ಹಲವು ದಿನಗಳಿಂದ ಕೆರೆಕಾಡಿನಲ್ಲಿ ನೀರಿಗಾಗಿ ಪ್ರತಿಭಟನೆ

ಕಿನ್ನಿಗೋಳಿ: ಕಿಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡಿನಲ್ಲಿ ಕಳೆದ ಜನವರಿ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿ ತಲೆದೋರಿದ್ದು ಈ ಬಗ್ಗೆ ಕಿಲ್ಪಾಡಿ ಪಂಚಾಯಿತಿ ಆಡಳಿತದ ಹಾಗೂ ವಾರ್ಡ್ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದನ್ನು ಹಾಗೂ ದಿವ್ಯ ನಿರ್ಲಕ್ಷ್ಯ ಮನಗಂಡು ಕಳೆದ 4 ದಿನಗಳಿಂದ ಕೆರೆಕಾಡು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು ಸೋಮವಾರ ಕೆರೆಕಾಡಿನ ಸಾರ್ವಜನಿಕ ಗಣೇಶ ಕಟ್ಟೆಯ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಕೆರೆಕಾಡು ಪರಿಸರದಲ್ಲಿ ಸುಮಾರು ಹೆಚ್ಚು ಕಡಿಮೆ 500 ಮನೆಗಳಿದ್ದು ಪಂಚಾಯಿತಿನ ಕುಡಿಯುವ ನೀರನ್ನು ಬಳಸುವವರ ಸಂಖ್ಯೆ ಅಧಿಕವಾಗಿದ್ದು ಕಳೆದ 15 ವರ್ಷಗಳಿಂದಲೂ ಪ್ರತಿ ಜನವರಿ ತಿಂಗಳು ಬರುತ್ತಿದ್ದಂತೆಯೇ ಪೈಪ್ ಲೈನ್ ಮೂಲಕ ಆಗುವ ನೀರು ಸರಬರಾಜಿನಲ್ಲಿ ಕೆಲವು ಕಡೆ ಕೃತಕ ಅಭಾವ ಸೃಷ್ಠಿಯಾಗುತ್ತಿದೆ. ಇಲ್ಲಿ ಬೆರಳೆಣಿಕೆಯ ಬಾವಿಗಳು ಇದ್ದು ಪಂಚಾಯಿತಿಯ ನೀರಿನ ಪೈಪು ಲೈನ್‌ಗೆ ಅನಿವಾರ್ಯವಾಗಿ ಮೊರೆ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ.
ಈ ಬಗ್ಗೆ ಪ್ರತೀ ವರ್ಷ ಪಂಚಾಯಿತಿ ಆಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹತ್ತಿರದ ಗಡಿ ಗ್ರಾಮಗಳಾದ ಪಡುಪಣಂಬೂರು ಹಾಗೂ ಕಿನ್ನಿಗೋಳಿ ಪಂಚಾಯಿತಿಗಳಲ್ಲಿ ನೀರು ಸರಬರಾಜು ವ್ಯವಸ್ಥಿತವಾಗಿದೆ. ದಿನಂಪ್ರತಿ ನೀರು ನೀಡಲು ಅಸಾಧ್ಯವಾದಲ್ಲಿ ಎರಡು ದಿನಕ್ಕೊಮ್ಮೆ ಯಾದರೂ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಕೆಲವು ಮನೆಗಳಲ್ಲಿ ನೆಲದಡಿಯಲ್ಲಿಯೇ ಟ್ಯಾಂಕ್ ನಿರ್ಮಿಸಿರುವುದರಿಂದ ಕೆಲವು ಮನೆಗಳಿಗೆ ನೀರೇ ಸಮರ್ಪಕ ಸರಭರಾಜು ಆಗುತ್ತಿಲ್ಲ. ಕೆಲವರಿಗೆ ಮೈನ್ ಲೈನ್‌ನಿಂದ, ಕೆಲವರಿಗೆ ಅರ್ಧ ಇಂಚು ಜಾಸ್ತಿ ಇರುವ ಪೈಪ್‌ನಲ್ಲಿ ನೀರು ಸರಭರಾಜು ಆಗುತ್ತಿದೆ. ಪಂಪ್ ಆಪರೇಟರ್ ಸರ್ಮಪಕವಾಗಿ ನೀರು ಬಿಡುತ್ತಿಲ್ಲ. ಉಳ್ಳವರಿಗೆ ನೀರಿನ ಸೌಲಭ್ಯ ನೀಡುತ್ತಾರೆ. ನೀರು ಪೋಲು ಆಗುತ್ತಿದ್ದರೂ ಗಮನ ನೀಡುವುದಿಲ್ಲ ಪೈಪ್‌ನ ಗೇಟ್ ವಾಲ್ವ್‌ಗಳಿಗೆ ಸೂಕ್ತ ಭದ್ರತೆ ಹಾಗೂ ಬೀಗವಿಲ್ಲ, ಆಪರೇಟರ್ ಗೇಟ್ ವಾಲ್ವ್ ತಿರುಗಿಸಿ ಆಚೆ ಹೋಗುವಾಗ ಕೆಲವು ಗ್ರಾಮಸ್ಥರು ವಾಲ್ವ್ ತಿರುಗಿಸುವ ಕೆಲಸ ಮಾಡುತ್ತಿರುತ್ತಾರೆ. ಗೇಟ್ ವಾಲ್ವ್ ಸಮೀಪ ಕಸಕಡ್ಡಿಗಳು ತುಂಬಿಕೊಂಡಿದೆ. ಪೈಪ್‌ಗಳು ಒಡೆದುಹೋಗುತ್ತಿರುವುದು ಇಂತಹ ಹಲವಾರು ಸಮಸ್ಯೆಗಳನ್ನು ಪಂಚಾಯಿತಿ ಆಡಳಿತ ಗಮನಿಸಬೇಕು ಮುಂದಿನ ದಿನಗಳಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಮಾಡದಿದ್ದಲ್ಲಿ ಪಂಚಾಯಿತಿ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾ ಕಾರರು ತಿಳಿಸಿದರು. ಶಾಸಕರು ಸಂಸದರು ಈ ಬಗ್ಗೆ ಗಮನ ನೀಡಬೇಕಾಗಿದೆ.

