ಭಜನೆಯಿಂದ ಸಂಘಟನೆ ಹಾಗೂ ಅಬಿವೃದ್ದಿ ಸಾದ್ಯ

ಮೂಲ್ಕಿ: ಏಕಾಗೃತೆಯಿಂದ ಭಗವಂತನನ್ನು ದ್ಯಾನಿಸಿಕೊಂಡು ಭಜನೆಯೊಂದಿಗೆ ಸಂಘಟನೆಯಿಂದ ದೇವರನ್ನು ಸ್ತುತಿಸಿದಾಗ ಲೋಕದ ಅಭಿವೃದ್ಧಿ ಸಾದ್ಯ ಎಂದು ವೇದಮೂರ್ತಿ ವಾದಿರಾಜ ಉಪಾದ್ಯಾಯ ಕೊಲೆಕಾಡಿ ಹೇಳಿದರು. ಅವರು ಮೂಲ್ಕಿ ಸಮೀಪದ ಶ್ರೀ ಶಿರಿಡಿ ಸಾಯಿಬಾಬ ಮಂದಿರ ದಲ್ಲಿ ನಡೆದ ನಾಲ್ಕನೇ ವರ್ಷದ ಶ್ರೀ ರಾಮನವಮಿ ಉತ್ಸವದ ಪ್ರಯುಕ್ತ ನಡೆದ ಸಭಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಕಟಪಾಡಿ ವಾಸ್ತು ತಜ್ಞ ವಿಜಯರಾಜ್ ದಂಪತಿಗಳು ‘ಭಜನಾ ಜ್ಯೋತಿ’ ಬೆಳಗಿಸುವುದರ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಶಿರಿಡಿ ಸಾಯಿಬಾಬ ಮಂದಿರ ಸಮಿತಿ ಅಧ್ಯಕ್ಷ ಈಶ್ವರ ಶೆಟ್ಟಿ ಮುನ್ನಾಲಯಗುತ್ತು ಬಂಟ್ವಾಳ, ಅರ್ಚಕ ಉದಯ ಶರ್ಮ ಇನ್ನಾ, ಕಿಲ್ಪಾಡಿ ಪಂಚಾಯತಿ ಸದಸ್ಯ ಮನೋಹರ ಕೋಟ್ಯಾನ್, ಪ್ರದೀಪ ಸಾಲ್ಯಾನ್ ಶಿಮಂತೂರು, ಶ್ರೀಧರ ಕೊಲೆಕಾಡಿ, ಅಣ್ಣು ಪೂಜಾರಿ ಮೊಯಿಲೊಟ್ಟು ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಭಾಸ್ಕರ್ ಕಾಂಚನ್ ರವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು.

Puneethakrishna

Mulki-28031501

Comments

comments

Comments are closed.

Read previous post:
Kinnigoli-28031507
ಬಲಿಪ ನಾರಾಯಣ ಭಾಗವತ ಸನ್ಮಾನ

ಕಿನ್ನಿಗೋಳಿ : ಯಕ್ಷ ಲಹರಿ ರಜತ ವರ್ಷ ಸಂಭ್ರಮ - 2015ರ ಅಂಗವಾಗಿ ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಕಿನ್ನಿಗೋಳಿ ಯಕ್ಷಲಹರಿ ಆಶ್ರಯದಲ್ಲಿ ಯಕ್ಷಗಾನ ತಾಳ ಮದ್ದಳೆ...

Close