ಬಲಿಪ ನಾರಾಯಣ ಭಾಗವತ ಸನ್ಮಾನ

ಕಿನ್ನಿಗೋಳಿ : ಯಕ್ಷ ಲಹರಿ ರಜತ ವರ್ಷ ಸಂಭ್ರಮ – 2015ರ ಅಂಗವಾಗಿ ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಕಿನ್ನಿಗೋಳಿ ಯಕ್ಷಲಹರಿ ಆಶ್ರಯದಲ್ಲಿ ಯಕ್ಷಗಾನ ತಾಳ ಮದ್ದಳೆ ಹಾಗೂ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರ ಸನ್ಮಾನ ಇತ್ತೀಚಿಗೆ ಪಕ್ಷಿಕೆರೆ ಶ್ರೀ ಗಣೇಶ ಕಲಾ ವೇದಿಕೆಯಲ್ಲಿ ನಡೆಯಿತು.
ಈ ಸಂದರ್ಭ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಸುರಗಿರಿ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಕಾಪಿಕಾಡು ಶ್ರೀ ಕೋರ‍್ದಬ್ಬು ದೈವಸ್ಥಾನ ಆಡಳಿತ ಮೊಕ್ತೇಸರ ಶೀನ ಸ್ವಾಮಿ, ಅತ್ತೂರು ಭಂಡಾರಮನೆ ಶಂಭು ಮುಕ್ಕಾಲ್ದಿ, ಪಂಜದ ಗುತ್ತು ವಿಶ್ವನಾಥ ಶೆಟ್ಟಿ, ಪಂಜದಗುತ್ತು ಶಾಂತರಾಮ ಶೆಟ್ಟಿ, ಪಂಜ ವಾಸುದೇವ ಭಟ್, ಧನಂಜಯ ಶೆಟ್ಟಿಗಾರ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಆಚಾರ್ಯ, ರಾಜೇಶ್ ದಾಸ್, ಪ್ರಶಾಂತ್, ಯಕ್ಷಲಹರಿ ಅಧ್ಯಕ್ಷ ಇ. ಶ್ರೀನಿವಾಸ ಭಟ್, ಉಪನ್ಯಾಸಕ ಜಯಾನಂದ ಉಪಸ್ಥಿತರಿದ್ದರು.

Kinnigoli-28031507

Comments

comments

Comments are closed.

Read previous post:
Kinnigoli-27031504
ದಾಖಲೆ ಮೊತ್ತಕ್ಕೆ ಕಟೀಲು ಹಣ್ಣುಕಾಯಿ ಅಂಗಡಿ ಏಲಂ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಹಣ್ಣು ಕಾಯಿ ಅಂಗಡಿ ತಿಂಗಳೊಂದರ ಬಾಡಿಗೆ ರೂ.85,400 ದಾಖಲೆಯ ಮೊತ್ತಕ್ಕೆ ಏಲಂ ಆಗಿದೆ. ಕಟೀಲು ದೇಗುಲದ ಸುಮಾರು 35 ಅಂಗಡಿಗಳ...

Close