ಸ್ಥಳೀಯ 4 ಮಂದಿ ವಾರ್ಡ್ ಸದಸ್ಯರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು..

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ಸುವರ್ಣ, ಕಿಲ್ಪಾಡಿ ಪಂಚಾಯತ್ ಅಧ್ಯಕ್ಷೆ ಶಾರದ ವಸಂತ್, ಉಪಾಧ್ಯಕ್ಷ ಮೋಹನ್ ಕುಬೆವೂರು ಹಾಗೂ ಪಿಡಿಓ ಶೋಭಾ ಗ್ರಾಮಸ್ಥರಿಗೆ ಒಂದು ವಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು

ಬೊರ್‌ವೆಲ್ ನಲ್ಲಿ ನೀರಿದೆ ಆದರೆ ತಾಂತ್ರಿಕ ಸಮಸ್ಯೆಗಳಿವೆ ವೈಜ್ಞಾನಿಕ ರೀತಿಯಲ್ಲಿ ನೀರಿನ ಸರಭರಾಜು ವ್ಯವಸ್ಥೆ ಆಗಬೇಕಾಗಿತ್ತಿದೆ. ಅಲ್ಲದೆ ಈ ಪರಿಸರ ಏರು ತಗ್ಗಿನ ಪ್ರದೇಶವಾಗಿದ್ದರಿಂದ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಸಂಬಂಧ ಪಟ್ಟವರನ್ನು ಸಂಪರ್ಕಿಸಿ ತ್ವರಿತ ಕ್ರಮ ಕೈಗೊಂಡು ನೀರಿನ ಸಮಸ್ಯೆ ನಿವಾರಣೆ ಮಾಡಲಾಗುವುದು.

ಆಶಾ ರತ್ನಾಕರ ಸುವರ್ಣ
ಜಿಲ್ಲಾ ಪಂಚಾಯಿತಿ ಸದಸ್ಯೆ.
ಕಿನ್ನಿಗೋಳಿ ಕ್ಷೇತ್ರ

ಈಗಾಗಲೇ ಅತಿಕಾರಿಬೆಟ್ಟುವಿನ ಪಂಪ್ ಅಪರೇಟರನ್ನು ಕರೆಯಿಸಿ ಈಗಾಗಲೇ ಪೈಪ್‌ಲೈನ್ ಸಮಸ್ಯೆ ಬಗ್ಗೆ ವಿಮರ್ಶಿಸಿ ಪರಿಹಾರ ಕಂಡುಕೊಳ್ಳಲಾಗಿದೆ. ಅಲ್ಲದೆ ಗೇಟ್‌ವಾಲ್ವ್‌ಗಳ ಭದ್ರತೆಗಾಗಿ ಛೇಂಬರ್ ನಿರ್ಮಿಸಿ ಬೀಗ ಹಾಕಿಸುವ ಬಗ್ಗೆ ಪಂಚಾಯಿತಿಯಲ್ಲಿ ತೀರ್ಮಾನ ಕೈಗೋಳ್ಳಲಾಗುವುದು.
ಶಾರದ ವಸಂತ್
ಕಿಲ್ಪಾಡಿ ಗ್ರಾಮಪಂಚಾಯಿತಿ ಅಧ್ಯಕ್ಷೆ

ನೀರಿನ ಸಮಸ್ಯೆಯಲ್ಲದೆ ಇಪ್ಪತ್ತು ವರ್ಷಗಳಿಂದ ಇಲ್ಲಿನ ಎಲ್ಲಾ ಅಡ್ಡ ರಸ್ತೆಗಳು ಡಾಮಾರಿಕರಣದ ಸೌಲಭ್ಯಗಳನ್ನೆ ಕಂಡಿಲ್ಲ, ವಾಹನ ಆಚೆ ಹೋದರಂತೂ ಹತ್ತಿರದ ಮನೆಗಳಿಗೆ ಸಾರ್ವಜನಿಕರಿಗೆ ಧೂಳಿನ ಸಿಂಚನವಾಗುತ್ತಿದೆ, ಅನಾರೋಗ್ಯ ಪೀಡಿತರು ವೈದ್ಯರನ್ನು ಸಂಪರ್ಕಿಸಿದಾಗ ಡಸ್ಟ್ ಅಲರ್ಜಿ ಎಂದು ಹೇಳುತ್ತಾರೆ. ಬಡಾವಣೆಗಳಂತಹ ಮನೆಗಳಿದ್ದರೂ ರಸ್ತೆ ಮಾತ್ರಾ ಡಾಮಾರೀಕರಣವಾಗುತ್ತಿಲ್ಲ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ ಎದ್ದು ತೋರುತ್ತಿದೆ.

Kinnigoli-30031503 Kinnigoli-30031504

Comments

comments

Comments are closed.

Read previous post:
Kinnigoli-30031501
ಅತ್ತೂರು ಅರಸು ಕುಂಜಿರಾಯ ನೇಮೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಅತ್ತೂರು ಶ್ರೀ ಅರಸು ಕುಂಜಿರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು.

Close