ಕ್ರೀಡಾ ಕೂಟದಿಂದ ಐಕ್ಯತೆ ವೃದ್ದಿ

ಮೂಲ್ಕಿ: ದೇಶವನ್ನು   ಐಕ್ಯತೆಯಿಂದ ಮುಂದುವರಿಸಲು ಕ್ರಿಕೆಟ್‌ನಂತಹ ಕ್ರೀಡಾಕೂಟಗಳು ತುಂಬಾ ಸಹಾಯಕಾರಿ. ಕ್ರೀಡೆಯು ಮಾನವನ ಅವಿಭಾಜ್ಯಅಂಗ, ಮನುಷ್ಯನ ಪ್ರತಿಯೊಂದು ಅಂಗಾಂಗಳೂ ಸಮತೋಲಿತರಾಗಿರಲು ಕ್ರೀಡೆ ಸಹಾಯಕಾರಿ ಎಂದು ಪಂಜಿನಡ್ಕ ಶಾಲೆಯ ಶಿಕ್ಷಕ ಅಂಬರೀಷ ಹೇಳಿದರು.

ಅವರು ದರ್ಗಾ ಫ್ರೆಂಡ್ಸ್ ಸರ್ಕಲ್ ಕಾರ‍್ನಾಡು ಮೂಲ್ಕಿ ಇದರ ಆಶ್ರಯದಲ್ಲಿ ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ದರ್ಗಾ ಫ್ರೆಂಡ್ಸ್ ಟ್ರೋಪಿ-2015 ಇದರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭ ದೇಶ-ವಿದೇಶಗಳಲ್ಲಿ ಅನೇಕ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿಗಳಿಸಿರುವ ನಿತಿನ್ ಮೂಲ್ಕಿ ಹಾಗೂ ದರ್ಗಾ ಫ್ರೆಂಡ್ಸ್ ಕ್ಲಬ್ಬಿನ ಹಿರಿಯ ಸದಸ್ಯರಾದ ಅಬ್ದುಲ್ ಸಲಾಂ, ನಿತ್ಯಾನಂದ ಅವರನ್ನು ಕ್ಲಬ್ಬಿನ ಪರವಾಗಿ ಸನ್ಮಾನಿಸಲಾಯಿತು.

ದರ್ಗಾ ಫ್ರೆಂಡ್ಸ್ ಕ್ಲಬ್ಬಿನ ಮಹಾಪೋಷಕರಾದ ಮೂಲ್ಕಿ ನಗರ ಪಂಚಾಯತಿ ಸದಸ್ಯ ಪುತ್ತು ಬಾವ, ಶಿಕ್ಷಕ ನೋಣಯ್ಯ ರೇಂಜಾಳ, ಪ್ರೈಂ ಟಿವಿ ವರದಿಗಾರ ಹರೀಶ್ ಮೂಲ್ಕಿ, ಮೂಲ್ಕಿ ನಗರ ಪಂಚಾಯತಿ ಸದಸ್ಯ ಕುಳಾಯಿ ಬಷೀರ್, ಜಮಾಲ್ ಮೂಲ್ಕಿ, ಪುತ್ತುಬಾವ  ಮತ್ತಿತರರು ಉಪಸ್ಥಿತರಿದ್ದರು.

Puneethakrishna

Mulki-25031501

Comments

comments

Comments are closed.

Read previous post:
Kinnigolii-23031506
ವನಿತ ಸಮಾಜ ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಕಿನ್ನಿಗೋಳಿ ವನಿತಾ ಸಮಾಜದಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಈ ಸಂದರ್ಭ ರೇಖಿ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಉಮಾ ದಿವಾಕರ್ ಮಂಗಳೂರು ಅವರನ್ನು ಸನ್ಮಾನಿಸಲಾಯಿತು....

Close