ ಹೇಳಿಕೆಗಳನ್ನು ರಾಜ್ಯದ ಜನರನ್ನು ಮರಳು ಮಾಡುವ ವಿಚಾರಗಳು ನಡೆಯುತ್ತಿವೆ. ತೋಕೂರು-ಪಾದೂರು ಪೈಪಲೈನ್ ಯೋಜನೆಯ ನಿಪಕ್ಷಪಾತ ಸರ್ವೆ ಕಾರ್ಯ ನಡೆದಿಲ್ಲ ಎಂಬುದು ನನ್ನ ಗಮನಕ್ಕೆ ಮಂದಿದೆ ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಕರೆದು ನ್ಯಾಯಯುತವಾಗಿ ತನಿಖೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಮುಂದಿನ ವರ್ಷದವರಿಗೆ ಎಂಸಿಎಫ್ ಸ್ಥಗಿತಗೊಳಿಸುವುದಿಲ್ಲ ಮುಂದಿನ ದಿನಗಳಲ್ಲಿ ಗ್ಯಾಸ್ ಇಂಧನ ಉಪಯೋಗಿಸಿ ಎಂಸಿಎಫ್ ನಡೆಸುವ ಬಗ್ಗೆ ಚಿಂತನೆ ಮಾಡಲಾಗುವುದು. ನಿಡ್ಡೋಡಿ ಉಪ್ಣ ವಿದ್ಯುತ್ ಸ್ತಾವರದ ಬಗ್ಗೆ ರಾಜ್ಯ ಸರಕಾರದಿಂದ ಪ್ರಸ್ತಾವನೆ ಹೋಗಿದೆ ಕೃಷಿ ಭೂಮಿಯಲ್ಲಿ ಯೋಜನೆಯನ್ನು ಮಾಡದೆ ಬಂಜರು ಭೂಮಿಯ ಪ್ರದೇಶದಲ್ಲಿ ಮಾತ್ರ ಮಾಡಿ ಎಂದು ಕೇಂದ್ರ ಸರಕಾರಕ್ಕೆ ಮನದಟ್ಟು ಮಾಡಲಾಗಿದೆ ಎಂದರು.
ಸುರತ್ಕಲ್ ಎನ್.ಐ.ಟಿ.ಕೆ ಯನ್ನು ಐ.ಐ.ಟಿ ಮಾಡವ ಪ್ರಸ್ತಾವನೆ ಕೇಂದ್ರ ಸರಕಾರದ ಮುಂದಿಟ್ಟಿದ್ದೇನೆ. ಮಂಗಳೂರು ಬಂದರು ಪ್ರದೇಶನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡಲಾಗುತ್ತದೆ. ಮಂಗಳೂರು ರೈಲ್ವೇ ನಿಲ್ದಾಣವನ್ನು ವಿಶ್ವ ದರ್ಜೆಯನ್ನಾಗಿಸುವ ಪ್ರಸ್ತಾವನೆಯಿದೆ. ರಾಜ್ಯ ಸರಕಾರವು ಈ ಎಲ್ಲಾ ಬೇಡಿಕೆಗಳಿಗೆ ಅಂಕಿತ ಹಾಕಬೇಕಾಗಿದೆ

ಈ ಸಂದರ್ಭ ಸುಚರಿತ ಶೆಟ್ಟಿ, ಈಶ್ವರ್ ಕಟೀಲ್, ಭುವನಾಬಿರಾಮ ಉಡುಪ, ಜಗದೀಶ ಅಧಿಕಾರಿ ಇದ್ದರು.

ಸುರತ್ಕಲ್ ಟೋಲ್ ಗೇಟ್ ಗೊಂದಲ
ಸುರತ್ಕಲ್ ಟೋಲ್ ಗೇಟ್ ಬಗ್ಗೆ ಸ್ಥಳಿಯರ ವಿರೋಧವಿದ್ದರೆ ಟೋಲ್ ಗೇಟ್ ನಿರ್ಮಾಣ ಬೇಡ ಈ ಹಿಂದೆಯೂ ಸರ್ಕ್ಯೂಟ್ ಹೌಸ್‌ನಲ್ಲಿ ಈ ಬಗ್ಗೆ ಸಭೆ ಕರೆದು ಚರ್ಚಿಸಿ ಟೋಲ್ ಗೇಟ್ ನಿರ್ಮಾಣ ಮಾಡುವುದನ್ನು ನಿಲ್ಲಿಸಿದ್ದೇನೆ. ಸೋಮವಾರ ಜಿಲ್ಲಾಧಿಕಾರಿ ಮತ್ತು ಸ್ಥಳೀಯರ ಸಭೆ ಕರೆದು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು

Comments

comments

Comments are closed.

Read previous post:
Kinnigoli-22031501
ಮೆನ್ನಬೆಟ್ಟು ಸ್ವಯಂಚಾಲಿತ ದಾರಿದೀಪ ಉದ್ಘಾಟನೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರುಕಾವೇರಿ ಮಾರಡ್ಕದಿಂದ ಕಟೀಲು ಚರ್ಚ್ ತನಕದ ರಾಜ್ಯ ಹೆದ್ದಾರಿಯಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಅನುದಾನದಿಂದ ಸ್ವಯಂ ಚಾಲಿತ ದಾರಿ ದೀಪಗಳ...

Close