ರೋಟರಿ ದೇಶದ ಶೈಕ್ಷಣಿಕ ವ್ಯವಸ್ಥೆಯತ್ತ ಗಮನ

ಮೂಲ್ಕಿ: ಜೀವನದಲ್ಲಿ ಆಕಾಂಕ್ಷೆ ಮತ್ತು ನಿರೀಕ್ಷೆಗಳು ಆದಾಯಕ್ಕೆ ಪೂರಕವಾಗಿದ್ದರೆ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯ ಎಂದು ರೋಟರಿ ಗವರ್ನರ್ ಡಾ.ಭಾಸ್ಕರ ಎಸ್. ಹೇಳಿದರು.
ಮೂಲ್ಕಿ ರೋಟರಿಗೆ ಅಧೀಕೃತ ಭೇಟಿಯ ಸಂದರ್ಭ ಮೂಲ್ಕಿ ವಿಜಯಾ ಕಾಲೇಜು ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೋಲಿಯೋ ನಿರ್ಮೂಲನದ ಗುರಿ ಹೊತ್ತ ರೋಟರಿಯು ನಮ್ಮ ದೇಶವನ್ನು ಪೋಲಿಯೋ ಮುಕ್ತ ವಾಗಿಸಿದರೂ ನೆರೆ ರಾಷ್ಟ್ರ ಪಾಕಿಸ್ಥಾನದಲ್ಲಿ ಇನ್ನೂ ಪೋಲಿಯೊ ಸಮಸ್ಯೆ ಇರುವುದರಿಂದ ನಾವು ಬಹಳ ಜಾತ್ರೆ ವಹಿಸಬೇಕಾಗಿದೆ. ಈ ಬಾರಿ ರೋಟರಿಯು ದೇಶದ ಶೈಕ್ಷಣಿಕ ವ್ಯವಸ್ಥೆಯತ್ತ ಗಮನ ಹರಿಸಿದ್ದು ಭಾರತೀಯ ಶಿಕ್ಷಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಲು ಗ್ರಾಮೀಣ ವಲಯದಿಂದ ಪ್ರಾರಂಭಿಸುವ ಮಹೋನ್ನತ ಯೋಜನೆಯನ್ನು ಕೈಗೆತ್ತಿಕೊಂಡಿದೆ ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಈ ಯೋಜನೆಗೆ ಕೈಜೋಡಿಸಬೇಕು ಎಂದರು.
ಈ ಸಂದರ್ಭ ರೋಟರಿಯ ಅಂತರಾಷ್ಟ್ರೀಯ ಸಹಾಯ ನಿಧಿಗೆ 1ಸಾವಿರ ಡಾಲರ್ ಕೊಡುಗೆಯನ್ನು ಮೂಲ್ಕಿ ರೋಟರಿ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ ಗವರ್ನರ್‌ರವರಿಗೆ ಹಸ್ತಾಂತರಿಸಿದರು.
ಸಹಾಯಕ ಕವರ್ನರ್ ಎಂ.ಜಿ.ನಾಗೇಂದ್ರ ಮೂಲ್ಕಿ ರೋಟರಿ ಗೃಹ ಪತ್ರಿಕೆ ಮೂಲಿಕಾ ಬಿಡುಗಡೆಗೊಳಿಸಿದರು. ಝೋನಲ್ ಲೆಪ್ಟಿನೆಂಟ್ ಶರತ್ ಶೆಟ್ಟಿ ಶುಭಾ ಶಂಶನೆ ಗೈದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ರೋಟರಿ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ ವಹಿಸಿದ್ದರು. ಕಾರ್ಯದರ್ಶಿ ವಿಲ್‌ಹೆಲ್ಮ್ ಮಾಬೆನ್ ಉಪಸ್ಥಿತರಿದ್ದರು. ಜೋನ್ ಜೂಲಿಯಸ್ ಡಿಸೋಜಾ ವರದಿ ಮಂಡಿಸಿದರು. ನಿಯೋಜಿತ ಅಧ್ಯಕ್ಷ ರವಿಚಂದ್ರ ಅಭಿನಂದಿಸಿದರು. ವೈ.ಎನ್.ಸಾಲ್ಯಾನ್ ನಿರೂಪಿಸಿದರು. ರಾಜಾ ಪತ್ರಾವೊ ವಂದಿಸಿದರು.

Bhagyavan Sanil

Mulki-28031502

Comments

comments

Comments are closed.

Read previous post:
Mulki-28031501
ಭಜನೆಯಿಂದ ಸಂಘಟನೆ ಹಾಗೂ ಅಬಿವೃದ್ದಿ ಸಾದ್ಯ

ಮೂಲ್ಕಿ: ಏಕಾಗೃತೆಯಿಂದ ಭಗವಂತನನ್ನು ದ್ಯಾನಿಸಿಕೊಂಡು ಭಜನೆಯೊಂದಿಗೆ ಸಂಘಟನೆಯಿಂದ ದೇವರನ್ನು ಸ್ತುತಿಸಿದಾಗ ಲೋಕದ ಅಭಿವೃದ್ಧಿ ಸಾದ್ಯ ಎಂದು ವೇದಮೂರ್ತಿ ವಾದಿರಾಜ ಉಪಾದ್ಯಾಯ ಕೊಲೆಕಾಡಿ ಹೇಳಿದರು. ಅವರು ಮೂಲ್ಕಿ ಸಮೀಪದ ಶ್ರೀ...

Close