ಕೆರೆಕಾಡು ಡಾಮಾರೀಕರಣ

ಕಿನ್ನಿಗೋಳಿ : ಕೆರೆಕಾಡು ಮುಖ್ಯ ರಸ್ತೆ ಕಳೆದ 20 ವರ್ಷಗಳಿಂದ ಡಾಮರೀಕರಣ ಕಂಡಿಲ್ಲ. ಗ್ರಾಮೀಣ ರಸ್ತೆಗಳಿಗೆ ಒತ್ತುಕೊಡುವ ನಿಟ್ಟಿನಲ್ಲಿ ಸಂಸದರ ಅನುದಾನದ ಹಣವನ್ನು ಹದಗೆಟ್ಟು ಹೋದ ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ವಿನಿಯೋಗಿಸಲಾಗಿದೆ ಪ್ರಸ್ತುತ ಸಂಸದರ 7ಲಕ್ಷರೂ ಹಾಗೂ ಜಿ. ಪಂ. ಅನುದಾನದಿಂದ 5 ಲಕ್ಷರೂ ಗಳಿಂದ ಡಾಮರೀಕರಣ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಗುರುವಾರ ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಮುಖ್ಯ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಿ. ಪಂ. ಸದಸ್ಯರಾದ ಆಶಾ ರತ್ನಾಕರ ಸುವರ್ಣ, ಈಶ್ವರ್ ಕಟೀಲ್, ತಾ. ಪಂ. ಸದಸ್ಯರಾದ ವನಿತಾ ಉದಯ ಅಮೀನ್, ಸಾವಿತ್ರಿ ಸುವರ್ಣ, ಕಿಲ್ಪಾಡಿ ಗ್ರಾ. ಪಂ. ಉಪಾಧ್ಯಕ್ಷ ಮೋಹನ ಕುಬೆವೂರು, ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಲೀಲಾ ಬಂಜನ್, ಮಾಧವ ಶೆಟ್ಟಿಗಾರ್, ವಿಕಾಸ್ ಶೆಟ್ಟಿ ಕೆಂಚನಕೆರೆ, ಗೀತಾ ಆಚಾರ್ಯ, ಶರತ್ ಕುಬೆವೂರು, ಮಾಧವ ಬಂಗೇರ, ಚೇತನ್ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.

Kinnigoli-26031503

Comments

comments

Comments are closed.

Read previous post:
Kinnigoli-26031502
ಪುನರೂರು ನೀರಿನ ಟ್ಯಾಂಕ್ ಉದ್ಘಾಟನೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುನರೂರು ಬಳಿ ಜಿ. ಪಂ.ನ ಸಹಯೋಗದಲ್ಲಿ 50,000 ಲೀಟರ್ ಸಾಮಾರ್ಥ್ಯದ ಅಂದಾಜು 7 ಲಕ್ಷರೂ ವೆಚ್ಚದಲ್ಲಿ ನಿರ್ಮಾಣಗೊಂಡ ರಾಷ್ಟ್ರೀಯ ಗ್ರಾಮ...

Close