ದಾಖಲೆ ಮೊತ್ತಕ್ಕೆ ಕಟೀಲು ಹಣ್ಣುಕಾಯಿ ಅಂಗಡಿ ಏಲಂ

Kinnigoli-27031504

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಹಣ್ಣು ಕಾಯಿ ಅಂಗಡಿ ತಿಂಗಳೊಂದರ ಬಾಡಿಗೆ ರೂ.85,400 ದಾಖಲೆಯ ಮೊತ್ತಕ್ಕೆ ಏಲಂ ಆಗಿದೆ.
ಕಟೀಲು ದೇಗುಲದ ಸುಮಾರು 35 ಅಂಗಡಿಗಳ ಒಟ್ಟು ಬಾಡಿಗೆ ವಾರ್ಷಿಕ 10ಲಕ್ಷದಷ್ಟಿದ್ದರೆ, ಇದೀಗ ಒಂದೇ ಅಂಗಡಿ ದೊಡ್ಡ ಮೊತ್ತಕ್ಕೆ ಏಲಂ ಆಗುವುದರೊಂದಿಗೆ ರೂ. 10 ಲಕ್ಷಕ್ಕಿಂತಲೂ ಹೆಚ್ಚು ವಾರ್ಷಿಕ ಆದಾಯವನ್ನು ಒಂದೇ ಅಂಗಡಿ ತರುವಂತಾಗಿದೆ. ಕಳೆದ ವರ್ಷ ಇದೇ ಅಂಗಡಿ ಮೊದಲ ಬಾರಿಗೆ ಏಲಂ ಆದಾಗ ರೂ.37,200 ಮಾಸಿಕ ಬಾಡಿಗೆಗೆ ಏಲಂ ಆಗಿತ್ತು. ಇದೀಗ ಎರಡೂವರೆ ಪಟ್ಟು ಅಧಿಕ ಮೊತ್ತಕ್ಕೆ ಏಲಂ ಆಗಿ ಅಚ್ಚರಿಯನ್ನುಂಟು ಮಾಡಿದೆ.

Mithuna Kodethuru

Comments

comments

Comments are closed.

Read previous post:
Kinnigoli-27031501
ಕೆರೆಕಾಡು ನೀರಿನ ಸಮಸ್ಯೆ

ಕಿನ್ನಿಗೋಳಿ : ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಪರಿಸರದಲ್ಲಿ ಫೆಬ್ರವರಿ ತಿಂಗಳಿನಲ್ಲಿಯೇ ಕುಡಿಯುವ ನೀರಿನ ಅಭಾವ ತಲೆದೋರಿದ್ದು ಮಾರ್ಚ್ ತಿಂಗಳಾದರೂ ಗ್ರಾಮ ಪಂಚಾಯಿತಿ ಆಡಳಿತ ಮುಖತ: ಮನವಿ...

Close