ಕೆರೆಕಾಡು ನೀರಿನ ಸಮಸ್ಯೆ

ಕಿನ್ನಿಗೋಳಿ : ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಪರಿಸರದಲ್ಲಿ ಫೆಬ್ರವರಿ ತಿಂಗಳಿನಲ್ಲಿಯೇ ಕುಡಿಯುವ ನೀರಿನ ಅಭಾವ ತಲೆದೋರಿದ್ದು ಮಾರ್ಚ್ ತಿಂಗಳಾದರೂ ಗ್ರಾಮ ಪಂಚಾಯಿತಿ ಆಡಳಿತ ಮುಖತ: ಮನವಿ ಕೊಟ್ಟರೂ ಸ್ಪಂದಿಸುತ್ತಿಲ್ಲ ಗ್ರಾಮದ ನೀರು ವಿತರಣೆಯಲ್ಲಿ ತಾರತಮ್ಯದಿಂದ ನೀರು ಪೊರೈಕೆ ಮಾಡಲಾಗುತ್ತಿದೆ ಜಿಲ್ಲಾ ಪಂಚಾಯಿತಿ ಸದಸ್ಯರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಗುರುವಾರ ಕೆರೆಕಾಡು ರಸ್ತೆ ಉದ್ಘಾಟನೆಯ ಸಂದರ್ಭ ಆಗಮಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಅವರಿಗೆ ಮುತ್ತಿಗೆ ಹಾಕಿ ಕೆರೆಕಾಡು ಗ್ರಾಮಸ್ಥರು ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಎಲ್ಲಾ ವರ್ಗದ 500ಕ್ಕೂ ಅಧಿಕ ಮನೆಗಳಿರುವ ಕೆರೆಕಾಡು ಪರಿಸರದಲ್ಲಿ ಹೆಚ್ಚಿನ ಕಡೆಗಳಲ್ಲಿ ಮೂರು ದಿನಕ್ಕೆ ಒಮ್ಮೆಯಾದರೂ ನೀರು ಬಿಡಲಾಗುತ್ತಿಲ್ಲ ಆದರೆ ಕೆಲವು ಕಡೆ ಪ್ರತೀ ದಿನವೂ ನೀರು ಬರುತ್ತದೆ ನೀರು ವಿತರಕರ ಅವಾಂತರವೇ ಸಮಸ್ಯೆಯ ಮೂಲ ಹತ್ತಿರದ ಪಡುಪಣಂಬೂರು ಪಂಚಾಯಿತಿ ಆಡಳಿತ ಸಮರ್ಪಕವಾಗಿ ತಮ್ಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿಗೆ ಕ್ರಮ ಬದ್ಧವಾಗಿ ನೀರು ಸರಭರಾಜು ಮಾಡುತ್ತಿದ್ದು ಕೆರೆಕಾಡು ಪ್ರದೇಶ ಪಡುಪಣಂಬೂರಿನ ಗಡಿಪ್ರದೇಶದಲ್ಲಿದ್ದು ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಕೆರೆಕಾಡು ಪ್ರದೇಶವನ್ನು ಪಡುಪಣಂಬೂರು ಪಂಚಾಯಿತಿಯ ಸುಪರ್ದಿಗೆ ಒಪ್ಪಿಸಿದರೆ ನಾವು ಅವರಂತೆ ನೀರಿನ ಸಮಸ್ಯೆಯಿಂದ ಮುಕ್ತರಾಗಬಹುದು ಎಂದು ಸಲಹೆ ನೀಡಿದರು. ನೀರಿನ ಸಮಸ್ಯೆ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸಿ ಶೀಘ್ರ ಕ್ರಮಗೊಳ್ಳಲು ಶ್ರಮಿಸುವುದಾಗಿಯೂ ಜಿ.ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಹೇಳಿದರು.

ನೀರಿನ ಸರಭರಾಜು ಸಮಸ್ಯೆ ಇದೆ ಆದರೆ ನೀರು ವಿತರಿಸುವ ವ್ಯಕ್ತಿಯ ವಿರುದ್ದ ಗ್ರಾಮ ಸಭೆಗಳಲ್ಲಿ ದೂರು ಬಂದಿದ್ದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಪಂಚಾಯತಿ ಜನಪ್ರತಿನಿಧಿಗಳ ಸಭೆ ನಡೆಸಿ ತ್ವರಿತ ಕ್ರಮ ಕೈಗೊಂಡು ನೀರಿನ ಸಮಸ್ಯೆ ನೀವಾರಣೆ ಮಾಡಲಾಗುವುದು.
ಆಶಾ ರತ್ನಾಕರ ಸುವರ್ಣ
ಜಿಲ್ಲಾ ಪಂಚಾಯಿತಿ ಸದಸ್ಯೆ.
ಕಿನ್ನಿಗೋಳಿ ಕ್ಷೇತ್ರ

ಕುಡಿಯುವ ನೀರಿನ ಯೋಜನೆಗಾಗಿ ಸ್ಥಳಿಯ ಬೋರ್‌ವೆಲ್‌ಗಳಿಂದ ಟ್ಯಾಂಕಿನಲ್ಲಿ ನೀರು ತುಂಬಿ ಪೋಲಾಗುತ್ತಿದ್ದರೂ ಆಡಳಿತ ಹಾಗೂ ನೀರು ವಿತರಕರು ಗಮನ ಕೊಡುತ್ತಿಲ್ಲ ಇದೇ ನೀರನ್ನು ಸಮರ್ಪಕವಾಗಿ ಬಳಸಿ ಅಲ್ಲದೆ ಎಲ್ಲಾ ಕಡೆಗಳಲ್ಲಿ ಸಮನಾಗಿ ನೀರು ಸರಭರಾಜು ಮಾಡಿದಲ್ಲಿ ನಮಗೆ ಸ್ವಲ್ಪವಾದರೂ ನೀರಿನ ಬವಣೆ ಕಡಿಮೆಯಾಗಬಲ್ಲುದು
ಕೆರೆಕಾಡು ಗ್ರಾಮಸ್ಥರು.

Kinnigoli-27031501

Comments

comments

Comments are closed.

Read previous post:
Mulki-27031502
ಮಹಿಳಾ ದಿನಾಚರಣೆ

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ನ ಸ್ವರ್ಣ ಜಯಂತಿ ರೋಜ್ ಗಾರ್ ಯೋಜನೆಯ ಸಮುದಾಯ ಅಭಿವೃದ್ದಿ ಜಾಲದಡಿಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮೂಲ್ಕಿ ನಗರ ಪಂಚಾಯತ್ ನ ಸಮುದಾಯ...

Close