ಅಂತರ್ ರಾಜ್ಯ ಚೋರರ ಬಂಧನ

ಮೂಲ್ಕಿ: ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಕಳ್ಳತನ ನಡೆಸುತ್ತಿದ್ದ ನಾಲ್ಕು ಜನರನ್ನು ಮೂಲ್ಕಿ ಪೋಲೀಸರು ಬಂಧಿಸಿದ್ದಾರೆ.
ಹಾಸನ ಬಿಂಡೇನಾ ಹಳ್ಳಿಯ ಶಂಕರ (34) ದಾವಣಗೆರೆಯ ಹರಿಹರ ನಿವಾಸಿ ಪ್ರಕಾಶ್(32) ಕಾಸರಗೋಡು ನಿವಾಸಿ ಮೊಹಮ್ಮದ್ ಫೈಜಿ ಸುಲ್ತಾನ್(23), ಕೇರಳ ನೀಲೇಶ್ವರದ ಸಫೀಕ್ ಎಎಚ್(23) ಬಂಧಿತರಾಗಿದ್ದಾರೆ.
ಮೂಲ್ಕಿ ಕೊಳಚಿಕಂಬಳದಲ್ಲಿ ಗಸ್ತು ತಪಾಸಣೆಯ ಸಂದರ್ಭ ಮೂಲ್ಕಿ ನಿರೀಕ್ಷರಾದ ರಾಮಚಂದ್ರ ನಾಯ್ಕ್ ಮತ್ತು ತಂಡದವರಿಗೆ ಬೈಕಿನಲ್ಲಿ ಬರುತ್ತಿದ್ದ ಶಂಕರ ಮತ್ತು ಪ್ರಕಾಶ್ ಸಿಕ್ಕಿ ಬಿದ್ದಿದ್ದು ಧಾಖಲೆ ಪರೀಕ್ಷಿಸುವಾಗ ಸರಿಯಾದ ದಾಖಲೆ ಇಲ್ಲದೆ ಅವರನ್ನು ವಿಚಾರಿಸಿದಾಗ ಕಂಕನಾಡಿ ರೈಲ್ವೇ ಸ್ಟೇಶನ್ ಬಳಿ ಕದ್ದಿರುವ ಮಾಹಿತಿ ಪಡೆದ ಪೋಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿತರು ತಮ್ಮ ಸಹಚರರಾದ ಮೊಹಮ್ಮದ್ ಫೈಜಿ ಸುಲ್ತಾನ್ ಮತ್ತು ಸಫೀಕ್ ಜಯೆಯಲ್ಲಿ ಕೇರಳದಲ್ಲಿ ರಿಕ್ಷಾ ಹಾಗೂ ಏಸ್ ಗಾಡಿಯನ್ನು ಕದ್ದಿರುವ ಬಗ್ಗೆ ಹಾಗೂ ಇನ್ನೂ ಕೆಲವು ಬೈಕ್ ಹಾಗೂ ಹಳೆಯಂಗಡಿ ಸಾಗ್ ಬಳಿ ಮನೆಯೊಂದಕ್ಕೆ ನುಗ್ಗಿ ಕಳವು ನಡೆಸಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಪರಮೇಶ್ವರ,ಎಎಸ್‌ಐ ವಾಮನ್ ಸಾಲ್ಯಾನ್,ಸಿಬ್ಬಂದಿಗಳಾದ ಧಮೇಂದ್ರ,ರಾಜೇಶ್, ಲೋಹಿತ್ ಸುಧೀರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

Bhagyawan Sanil

Mulki-23031504

Comments

comments

Comments are closed.

Read previous post:
Mulki-23031503
ಯುಗಾದಿ ಉತ್ಸವ ಮತ್ತು ಯುವ ಕೇಸರಿ ಸಂಗಮ-2015

ಮೂಲ್ಕಿ: ವಿಶ್ವ ಗುರುವಾದ ಉತ್ತಮ ಸಂಸ್ಕೃತಿ ಸಂಸ್ಕಾರಪೂರ್ಣ ಭಾರತೀಯ ಸಂಸ್ಕೃತಿಯನ್ನು ಬೆಳೆಸಲು ಯುವ ಸಮಾಜ ಹೆಚ್ಚಿನ ಆಸಕ್ತಿ ನೀಡಬೇಕು ಎಂದು ಹೊಸ್ಮಾರು ಬೊಲ್ಯೋಟ್ಟು ಗುರು ಆಶ್ರಮದ ಶ್ರೀ...

Close