ಮೂಲ್ಕಿ ಪಟ್ಟಣ ಸ್ವಚ್ಚ ಭಾರತ ಅಭಿಯಾನ

ಮೂಲ್ಕಿ: ಸ್ವಚ್ಚ ಭಾರತ ಅಭಿಯಾನಕ್ಕೆ ಪೂರಕವಾಗಿ ಮೂಲ್ಕಿ ಪಟ್ಟಣ ಪಂಚಾಯಿತಿಯನ್ನು ಸ್ವಚ್ಚ ಮತ್ತು ಸುಂದರ ಹರಿದ್ವರ್ಣ ಗೊಳಿಸುವ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ವ್ಯಕ್ತಿತ್ವ ವಿಕಸನವನ್ನು ಗೊಳಿಸುವ ಜೇಸಿ ಸಂಸ್ಥೆಯು ಜೊತೆಗೂಡಿ ಸಮಾಜಕ್ಕೆ ಉತ್ತಮ ತರಬೇತಿ ಹಾಗೂ ಮಾಹಿತಿ ನೀಡುವ ಮೂಲಕ ಮೂಲ್ಕಿ ಪಟ್ಟಣ ಅಭಿವೃದ್ಧಿಗೊಳಿಸುವ ಯೋಜನೆಯನ್ನು ಯಶಸ್ವಗೊಳಿಸಲು ಸಹಕರಿಸಬೇಕು ಎಂದು ಮೂಲ್ಕಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಾಣಿ ಆಳ್ವ ಹೇಳಿದರು.
ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಜರಗಿದ ಮೂಲ್ಕಿ ಶಾಂಭವಿ ಜೇಸಿಐ ನ 2015 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜೇಸಿಐನ ವಲಯಾಧ್ಯಕ್ಷ ಕೃಷ್ಣ ಮೋಹನ್ ರವರು ಮೂಲ್ಕಿ ಶಾಂಭವಿ ಜೇಸಿಐನ ನೂತನ ಅಧ್ಯಕ್ಷ ವೇಣು ಗೋಪಾಲ್ ಶೆಟ್ಟಿ ಮತ್ತವರ ತಂಡದ ಪದಗ್ರಹಣ ನೆರವೇರಿಸಿ, ಯುವ ಪೀಲಿಗೆಗೆ ನಾಯಕತ್ವ ಹಾಗೂ ದುಶ್ಚಟ ನಿವಾರಣೆ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಗ್ರಾಮೀಣ ಪ್ರದೇಶದ ಸಂಸ್ಕೃತಿ ಹಾಗೂ ಉತ್ತಮ ಭಾಂದವ್ಯ ಹೆಚ್ಚಳಕ್ಕೆ ಜೇಸಿ ಸಂಸ್ಥೆ ಉತ್ತಮ ಸೇತುವೆಯಾಗಬೇಕು ಎಂದರು.
ಅಧ್ಯಕ್ಷತೆಯನ್ನು ಮೂಲ್ಕಿ ಶಾಂಭವಿ ಜೇಸಿಐ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ವಹಿಸಿದ್ದರು.
ಅಭಿನಂದನೆ ಸ್ವೀಕರಿಸಿದ ಜೇಸಿಐನ ರಾಷ್ಟ್ರೀಯ ನಿರ್ದೇಶಕ ಸಂಪತ್ ಸುವರ್ಣ, ಜೇಸಿ ಸಂಸ್ಥೆಯ ತರಬೇತಿಯು ನಾಯಕತ್ವ ಮತ್ತು ಸಂಘಟನೆ ಮಾನವ ಸಂಪನ್ಮೂಲ ಅಭಿವೃದ್ಧಿಯೋಜನೆಗಳನ್ನು ರೂಪಿಸಲು ಬಹು ಸಹಕಾರಿಯಾಗುತ್ತದೆ ಆಂತರಿಕ ಬಲವರ್ದನೆ ಇಲ್ಲದ ಪ್ರತಿಭಾವಂತ ಇಂದಿನ ಆಧುನಿಕ ವೇಗದ ಯುಗದಲ್ಲಿ ತನ್ನತನವನ್ನು ಕಳೆದುಕೊಳ್ಳಲು ಸಾಧ್ಯ ಈ ನಿಟ್ಟಿನಲ್ಲಿ ಯುವ ಸಮಾಜಕ್ಕೆ ಜೇಸೀ ತರಬೇತಿ ಬಹು ಮುಖ್ಯವಾಗಿದೆ ಎಂದರು. ಈ ಸಂದರ್ಭ ಯಕ್ಷಗಾನ ಕಲಾವಿದ ಸುರೇಶ್ ಕೊಲಕಾಡಿಯವರನ್ನು ಸನ್ಮಾನಿಸಲಾಯಿತು.ಜೇಸಿಐನ ವಲಯ ಉಪಾಧ್ಯಕ್ಷ ಅನಿಲ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜೇಸಿರೇಟ್ ಅಧ್ಯಕ್ಷೆ ಗೀತಾ ಜೆ ಹೆಗ್ಡೆ,ಜ್ಯೂನಿಯರ್ ಜೇಸಿ ಅಧ್ಯಕ್ಷ ಅಕ್ಷಯ ರಾಜ್, ಮಾಜಿ ಅಧ್ಯಕ್ಷರು,ಸದಸ್ಯರು ಮತ್ತಿತರರು ಉಪಸ್ತಿತರಿದ್ದರು.

Bhagyawan Sanil

Mulki-23031502

Comments

comments

Comments are closed.

Read previous post:
Mulki-23031501
ಗ್ರಾಮದ ಅಬಿವೃದ್ದಿಗೆ ಯುವಕರು ಮುಂದಾಗಬೇಕು

ಮೂಲ್ಕಿ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ.ಕ್ರೀಡೆಯಲ್ಲಿ ಮಾತ್ರವಲ್ಲದೆ ಗ್ರಾಮದ ಅಭಿವೃದ್ದಿಗೂ ಯುವಕರು ಮುಂದಾಗಿ ಭವ್ಯ ಭಾರತ ಕಟ್ಟಲು ಶ್ರಮಿಸಬೇಕು ಹಾಗೂ ಶಾಂತಿ ಸಹಬಾಳ್ವೆಯಿಂದ ಜೀವನ...

Close