ಮುಕ್ಕ ಶ್ರೀನಿವಾಸ ಆಸ್ಪತ್ರೆ -100ನೇ ಶಿಬಿರ

ಕಿನ್ನಿಗೋಳಿ : ಮುಕ್ಕ ಶ್ರೀನಿವಾಸ ಆಸ್ಪತ್ರೆ ಗ್ರಾಮೀಣ ಪ್ರದೇಶಗಳ ಆರ್ಥಿಕವಾಗಿ ಹಿಂದುಳಿದ ವರ್ಗದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸತತ 100 ಶಿಬಿರಗಳನ್ನು ನಡೆಸಿ ಸಮಾಜ ಸೇವೆ ಮಾಡುತ್ತಿದೆ ಎಂದು ಎ. ಶ್ಯಾಮರಾವ್ ಪೌಂಡೇಶನ್‌ನ ಉಪಾಧ್ಯಕ್ಷ ಡಾ. ಎ. ಶ್ರೀನಿವಾಸ ರಾವ್ ಹೇಳಿದರು.
ಶ್ರೀನಿವಾಸ ಆಸ್ಪತ್ರೆ ಮುಕ್ಕ, ಶ್ರೀನಿವಾಸ ದಂತ ಮಹಾ ವಿದ್ಯಾಲಯ, ವಿಪ್ರ ಸಂಪದ ಪುನರೂರು ಹಾಗೂ ಲಯನ್ಸ್ ಕ್ಲಬ್ ಮೂಲ್ಕಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ಭಾನುವಾರ ನಡೆದ ೧೦೦ನೇ ವೈದ್ಯಕೀಯ, ಶಸ್ತ್ರ ಚಿಕಿತ್ಸೆ ಹಾಗೂ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಶಿಬಿರ ಉದ್ಘಾಟಿಸಿದರು. ವಿಪ್ರ ಸಂಪದ ಗೌರವಾಧ್ಯಕ್ಷ ಪಟೇಲ್ ವಾಸುದೇವ ರಾವ್, ವಿಪ್ರ ಸಂಪದ ಅಧ್ಯಕ್ಷ ಸುರೇಶ್ ರಾವ್, ಡೀನ್ ಡಾ| ಕೃಷ್ಣಪ್ರಸಾದ್ ಎಂ. ಎಸ್, ಡೀನ್ ಡಾ| ಮನೋಜ್ ವರ್ಮಾ, ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು.
ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಡಾ. ಎಮ್.ಅಣ್ಣಯ ಕುಲಾಲ್ ಪ್ರಸ್ತಾವನೆ ಗೈದು ಸ್ವಾಗತಿಸಿದರು. ಮಾರ್ಕೆಟಿಂಗ್ ವಿಭಾಗದ ಶ್ರೀರಾಮ ಕಾರಂತ ಕಾರ್ಯಕ್ರಮ ನಿರೂಪಿಸಿದರು.

Kinnigoli-0504201505

Comments

comments

Comments are closed.

Read previous post:
Kinnigoli-0504201504
ಅಂಗರಗುಡ್ಡೆ : ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರದಲ್ಲಿ ಭಜನಾ ಮಂಗಲೋತ್ಸವ ವನ್ನು ಉದ್ಯಮಿ ದುರ್ಗೇಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ರಾಮ ಮಂದಿರದ ಅಧ್ಯಕ್ಷ ವಿಜಯಕುಮಾರ್, ಕಿಲ್ಪಾಡಿ...

Close