ಶೈಕ್ಷಣಿಕ ಪ್ರಗತಿಯೊಂದಿಗೆ ಸಮಾಜದ ಉನ್ನತಿ ಸಾಧ್ಯ

ಮೂಲ್ಕಿ : ಹೆಣ್ಣುಮಕ್ಕಳ ಶಿಕ್ಷಣ ಸುವ್ಯವಸ್ಥೆಗಳ ಬಗ್ಗೆ ಸಾರ್ವಜನಿಕ ಸೇವಾ ಸಂಸ್ಥೆಗಳು ಹೆಚ್ಚಿನ ಗಮನ ನೀಡಿದರೆ ಶೈಕ್ಷಣಿಕ ಪ್ರಗತಿಯೊಂದಿಗೆ ಸಮಾಜದ ಉನ್ನತಿ ಸಾಧ್ಯ ಎಂದು ರೋಟರಿ ಗವರ್ನರ್ ಡಾ. ಭಾಸ್ಕರ್ ಎಸ್ ಹೇಳಿದರು. ಮೂಲ್ಕಿ ರೋಟರಿ ಕ್ಲಬ್ ಅಧೀಕೃತ ಭೇಟಿಯ ಸಂದರ್ಭ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ರೋಟರಿ ಕೊಡುಗೆಯಿಂದ ನಿರ್ಮಾಣಗೊಂಡ ವಿಶ್ರಾಂತಿ ಗ್ರಹ ಉದ್ಘಾಟಿಸಿ ಮಾತನಾಡಿದರು.
ಪ್ರೌಡ ಹಾಗೂ ಕಾಲೇಜು ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಆರೋಗ್ಯ ರಕ್ಷಣೆ, ಶುಚಿತ್ವ ಹಾಗೂ ಉತ್ತಮ ಸಂಸ್ಕಾರ ನೀಡುವಲ್ಲಿ ಶೀಕ್ಷಣ ಸಂಸ್ಥೆಗಳ ಮುಖ್ಯಸ್ಥರು ಯೋಜನೆ ರೂಪಿಸಬೇಕು ಎಂದರು.
ಈ ಸಂದರ್ಭ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬೋಳ ಸುರೇಂದ್ರ ಕಾಮತ್, ಪ್ರಾಂಶುಪಾಲ ವಿಷ್ಣು ಮೂರ್ತಿ, ರೋಟರಿ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ, ಕಾರ್ಯದರ್ಶಿ ವಿಲ್‌ಹೆಲ್ಮ್ ಮಾಬೆನ್, ನಿಯೋಜಿತ ಅಧ್ಯಕ್ಷ ರವಿಚಂದ್ರ, ಪೂರ್ವಾಧ್ಯಕ್ಷರಾದ ಎಸ್.ಮೋಹನ್ ರಾವ್, ರಾಜಾ ಪತ್ರಾಒ, ಎನ್.ಪಿ.ಶೆಟ್ಟಿ, ಡೊನಾಲ್ಡ್ ಪ್ರಮೋದನ್, ಬಾಲಚಂದ್ರ ಸನಿಲ್, ಸದಸ್ಯರಾದ ವೈ.ಎನ್.ಸಾಲ್ಯಾನ್‌ಮತ್ತಿತರರಿದ್ದರು.

Bhagyavan Sanil

Mulki-30031505

Comments

comments

Comments are closed.

Read previous post:
Kinnigoli-30031504
ಹಲವು ದಿನಗಳಿಂದ ಕೆರೆಕಾಡಿನಲ್ಲಿ ನೀರಿಗಾಗಿ ಪ್ರತಿಭಟನೆ

ಕಿನ್ನಿಗೋಳಿ: ಕಿಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡಿನಲ್ಲಿ ಕಳೆದ ಜನವರಿ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿ ತಲೆದೋರಿದ್ದು ಈ ಬಗ್ಗೆ ಕಿಲ್ಪಾಡಿ ಪಂಚಾಯಿತಿ ಆಡಳಿತದ ಹಾಗೂ ವಾರ್ಡ್ ಸದಸ್ಯರ...

Close