ಕಟೀಲು ಚಿಣ್ಣರ ಚಿಲಿಪಿಲಿ

ಕಿನ್ನಿಗೋಳಿ: ಎರಡು ದಶಕಗಳ ಹಿಂದೆ ಇದ್ದ ವೃತ್ತಿ ಶಿಕ್ಷಣ ಇದೀಗ ಹೊಸ ಅವಿಷ್ಕಾರದೊಂದಿಗೆ ಮಕ್ಕಳ ಕ್ರಿಯಾಶೀಲತೆಯ ಮನಸ್ಸನ್ನು ಬೆಳೆಸುವುದು ಶ್ಲಾಘನೀಯ ಎಂದು ಕಟೀಲು ದೇವಳ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ ಹೇಳಿದರು.
ಕಟೀಲು ದೇವಳ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಸ್ಕರ ನೆಲ್ಯಾಡಿ ಮಾಹಿತಿ ನೀಡಿದರು.
ಈ ಸಂದರ್ಭ ಶಾಲಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟರಮಣ ಹೆಗ್ಡೆ, ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಶೆಣೈ ಶಿಬಿರದ ನಿರ್ದೇಶಕ ರಾಜೇಶ್ ಐ. ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಕೆ. ವನಮಾಲ ಪ್ರಸ್ತಾವನೆಗೈದು ಸ್ವಾಗತಿಸಿದರು. ಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-0204201504 Kinnigoli-0204201505 Kinnigoli-0204201506

Comments

comments

Comments are closed.

Read previous post:
Kinnigoli-0204201503
ತಾರನಾಥ ವರ್ಕಾಡಿ ಯಕ್ಷ ಕಲಾಕುಸುಮ ಬಿರುದು

ಕಿನ್ನಿಗೋಳಿ: ಕಿನ್ನಿಗೋಳಿ ಯಕ್ಷಲಹರಿ ರಜತ ವರ್ಷ ಸಂಭ್ರಮದ ಅಂಗವಾಗಿ ಕಿನ್ನಿಗೋಳಿ ಮಹಮ್ಮಾಯಿ ಕಟ್ಟೆಯ ಬಳಿ ಯಕ್ಷ ಮಿತ್ರರು ಹಾಗೂ ಯಕ್ಷ ಲಹರಿ ಆಶ್ರಯದಲ್ಲಿ ಪತ್ರಕರ್ತ-ಯಕ್ಷಗಾನ ಪ್ರಸಂಗಕರ್ತ- ಅರ್ಥಧಾರಿ...

Close