ತಡೆ ರಹಿತ ಬಸ್ಸು ನಿಲುಗಡೆ ಹೋರಾಟ

ಮೂಲ್ಕಿ: ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿಯ ಕೊರತೆ ಪರಿಣಾಮ ಹಳೆಯಂಗಡಿ ಗ್ರಾಮಸ್ಥರ ಬಹಳ ವರ್ಷದ ಕೂಗು ಅಧಿಕಾರಿ ವರ್ಗಕ್ಕೆ ಕೇಳಿಸುತ್ತಿಲ್ಲ ಎಂದು ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು ಹೇಳಿದರು.
ಹಳೆಯಂಗಡಿ ಕಮಲ್ ಸಭಾಂಗಣದಲ್ಲಿ ವಿದ್ಯಾ ವಿನಾಯಕ ಯುವಕ ಮತ್ತು ಉವತಿ ಮಂಡಲದ ಅಶ್ರಯದಲ್ಲಿ ಹಳೆಯಂಗಡಿಯಲ್ಲಿ ಸರ್ಕಾರಿ ಮತ್ತು ಖಾಸಗಿ ತಡೆರಹಿತ ಬಸ್ಸುಗಳ ನಿಲುಗಡೆ ಬಗ್ಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಮಾತನಾಡಿದ ಪಡುಪಣಂಬೂರು ಗ್ರಾಮ ಪಂ.ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಶಸಕರು ಹಾಗೂ ಸಂಸದರು ಎಲ್ಲರೂ ಈ ಸಮಸ್ಯೆಗೆ ಹೊಣೆಯಾಗುತ್ತಾರೆ ಮುಂಬರುವ ಗ್ರಾಮ ಪಂ ಚುಣಾವಣೆಯನ್ನು ಪಕ್ಷ ಭೇದ ವಿಲ್ಲದೆ ಬಹಿಕ್ಷರಿಸಿದಲ್ಲಿ ಹಳೆಯಂಗಡಿಯ ಜನರ ಕೂಗು ಜಿಲ್ಲಾಡಳಿತದ ಕಿವಿಗೆ ಬೀಳಬಹುದು ಎಂದರು.
ಹಿರಿಯ ನಾಗರೀಕ ಪಾವಂಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ಎಸ್ ಮಾಧವ ರಾವ್ ಮಾತನಾಡಿ, ಪತ್ರ ವ್ಯವಹಾರ ಬಿಟ್ಟು ಪ್ರತಿಭಟನೆ ಸೂಕ್ತವಾಗಿದೆ ಜನ ಸಾಮಾನ್ಯರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಲಬೇಕು ಎಂದರು.
ಸಾಹುಲ್ ಹಮೀದ್ ಮಾತನಾಡಿ, ಜಿಲ್ಲಾಡಳಿತ ಮತ್ತು ಅಧಿಕಾರಿಗಳ ನಿದ್ದೆ ಬಿಡಬೇಕಾದರೆ ತೀವ್ರ ಪ್ರತಿಭಟನೆ ಅಗತ್ಯ ಕನಿಷ್ಟ ಅರ್ದ ಗಂಟೆಯಾದರೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಬೇಕು.
ಸದಾಶಿವ ಅಂಚನ್ ಮಾತನಾಡಿ ಖಾಸಗಿ ಸರ್ವಿಸ್ ಬಸ್ಸು ಲಾಬಿಯ ಪರಿಣಾಮ ಇಲ್ಲಿ ತಡೆ ರಹಿತ ಬಸ್ಸು ನಿಲುಗಡೆಗೆ ಸಮಸ್ಯೆಯಾಗಿದೆ ಬೆಳಿಗ್ಗೆ ಬಸ್ಸು ತುಂಬಿ ತುಳುಕಿದರೂ ಇನ್ನೂ ಜನ ತುಂಬಿಸುತ್ತಾರೆ ಈ ಸಂದರ್ಭ ಹಿರಿಯ ನಾಗರೀಕರು ಮತ್ತು ಮಹಿಳೆಯರು ಹಾಗೂ ಮಕ್ಕಳಿಗೆ ಸಮಸ್ಯೆಯಾಗುತ್ತದೆ ತಡೆ ರಹಿತ ಬಸ್ಸು ನಿಲುಗಡೆಯಾದರೆ ಈ ಎಲ್ಲಾ ಸಮಸ್ಯೆಗೆ ಪರಿಹಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಸುಧಾಕರ ಅಮೀನ್ ವಹಿಸಿದ್ದರು.ಯುವತಿ ಮಂಡಲದ ಅಧ್ಯಕ್ಷೆ ಜ್ಯೋತಿ ರಾಮಚಂದ್ರ,ತಾ.ಪಂ.ಸದಸ್ಯೆ ಸಾವಿತ್ರಿ ಸುವರ್ಣ, ವೇದಿಕೆಯಲ್ಲಿದ್ದರು. ರಮೇಶ್ ಕುಮಾರ್ ಸ್ವಾಗತಿಸಿದರು. ಕಳೆದ 4 ವರ್ಷಗಳ ಹೋರಾಟದ ಬಗ್ಗೆ ರಾಮದಾಸ್ ಪಾವಂಜೆ ಪ್ರಾಸ್ತಾವಿಸಿದರು.ಹರೀಶ್ ಡಿಎಸ್ ವಂದಿಸಿದರು.ಸ್ಟಾನಿ ಡಿಕೋಸ್ತಾ ನಿರೂಪಿಸಿದರು.

Bhagyavan Sanil

Haleyangadi-0504201501

Comments

comments

Comments are closed.

Read previous post:
Paavanje-0504201501
ರಂಗ ನಿನಾದ ಕಾರ್ಯಕ್ರಮ

ಮೂಲ್ಕಿ: ಪರಿಸರ ಪೂರಕ ಕೈಗಾರಿಕೆ ಬೇಕು ಕೃಷಿ ಸಂಸ್ಕೃತಿ ಸಂಸ್ಕಾರ ಉಳಿಕೆ ಅಗತ್ಯ, ತುಳುನಾಡಿನ ಉಳಿಕೆಗೆ ಜನ ಸಂಘಟಿತರಾಗಬೇಕು ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಪಾವಂಜೆಯ...

Close