ಗ್ರಾಮದ ಅಬಿವೃದ್ದಿಗೆ ಯುವಕರು ಮುಂದಾಗಬೇಕು

ಮೂಲ್ಕಿ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ.ಕ್ರೀಡೆಯಲ್ಲಿ ಮಾತ್ರವಲ್ಲದೆ ಗ್ರಾಮದ ಅಭಿವೃದ್ದಿಗೂ ಯುವಕರು ಮುಂದಾಗಿ ಭವ್ಯ ಭಾರತ ಕಟ್ಟಲು ಶ್ರಮಿಸಬೇಕು ಹಾಗೂ ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಲು ಮುಂದಾಗಬೇಕು ಎಂದು ಉದ್ಯಮಿ ಧನಂಜಯ ಕೋಟ್ಯಾನ್ ಮಟ್ಟು ಹೇಳಿದರು ಅವರು ಶ್ರಿ ಧೂಮಾವತಿ ಫ್ರೆಂಡ್ಸ್ ಕ್ಲಬ್ ಮೈಲೊಟ್ಟು ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟದ ಅತಿಥಿಯಾಗಿ ಮಾತನಾಡಿದರು.ಪಂದ್ಯಾ ಕೂಟವನ್ನು ನಡಿಬೆಟ್ಟು ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಗುತ್ತಿನಾರು ಜಯರಾಮ ಶೆಟ್ಟಿ ಉದ್ಘಾಟಿಸಿದರು,ವೇದಿಕೆಯಲ್ಲಿ ಕಿಲ್ಪಾಡಿ ಪಂಚಾಯತಿ ಅಧ್ಯಕ್ಷೆ ಶಾರಂದಾ ವಸಂತ್, ಕೃಷಿಕ ರಾಮದಾಸ ಶೆಟ್ಟಿ ಬಾಳಿಕೆ ಮನೆ,ಉದ್ಯಮಿ ಗಂಗಾಧರ ಶೆಟ್ಟಿ ಬರ್ಕೆತೋಟ,ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು,ವಿಜಯ ಕುಮಾರ್ ಮೈಲೊಟ್ಟು,ಉತ್ತಮ್ ಕುಮಾರ್,ಹಿರಿಯ ಶಿಕ್ಷಕ ವಿಠಲ್ ಮಾಸ್ಟರ್,ಸುಧಾಕರ ಶಿಬರೂರು,ಉಮೇಶ್ ಕರ್ಕೇರ,ಜಯದೀಪ್ ಆಮೀನ್ ಪಟ್ರೆಗುತ್ತು ಮತ್ತಿತರರು ಇದ್ದರು. ದಯಾನಂದ ಮಟ್ಟು ಸ್ವಾಗತಿಸಿ ಮನೋಹರ ಕೋಟ್ಯಾನ್ ವಂದಿಸಿದರು.
ನಿಸರ್ಗ ಕೋಲ್ನಾಡು ತಂಡಕ್ಕೆ ಪ್ರಶಸ್ತಿ
ಸುಮಾರು ಮೂವತ್ತು ತಂಡಗಳು ಭಾಗವಹಿಸಿದ್ದ ಈ ಕ್ರಿಕೆಟ್ ಟೂರ್ನಿಯಲ್ಲಿ ನಿಸರ್ಗ ಕೋಲ್ನಾಡು ತಂಡವು ಬಾರ್ಗವ ಕಾಪು ತಂಡವನ್ನು ಸೋಲಿಸಿ ಶ್ರೀ ಧೂಮಾವತಿ ಟ್ರೋಪಿ ಹಾಗೂ 15,555ರೂ ನಗದನ್ನು ಪಡೆದರೆ ಬಾರ್ಗವ ಕಾಪು ತಂಡವು ದ್ವಿತೀಯ ಪ್ರಶಸ್ತಿ ಹಾಗೂ 9,999ರೂ ನಗದನ್ನು ಪಡೆದು ತೃಪ್ತಿಪಟ್ಟುಕೊಂಡಿತು.ಪಂದ್ಯಶೇಷ್ಠ ಪ್ರಶಸ್ತಿ ಕೋಲ್ನಾಡು ತಂಡದ ಶೆಹಜಹಾನ್ ಪಾಲಾದರೆಉತ್ತಮ ದಾಂಢೀಗನಾಗಿ ಬಾರ್ಗವ ತಂಡದ ಗುರು,ಎಸೆತಗಾರನಾಗಿ ನಿಸರ್ಗ ತಂಡದ ಅಜೀಜ್,ಸರಣಿ ಶ್ರೇಷ್ಠನಾಗಿ ನಿಸರ್ಗ ತಂಡದ ಪ್ರದೀಪ್ ಆಯ್ಕೆಯಾದರು.

Puneethakrishna

Mulki-23031501

Comments

comments

Comments are closed.

Read previous post:
Kinnigoli-22031503
ಬಳ್ಕುಂಜೆ ರಾಜೀವ್ ಗಾಂಧಿ ಸೇವಾ ಕೇಂದ್ರ

ಕಿನ್ನಿಗೋಳಿ : ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಮಸಕಟ್ಟೆ-ಬಳ್ಕುಂಜೆ ರಸ್ತೆ ಮತ್ತು ಕಾಂತಬಾರೆ -ಬೂದಬಾರೆ ಜನ್ಮಕ್ಷೇತ್ರದ ರಸ್ತೆಯನ್ನು ಅಭಿವದ್ಧಿ ಪಡಿಸಲಾಗುವುದು. ಮಟ್ಟುವಿನಲ್ಲಿ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿ...

Close