ಪುನರೂರು ನೀರಿನ ಟ್ಯಾಂಕ್ ಉದ್ಘಾಟನೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುನರೂರು ಬಳಿ ಜಿ. ಪಂ.ನ ಸಹಯೋಗದಲ್ಲಿ 50,000 ಲೀಟರ್ ಸಾಮಾರ್ಥ್ಯದ ಅಂದಾಜು 7 ಲಕ್ಷರೂ ವೆಚ್ಚದಲ್ಲಿ ನಿರ್ಮಾಣಗೊಂಡ ರಾಷ್ಟ್ರೀಯ ಗ್ರಾಮ ಕುಡಿಯುವ ನೀರಿನ ಯೋಜನೆಯ ಟ್ಯಾಂಕ್‌ನ ಉದ್ಘಾಟನೆ ಗುರುವಾರ ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಉದ್ಘಾಟಿಸಿದರು. ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ತಾ. ಪಂ. ಸದಸ್ಯೆ ಸಾವಿತ್ರಿ ಸುವರ್ಣ, ಗ್ರಾ. ಪಂ ಸದಸ್ಯರಾದ ರಘುರಾಮ್ ಪುನರೂರು, ಮಾಧವ, ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಲೀಲಾ ಬಂಜನ್, ರತ್ನಾಕರ ಸುವರ್ಣ, ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-26031502

Comments

comments

Comments are closed.

Read previous post:
Kinnigoli-26031501
ಮಲ್ಲಿಗೆಯಂಗಡಿ ಹಿಂದೂ ರುದ್ರಭೂಮಿ ಶಿಲಾನ್ಯಾಸ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆಯಂಗಡಿ ಬಳಿ ಹಿಂದೂ ರುದ್ರಭೂಮಿ ನಿರ್ಮಾಣದ ಶಿಲಾನ್ಯಾಸವನ್ನು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್ ಗುರುವಾರ ನೆರವೇರಿಸಿದರು. ಈ ಸಂದರ್ಭ...

Close