ರಂಗ ನಿನಾದ ಕಾರ್ಯಕ್ರಮ

ಮೂಲ್ಕಿ: ಪರಿಸರ ಪೂರಕ ಕೈಗಾರಿಕೆ ಬೇಕು ಕೃಷಿ ಸಂಸ್ಕೃತಿ ಸಂಸ್ಕಾರ ಉಳಿಕೆ ಅಗತ್ಯ, ತುಳುನಾಡಿನ ಉಳಿಕೆಗೆ ಜನ ಸಂಘಟಿತರಾಗಬೇಕು ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಪಾವಂಜೆಯ ಆಗೋಳಿ ಮಂಜಣ ಜಾನಪದ ಕೇಂದ್ರ ಹಾಗೂ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಆಯೋಜನೆಯಲ್ಲಿ ರಾಮಪ್ಪ ಪೂಜಾರಿ ಸಿರಿದೊಂಪದಲ್ಲಿ ಭಾನುವಾರ ನಡೆದ ರಂಗ ನಿನಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನ ದೇವರ ಕೊಡುಗೆ ಆದರೆ ನಮ್ಮ ಜೀವನ ಸಾಧನೆಯನ್ನು ಸಾರ್ವಜನಿಕರು ನೆನಪಿಸಿಕೊಂಡತಾಗಬೇಕು ಈ ನಿಟ್ಟಿನಲ್ಲಿ ಅಕಾಲಿಕವಾಗಿ ದೇವರ ಪಾದ ಸೇರಿದ ನಿನಾದನ ನೆನಪಿನಲ್ಲಿ ತುಳು ಸಂಸ್ಕೃತಿಯ ಕಾರ್ಯ ನಡೆಸುತ್ತಿರುವ ಕಡಂಬೋಡಿ ಮಹಾಬಲ ಪೂಜಾರಿಯವರ ಕಾರ್ಯ ಸ್ತುತ್ಯರ್ಹ ಎಂದರು.
ಮಂಗಳೂರು ತುಳು ಕೂಟ ಅಧ್ಯಕ್ಷ ದಾಮೋದರ ನಿಸರ್ಗ, ಮಾಜಿ ಮೇಯರ್, ರಜನಿ ದುಗ್ಗಣ್ಣ, ಉದ್ಯಮಿ ಎಸ್.ಪಿ.ಪೂಜಾರಿ, ಹಿರಿಯ ಕೃಷಿಕ ಜಯಂತ ಎಂ.ಸನಿಲ್,ವಕೀಲ ಮಧುಕರ ಅಮೀನ್, ಹಳೆಯಂಗಡಿ ಪಂ ಅಧ್ಯಕ್ಷೆ ಪೂರ್ಣಿಮಾ ಮಧು,ಉದ್ಯಮಿಗಳಾದ ಗಣೇಶ್ ಜಿ.ಬಂಗೇರಾ ಮತ್ತು ರಾಜಾರಾಮ ಸಾಲ್ಯಾನ್ ನಿನಾದ ತುಳು ಸಂಸ್ಕೃತಿ ಅಧ್ಯಯನ ಕೇಂzದ ಟ್ರಸ್ಟಿ ಮಹಾಬಲ ಪೂಜಾರಿ ಕಡಂಬೋಡಿ, ಕೇಂದ್ರದ ಗೌರವಾಧ್ಯಕ್ಷ ಚಂದ್ರಶೇಖರ ನಾನಿಲ್, ಬಾಸ್ಕರ ಸಾಲ್ಯಾನ್ ಹಳೆಯಂಗಡಿ, ಮಧುಕರ ