ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠೆ

ಮೂಲ್ಕಿ: ದುರಿತ ನಿವಾರಕನೂ ಸರ್ವತ್ರ ಶಾಂತಿ ಪ್ರದಾತನೂ ಆಗಿರುವ ಪರಮಶಿವನ ಆರಾಧನೆಯ ಮೂಲಕ ಜೀವನದಲ್ಲಿ ಉನ್ನತಿಗಳಿಸಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.
ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ದಾರ ಪುನರ್ ಪ್ರತಿಷ್ಠೆ ಹಾಗೂ ಪ್ರಸನ್ನ ಕಲಶಾಭಿಶೇಕ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕೊಲೆಕಾಡಿ ವಾದಿರಾಜ ಉಪಾಧ್ಯಾಯರು ಧಾರ್ಮಿಕ ಪ್ರವಚನ ನೀಡಿ ಸುಮಾರು ಸಾವಿರ ವರ್ಷಗಳ ಇತಿಹಾಸದಲ್ಲಿ ಪ್ರಮುಖ ದೇವಸ್ಥಾನವಾಗಿ ಬೆಳಗಿ ಕಾಲಾಂತರದಲ್ಲಿ ಜೀರ್ಣಗೊಂಡರೂ ಕಾಲಕ್ಕೆ ಅನುಸಾರವಾಗಿ ಪ್ರತೀ ದಿನ ಪೂಜಾ ಪುನಸ್ಕಾರವನ್ನು ಪಡೆದ ಈ ಕಾರಣಿಕ ಕ್ಷೇತ್ರದ ಜೀರ್ಣೋದ್ದಾರದಿಂದ ಸವ್ರತ್ರ ಮಂಗಲವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ವಹಿಸಿದ್ದರು.
ಕ್ಷೇತ್ರದ ಗೌ.ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ದಾನಿಗಳನ್ನು ಸಂಮಾನಿಸಿದರು.
ಅತಿಥಿಗಳಾಗಿ ಜಿಪಂ.ಸದಸ್ಯ ಈಶ್ವರ ಕಟೀಲು,ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಕರ್ನಾಟಕ ಬ್ಯಾಂಕ್ ಮಹಾ ಪ್ರಭಂದಕ ಜೈರಾಂ ಹಂದೆ, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಎಂ.ಬಂಗೇರಾ,ಉದ್ಯಮಿ ಆಶ್ರಯ ಶೇಖರ ಟಿ.ಶೆಟ್ಟಿ, ಗೋಪಿಕಾ ಎಸ್. ಮಯ್ಯ ಅತಿಥಿಗಳಾಗಿದ್ದರು. ಹರಿಕೃಷ್ಣ ಪುನರೂರು ಸ್ವಾಗತಿಸಿದರು. ಹರಿಶ್ಚಂದ್ರ.ಪಿ.ಸಾಲ್ಯಾನ್ ಪ್ರಸ್ತಾವಿಸಿದರು. ಲಕ್ಷ್ಮೀಕಾಂತ ನಿರೂಪಿಸಿದರು. ಕ್ಷೇತ್ರದ ಕಾರ್ಯದರ್ಶಿ ದೊಡ್ಡಣ್ಣ ಮೊಲಿ ವಂದಿಸಿದರು.

Bhagyavan Sanil

Mulki-0104201501

Comments

comments

Comments are closed.