ಜೀವನದಲ್ಲಿ ಪರಿಪೂರ್ಣತೆ – ಜ್ಞಾನ ಸಂಪಾದನೆ

ಪ್ರತಿಯೊಬ್ಬ ವ್ಯಕ್ತಿಯು ಜ್ಞಾನ ಸಂಪಾದನೆಯಿಂದ ಪ್ರಪಂಚವನ್ನು ನೋಡಬಹುದು ಜ್ಞಾನ ಸಂಪಾದನೆಯ ಜೊತೆಗೆ ಉತ್ತಮ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಜೀವನದಲ್ಲಿ ಉನ್ನತವಾದುದನ್ನು ಸಾಧಿಸುವುದರ ಜೊತೆಗೆ ಪರಿಪೂರ್ಣತೆಯನ್ನು ಹೊಂದಬಹುದು ಎಂದು ಮಂಗಳೂರು ಎಂ.ಆರ್.ಪಿ.ಎಲ್. ಡೆಪ್ಯೂಟಿ ಜನರಲ್ ಮ್ಯಾನೇಜರ್ ಲಕ್ಷ್ಮೀ ಕುಮಾರನ್ ಹೇಳಿದರು.
ಅವರು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನೈತಿಕ ಮೌಲ್ಯಗಳು ಎನ್ನುವ ವಿಷಯದ ಕುರಿತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಅಸೋಸಿಯೇಟ್ ಪ್ರೊಫೆಸರ್ ವಿಜಯ, ಕುಮಾರಿ ಹರ್ಷಿತ ಶೆಟ್ಟಿ, ಮರಿಯನ್ ರೋಶನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-0504201501

Comments

comments

Comments are closed.

Read previous post:
Kinnigoli-0204201506
ಕಟೀಲು ಚಿಣ್ಣರ ಚಿಲಿಪಿಲಿ

ಕಿನ್ನಿಗೋಳಿ: ಎರಡು ದಶಕಗಳ ಹಿಂದೆ ಇದ್ದ ವೃತ್ತಿ ಶಿಕ್ಷಣ ಇದೀಗ ಹೊಸ ಅವಿಷ್ಕಾರದೊಂದಿಗೆ ಮಕ್ಕಳ ಕ್ರಿಯಾಶೀಲತೆಯ ಮನಸ್ಸನ್ನು ಬೆಳೆಸುವುದು ಶ್ಲಾಘನೀಯ ಎಂದು ಕಟೀಲು ದೇವಳ ಪ್ರಧಾನ ಅರ್ಚಕ ವಾಸುದೇವ...

Close