ಅತ್ತೂರು ಅರಸು ಕುಂಜಿರಾಯ ನೇಮೋತ್ಸವ

ಕಿನ್ನಿಗೋಳಿ: ದೈವ ದೇವರುಗಳನ್ನು ಪ್ರಾಂಜಲ ಮನಸ್ಸಿನಿಂದ ಪೂಜಿಸಿದಾಗ ಮಾನಸಿಕ ನೆಮ್ಮದಿ ಹಾಗೂ ಜೀವನದಲ್ಲಿ ಸುಕೃತಿ ಫಲಗಳು ದೊರಕುತ್ತವೆ ಎಂದು ಧಾರ್ಮಿಕ ಚಿಂತಕರಾದ ವಿದ್ವಾನ್ ಪಂಜ ಭಾಸ್ಕರ ಭಟ್ ಹೇಳಿದರು.
ಕಿನ್ನಿಗೋಳಿ ಸಮೀಪದ ಅತ್ತೂರು ಶ್ರೀ ಅರಸು ಕುಂಜಿರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮವು ಮಾತನಾಡಿದರು.
ಮುಂಬಯಿ ಉದ್ಯಮಿ ಪ್ರಕಾಶ್ ಶೆಟ್ಟಿ ಪಂಜ ನಲ್ಯಗುತ್ತು ಅಧ್ಯಕ್ಷತೆ ವಹಿಸಿದರು.
ಶ್ರೀ ಅರಸು ಕುಂಜಿರಾಯ ದೈವಸ್ಥಾನಕ್ಕೆ ಸ್ಥಳ ದಾನ ಮಾಡಿದ ಓಮಯ್ಯ ಶೆಟ್ಟಿ ಅಂಗಡಿಮನೆ, ಬೆಳ್ಳಿಯ ಕಿರೀಟ ನೀಡಿದ ಜಯಶ್ರೀ ರಾಜೇಂದ್ರ ಶೆಟ್ಟಿ ಕುಡ್ತಿಮಾರು ಗುತ್ತು, ದೇವರಿಗೆ ಆಭರಣಗಳನ್ನು ನೀಡಿದ ಅತ್ತೂರು ಕೊಜಪಾಡಿ ಜಯ ಶೆಟ್ಟಿ ಹಾಗೂ ವಂದನ ವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸುಂಬಯಿ ಉದ್ಯಮಿ ಧನಪಾಲ ಶೆಟ್ಟಿ ತಾಳಿಪಾಡಿಗುತ್ತು, ಮುಂಬಯಿ ಉದ್ಯಮಿ ಗಣೇಶ್ ವಿ. ಶೆಟ್ಟಿ ಐಕಳ, ಯುಗಪುರುಷ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಅತ್ತೂರು ಬೈಲು ಶ್ರೀ ಮಹಾಗಣಪತಿ ಮಂದಿರದ ಪ್ರಧಾನ ಅರ್ಚಕ ಎ ವೆಂಕಟರಾಜ ಉಡುಪ, ಅತ್ತೂರು ಭಂಡಾರ ಮನೆ ಶಂಭು ಮುಕ್ಕಾಲ್ದಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಅತ್ತೂರು ಮೂಡ್ರಗುತ್ತು ರಘುನಾಥ ಶೆಟ್ಟಿ, ಅತ್ತೂರು ಭಂಡಾರ ಮನೆ ಮಾಲತಿ ವಿ ಶೆಟ್ಟಿ ಉಪಸ್ಥಿತರಿದ್ದರು.
ಅತ್ತೂರು ಪ್ರಸನ್ನಾ ಎಲ್ ಶೆಟ್ಟಿ ಸ್ವಾಗತಿಸಿ, ಅದ್ಯಾಪಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-31031501

Comments

comments

Comments are closed.

Read previous post:
Mulki-30031508
ಮೂಲ್ಕಿ : ಮಾರುತಿ ಒಮ್ನಿ-ಸ್ವಿಫ್ತ್ ಕಾರು ಡಿಕ್ಕಿ

ಮೂಲ್ಕಿ : ಇಂದು ಮಧ್ಯಾಹ್ನ ಪಡಪಣಂಬೂರು ಪೆಟ್ರೋಲ್ ಪಂಪು ಬಳಿ ರಾಷ್ತ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಮಾರುತಿ ಒಮ್ನಿ ಕಾರಿಗೆ ಒಮ್ನಿ ಕಾರು ಎಡ ಬದಿಗೆ ತಿರುಗಿ...

Close