ಯುಗಾದಿ ಉತ್ಸವ ಮತ್ತು ಯುವ ಕೇಸರಿ ಸಂಗಮ-2015

ಮೂಲ್ಕಿ: ವಿಶ್ವ ಗುರುವಾದ ಉತ್ತಮ ಸಂಸ್ಕೃತಿ ಸಂಸ್ಕಾರಪೂರ್ಣ ಭಾರತೀಯ ಸಂಸ್ಕೃತಿಯನ್ನು ಬೆಳೆಸಲು ಯುವ ಸಮಾಜ ಹೆಚ್ಚಿನ ಆಸಕ್ತಿ ನೀಡಬೇಕು ಎಂದು ಹೊಸ್ಮಾರು ಬೊಲ್ಯೋಟ್ಟು ಗುರು ಆಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು
ಮೂಲ್ಕಿ ಕೆ.ಎಸ್.ರಾವ್ ನಗರದ ವೀರ ಕೇಸರಿ ತರುಣ ವೃಂದದ ವತಿಯಿಂದ ನಡೆದ 5ನೇ ವರ್ಷದ ಯುಗಾದಿ ಉತ್ಸವ ಮತ್ತು ಯುವ ಕೇಸರಿ ಸಂಗಮ-2015 ಕಾರ್ಯಕ್ರಮಕ್ಕೆ ದೀಪಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ದಾರವಾಡ ಯುವ ಬ್ರಿಗೇಡ್ ವಿಭಾಗ ಸಂಚಾಲಕ ಕಿರಣ್ ಪಾಟೀಲ್ ಮಾತನಾಡಿ, ತ್ಯಾಗ ಬಲಿದಾನದ ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಪಠ್ಯದಲ್ಲಿ ತಪ್ಪು ಮಾಹಿತಿ ನೀಡುವ ಮೂಲಕ ಯುವ ಪೀಳೀಗೆಯನ್ನು ಇಲ್ಲಿನ ಇತಿಹಾಸಕಾರರು ದಾರಿ ತಪ್ಪಿಸಿದ್ದಾರೆ ಆದರೆ ಪಾಶ್ಚ್ಯಾತ್ಯ ಇತಿಹಾಸಕಾರರು ಇಲ್ಲಿನ ತ್ಯಾಗ ಬಲಿದಾನದ ಇತಿಹಾಸವನ್ನು ಸ್ವಷ್ಟ ಅಕ್ಷರಗಳಲ್ಲಿ ನಮೂದಿಸಿದ್ದಾರೆ. ಯುವ ಸಮಾಜ ಅಧ್ಯಯನ ನಡೆಸಬೇಕು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ದೇಶೀ ಸಂಸ್ಕೃತಿ ಹಬ್ಬ ಹರಿದಿನಗಳಲ್ಲಿ ದೇಶದ ಉತ್ತಮ ಭವಿಷ್ಯಕ್ಕೆ ಪೂರಕ ವಿಚಾರಧಾರೆಗಳನ್ನು ಚಿಂತನ ಮಂಥನ ಗೊಳಿಸಬೇಕು. ನಾವೇ ರಚಿಸಿದ ಜಾತಿ ಪದ್ದತಿ ಅಸ್ಪರ್ಷತೆ ಮುಂತಾದ ಕಟ್ಟುಪಾಡುಗಳು ಹಿಂದೂ ಧರ್ಮದ ಮೇಲೆ ಅನ್ಯರು ಧಾಳಿಮಾಡಲು ಸಾಧ್ಯವಾಗಿದೆ ಈ ಬಗ್ಗೆ ಯುವ ಸಮಾಜ ಸಂಘಟಿತರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ ಶೇಣವರವರು ಮಾತನಾಡಿ, ಪಾಶ್ಚ್ಯಾತ ಸಂಸ್ಕೃತಿಯ ಒಳ್ಳೆಯ ವಿಚಾರಗಳಾದ ಶಿಸ್ತು ಸ್ವಚ್ಚತೆ ದೇಶ ಭಕ್ತಿ ಮುಂತಾದ ಒಳ್ಳೆಯ ವಿಚಾರಗಳನ್ನು ನಾವು ಅನುಕರಿಸಬೇಕು ಅವರ ಸ್ವೇಚಾಚಾರ,ತುಂಡುಡುಗೆ ಪದ್ದತಿ ನಮಗೆ ಬೇಡ, ಯುಗಾದಿಯನ್ನು ಬೇವು ಬೆಲ್ಲದ ಜೊತೆಗೆ ಆಚರಿಸಬೇಕು. ಹೊಸವರ್ಷದ ಹೆಸರಿನಲ್ಲಿ ಅಮಲು ಪದಾರ್ಥ ಸೇವೆನೆ ಮುಂತಾದ ಕೃತ್ಯಗಳನ್ನು ನಿಲ್ಲಿಸಬೇಕು. ಪ್ರತೀ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಬೇಕು ಭಜನೆಯಿದ್ದ ಮನೆ ಎಂದಿಗೂ ವಿಭಜನೆಯಾಗದು. ನಮ್ಮ ಸಮಾಜಕ್ಕೆ ದೇಶ ಭಕ್ತಿ ಮುಖ್ಯವಾಗಬೇಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತತ್ವ ಮತ್ತು ಆದರ್ಶಗಳು ಪ್ರತೀ ಮನೆಯಲ್ಲಿ ಪಾಲನೆ ಯಾಗಬೇಕು,ಮಹಿಳೆಯರು ದೇಸೀ ಸಂಸ್ಕೃತಿ ಬಗ್ಗೆ ಒಲವು ತೋರಿಸಿ ಮಕ್ಕಳಿಗೆ ಮಾಹಿತಿ ನೀಡಬೇಕು. ಕನಿಷ್ಟ ೧೮ ವರ್ಷ ತುಂಬುವವರೆಗೆ ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಬೇಕು ಹೆಣ್ಣು ಮಕ್ಕಳಿಗೆ ಮೊಬೈಲ್‌ನಿಂದ ಆಗುವ ತೊಂದರೆಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು. ಪ್ರೌಡ ಹೆಣ್ಣು ಮಕ್ಕಳಿಗೆ ನೀಡುವ ಮೊಬೈಲ್ ಪರಿಣಾಮವಾಗಿ ಲವ್ ಜಿಹಾದ್ ನಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಜಾತಿ ಪದ್ದತಿಯಲ್ಲಿ ಬರುವ ಅಸ್ಪರ್ಷತೆ ನಿವಾರಣೆಯಾಗಲು ಯುವ ಸಮಾಜ ಶ್ರಮಿಸಬೇಕು. ಯುವ ಸಂಘಗಳು ಸ್ಪಚ್ಚ ಭಾರತ ಪರಿಕತ್ಪನೆಯನ್ನು ಸಾಕಾರಗೊಳಿಸಲು ತಮ್ಮ ಪ್ರದೇಶವನ್ನು ಸ್ವಚ್ಚವಾಗಿರಿಸಲು ಕ್ರಮ ಕೈಗೊಳ್ಳಬೇಕು. ಹಿಂದೂ ಧರ್ಮ ಇತರ ಮತಗಳಂತಲ್ಲ ಅದಕ್ಕೆ ಹುಟ್ಟಿದ ದಿನವೂ ಇಲ್ಲ ಮತ್ತು ಸಾವೂ ಇಲ್ಲ. ಅಖಂಡ ವಿಶ್ವಕ್ಕೆ ಉತ್ತಮ ಸಂದೇಶ ನೀಡುವ ಧರ್ಮವನ್ನು ಬೆಳೆಸುವ ಕರ್ತವ್ಯ ಯುವ ಪೀಳೀಗೆಯಿಂದ ಆಗಬೇಕು ಎಂದರು.ಎಲ್ಲಿಯ ವರೆಗೆ ಮತಾಂತರ ವಿರುವುದೋ ಅಲ್ಲಿಯ ವರೆಗೆ ಘರ್ ವಾಪಸಿ ಇರುತ್ತದೆ. ಎಂದರು.ವಿಶ್ವದ ಎಲ್ಲಾ ರಾಷ್ಟ್ರದಲ್ಲಿ ಬಹುಸಂಖ್ಯಾತರಿಗೆ ಪೂರಕವಾಗಿ ಕಾನೂನುಗಳಿರುತ್ತದೆ ಇಲ್ಲಿ ತದ್ವಿರುದ್ದವಾಗಿದೆ ಎಲ್ಲಾ ಕಡೆಯಲ್ಲಿ ನಾಯಿ ಬಾಲ ಅಲ್ಲಾಡಿಸಿದರೆ ಇಲ್ಲಿ ಬಾಲ ನಾಯಿಯನ್ನೇ ಅಲ್ಲಾಡಿಸುವಂತಾಗಿದೆ.ಎಂದರು.
ವೀರ ಕೇಸರಿ ತರುಣ ವೃಂದದ ವೀರ ಭದ್ರಯ್ಯ ಹಿರೇಮಠ ಪ್ರಸ್ಥಾವಿಸಿ, ವಲಸೆ ಕಾರ್ಮಿಕರಿಂದ ಕೂಡಿದ ಕೆ.ಎಸ್.ರಾವ್ ನಗರವನ್ನು ಅಭಿವೃದ್ಧಿ ಪಡಿಸಬೇಕು ಎಂಬ ಉದ್ದೇಶದಿಂದ ಅಶಕ್ತರಿಗೆ ಆರ್ಥಿಕ ಸಹಕಾರ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪುಸ್ತಕ ವಿತರಣೆ, ಸಂಸ್ಕೃತಿ ಸಂಸ್ಕಾರ ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮಗಳು ನಡೆಸಲಾಗಿದೆ ಎಂದರು.
ವೀರ ಕೇಸರಿ ತರುಣ ವೃಂದದ ಅಧ್ಯಕ್ಷ ಮಹಾಂತೇಶ್ ಎಸ್.ನಾಗಶೆಟ್ಟಿ ಸ್ವಾಗತಿಸಿದರು. ಮಂಜುನಾಥ ಬಿ ನಿರೂಪಿಸಿದರು. ಬಳಿಕ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು.

Bhagyawan Sanil

Mulki-23031503

Comments

comments

Comments are closed.

Read previous post:
Mulki-23031502
ಮೂಲ್ಕಿ ಪಟ್ಟಣ ಸ್ವಚ್ಚ ಭಾರತ ಅಭಿಯಾನ

ಮೂಲ್ಕಿ: ಸ್ವಚ್ಚ ಭಾರತ ಅಭಿಯಾನಕ್ಕೆ ಪೂರಕವಾಗಿ ಮೂಲ್ಕಿ ಪಟ್ಟಣ ಪಂಚಾಯಿತಿಯನ್ನು ಸ್ವಚ್ಚ ಮತ್ತು ಸುಂದರ ಹರಿದ್ವರ್ಣ ಗೊಳಿಸುವ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ವ್ಯಕ್ತಿತ್ವ ವಿಕಸನವನ್ನು ಗೊಳಿಸುವ ಜೇಸಿ...

Close