ಮೂಲ್ಕಿ: ಬ್ಯಾಡ್ಮಿಂಟನ್ ಕ್ರೀಡಾ ಕೂಟ

ಮೂಲ್ಕಿ: ಅದ್ಯಾಪಕರು ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ತೊಡಗಿಸಿಕೊಂಡು ಪ್ರಬುದ್ದರೆನಿಸಿಕೊಂಡಾಗ ಮಾತ್ರ ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಉಡುಪಿ ಸರಕಾರಿ ಮಹಿಳಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ಸ್ಟಾಪ್ ಕ್ಲಬ್ ವತಿಯಿಂದ ಕಾಲೇಜು ಒಳಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಅಂತರ್ ಕಾಲೇಜು ಅದ್ಯಾಪಕರ ಬ್ಯಾಡ್ಮಿಂಟನ್ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್ ಕುಡ್ವಾ ವಹಿಸಿದ್ದರು.
ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂ ಶುಪಾಲೆ ಪಮೀದಾ ಬೇಗಂ, ಸ್ಟಾಪ್‌ಕ್ಲಬ್ ಅಧ್ಯಕ್ಷ ಸೋಮಶೇಖರ ಭಟ್,ಕಾರ್ಯದರ್ಶಿ ಹರೀಶ್ ಉಪಸ್ಥಿತರಿದ್ದರು.
ಪ್ರೊ.ಕೆ.ಆರ್.ಶಂಕರ್ ಸ್ವಾಗತಿಸಿದರು. ಅರುಣ ಕುಮಾರಿ ನಿರೂಪಿಸಿದರು.

Bhagyavan Sanil

Mulki-0104201502

Comments

comments

Comments are closed.

Read previous post:
Mulki-0104201501
ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠೆ

ಮೂಲ್ಕಿ: ದುರಿತ ನಿವಾರಕನೂ ಸರ್ವತ್ರ ಶಾಂತಿ ಪ್ರದಾತನೂ ಆಗಿರುವ ಪರಮಶಿವನ ಆರಾಧನೆಯ ಮೂಲಕ ಜೀವನದಲ್ಲಿ ಉನ್ನತಿಗಳಿಸಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ...

Close