ಮಲ್ಲಿಗೆಯಂಗಡಿ ಹಿಂದೂ ರುದ್ರಭೂಮಿ ಶಿಲಾನ್ಯಾಸ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆಯಂಗಡಿ ಬಳಿ ಹಿಂದೂ ರುದ್ರಭೂಮಿ ನಿರ್ಮಾಣದ ಶಿಲಾನ್ಯಾಸವನ್ನು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್ ಗುರುವಾರ ನೆರವೇರಿಸಿದರು. ಈ ಸಂದರ್ಭ ಸಂಸದರು ತಮ್ಮ ಅನುದಾನದಲ್ಲಿ 3 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದರು.
ಈ ಸಂದರ್ಭ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲ್, ಪಂಚಾಯಿತಿ ಸದಸ್ಯರಾದ ಅರುಣ್ ಕುಮಾರ್ ಜಯಶಂಕರ್ ರೈ, ಗೀತಾ ಪೂಜಾರಿ, ಯುಗಪುರುಷದ ಭುವನಾಭಿರಾಮ ಉಡುಪ, ದೇವಿಪ್ರಸಾದ್ ಶೆಟ್ಟಿ, ಸದಾನಂದ ಶೆಟ್ಟಿ, ಗುರುರಾಜ್, ದೇವಪ್ರಸಾದ್ ಪುನರೂರು, ಆದರ್ಶ್ ಶೆಟ್ಟಿ ಎಕ್ಕಾರು, ಕಸ್ತೂರಿ ಪಂಜ, ಅಭಿಲಾಷ್ ಶೆಟ್ಟಿ, ಲೋಕಯ್ಯ ಸಾಲ್ಯಾನ್, ಕೇಶವ ಮತ್ತಿತರರು ಉಪಸ್ಥಿತರಿದ್ದರು.

Kinnigoli-26031501

Comments

comments

Comments are closed.

Read previous post:
Mulki-25031504
ಸ್ವಾರ್ಥ ರಹಿತ ಪೂಜೆ ಭಗವಂತನ ಪ್ರೀತಿಗೆ ಪಾತ್ರ

ಮೂಲ್ಕಿ : ಸ್ವಾರ್ಥರಹಿತ ನೈತಿಕ ಜೀವನಕ್ರಮವು ಪುರೋಹಿತರಿಗೆ ಸಮವಸ್ತ್ರವಿದ್ದಂತೆ ಆಚಾರ ವಿಚಾರ ಗುಣ ನಡತೆಗಳು ಮಾತ್ರ ಪುರೋಹಿತರ ಗುರುತಾಗಿರುತ್ತದೆ ಎಂದು ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ...

Close