ಸ್ವಾರ್ಥ ರಹಿತ ಪೂಜೆ ಭಗವಂತನ ಪ್ರೀತಿಗೆ ಪಾತ್ರ

ಮೂಲ್ಕಿ : ಸ್ವಾರ್ಥರಹಿತ ನೈತಿಕ ಜೀವನಕ್ರಮವು ಪುರೋಹಿತರಿಗೆ ಸಮವಸ್ತ್ರವಿದ್ದಂತೆ ಆಚಾರ ವಿಚಾರ ಗುಣ ನಡತೆಗಳು ಮಾತ್ರ ಪುರೋಹಿತರ ಗುರುತಾಗಿರುತ್ತದೆ ಎಂದು ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಪ್ರಧಾನ ಅರ್ಚಕರಾದ ವೇಮೂ ಜನಾರ್ದನ ಭಟ್ ಹೇಳಿದರು.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸ ಮಹರ್ಷಿವಿದ್ಯಾ ಪೀಠ ಸಂಸ್ಕೃತ ವೇದ ಪಾಠ ಶಾಲೆಯ ಒಂಬತ್ತನೇ ವಾರ್ಷಿಕೋತ್ಸವ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾರ್ಥ ರಹಿತ ಪೂಜೆಯು ಮಾತ್ರ ಭಗವಂತನ ಪ್ರೀತಿಗೆ ಪಾತ್ರವಾಗುವುದರಿಂದ ಯುವ ಪುರೋಹಿತರು ಉತ್ತಮ ಗುಣ ನಡತೆಗಳಿಂದ ಸ್ವಾರ್ಥ ರಹಿತರಾಗಿ ಉತ್ತಮ ಅದ್ಯಯನಶೀಲರಾಗಿ ಸಮಾಜವನ್ನು ಮುನ್ನಡೆಸುವ ಕರ್ತವ್ಯ ನಿಮ್ಮದಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಧಾರ್ಮಿಕ ಪುನರುತ್ಥಾನ ಸೇವಾ ಮಂಡಳಿಯ ವೇಮೂ.ಚೇಂಪಿ ರಾಮಚಂದ್ರ ಅನಂತ ಭಟ್ ಮಾತನಾಡಿ, ಯುವ ಪುರೋಹಿತರು ಸದಾ ಅಧ್ಯಯನಶಾಲಿಗಳಾಗಿ ಉನ್ನತ ವಿದ್ಯಾಬ್ಯಾಸದತ್ತ ಗಮನ ನೀಡಬೇಕು. ವಿದ್ಯೆ ಅಧ್ಯಯನ ಹಾಗೂ ಸಾಧನೆ ನಿಮ್ಮದಾದರೆ ಮಾತ್ರ ದೇವರ ಕೃಪೆ ಮತ್ತು ಸಮಾಜದ ಗೌರವ ಪ್ರಾಪ್ತಿಯಾಗುವುದು ಎಂದರು.
ಅತಿಥಿಯಾಗಿದ್ದ ಮೂಲ್ಕಿ ವಿಜಯಾ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಪ್ರೊ.ಬಿ.ಜಯರಾಂ ಮಾತನಾಡಿ, ಸಂಸ್ಕ್ರತ ಭಾಷೆಯ ಅಧ್ಯಯನ ಹಾಗೂ ತಿಳುವಳಿಕೆ ಮೂಡಿಕೊಳ್ಳಲು ಪ್ರತೀಯೊಬ್ಬರಿಗೆ ಅವಕಾಶವಿದ್ದು ಪ್ರತೀ ಮನೆಯಿಂದ ಒಬ್ಬರಾದರೂ ಸಂಸ್ಕೃತ ಕಲಿಯುವ ಮೂಲಕ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು. ಸಂಸ್ಕೃತ, ವೇದ, ಕರ್ಮಾಂಗ ಮತ್ತು ಜ್ಯೋತಿಷ್ಯ ವಿಭಾಗದಲ್ಲಿ ಸಮಾಜಕ್ಕೆ ಉತ್ತಮ ಸೇವೆ ನೀಡಿ ದಿವಂಗತರಾದ ಮೂಲ್ಕಿಯ ಹಿರಿಯ ಜ್ಞಾನಿಗಳಾದ ಸಂಸ್ಕೃತ ವಿದ್ವಾನ್ ಮೂಲ್ಕಿ ಮಾಧವ ಚಂದ್ರ ಭಟ್,ವೇದ ವಿದ್ವಾಂಸ ಮೂಲ್ಕಿ ಗಣಪತಿ ದಯಾನಂಧ ಭಟ್, ಕರ್ಮಾಂಗ ಜ್ಞಾನಿ ಮೂಲ್ಕಿ ಅಚ್ಚುತ ವೈಂಕುಠ ಭಟ್, ಜ್ಯೋತಿಷ್ಯ ವಿದ್ವಾಂಸ ಪಡುಬಿದ್ರೆ ದೇವದಾಸ ಶರ್ಮ ಇವರ ಸ್ಮರಣಾರ್ಥ ಮೂಲ್ಕಿ ಶಾಂಭವಿ ನರಸಿಂಹ ಕುಡ್ವಾ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುವ ಪುರಸ್ಕಾರಗಳ ಬಗ್ಗೆ ಟ್ರಸ್ಟ್ ಸದಸ್ಯ ಅತುಲ್ ಕುಡ್ವಾ ಮಾಹಿತಿ ನೀಡಿದರು.
2014-15 ಸಾಲಿನ ವಿದ್ಯಾರ್ಥಿಗಳಾದ ಅಮೇಯ ಸುಬ್ರಾಯ ಭಟ್ ಕುಮುಟಾ( ಸಂಸ್ಕೃತ, ಜ್ಯೋತಿಷ್ಯ ಮತ್ತು ವೇದ). ಪಾಂಡುರಂಗ ವಿನಾಯಕ ಭಟ್ ಗೋಕರ್ಣ( ಕರ್ಮಾಂಗ) ಪುರಸ್ಕಾರ ಗಳಿಸಿದರು.
ಈಸಂದರ್ಭ ಪಾಠ ಶಾಲೆಯ ಅದ್ಯಾಪಕರಾದ ರವಿಪ್ರಕಾಶ ಉಪಾದ್ಯಾಯ,ನವೀನ ಜಿ ಭಟ್, ಗಣೇಶ ಐತಾಳ್,ಎಚ್.ನಾರಾಯಣ ಶರ್ಮ, ಬಪ್ಪನಾಡು ಕೃಷ್ಣರಾಜ ಭಟ್ ಇವರನ್ನು ಸಂಸ್ಥೆಯ ಮಹಾ ಪೋಷಕರಾದ ವಿಶ್ವನಾಥ ಎನ್ ಶೆಣೈ ಗೌರವಿಸಿದರು. ದೇವಳದ ಆಡಳಿತ ಮೊಕ್ತೇಸರರಾದ ಯು.ವೇದವ್ಯಾಸ ಶೆಣೈ,ರಾಮದಾಸ್ ಕಾಮತ್,ಕೆ.ನರಸಿಂಹ ಪೈ,ಜಿ.ಜಿ.ಕಾಮತ್ ಉಪಸ್ಥಿತರಿದ್ದರು.
ವೇಮೂ ಪದ್ಮನಾಧ ಭಟ್ ಸ್ವಾಗತಿಸಿದರು. ವ್ಯಾಸ ಮಹರ್ಚಿ ವಿದ್ಯಾ ಪೀಠದ ಉಪಾಧ್ಯಕ್ಷ ಪ್ರೊ.ಯು ನಾಗೇಶ್ ಶೆಣೈ ಶೈಕ್ಷಣಿಕ ವರದಿ ಮಂಡಿಸಿದರು. ವಕೀಲ ವಿ. ಸತೀಶ್ ಕಾಮತ್ ನಿರೂಪಿಸಿದರು. ಅತುಲ್ ಕುಡ್ವಾ ವಂದಿಸಿದರು. ಬಳಿಕ ವೇದ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತ ಪ್ರಹ್ಲಾದ ನಾಟಕ ನಡೆಯಿತು.

Bhagyawan Sanil

Mulki-25031504

Comments

comments

Comments are closed.

Read previous post:
Kinnigolii-25031503
ಸರೋಜಿನಿ ಎಸ್. ಶೆಟ್ಟಿ

ಕಿನ್ನಿಗೋಳಿ : ಅಡ್ವೆ ಮಾಗಂದಡಿ ದಿವಂಗತ ಸುಂದರ ಶೆಟ್ಟಿ ಅವರ ಪತ್ನಿ ಏಳಿಂಜೆ ಕೊಂಜಾಲಗುತ್ತು ಸರೋಜಿನಿ ಎಸ್. ಶೆಟ್ಟಿ (85 ವರ್ಷ) ಮಂಗಳವಾರ ನಿಧನ ಹೊಂದಿದರು. ಮೃತರಿಗೆ ಮೂವರು...

Close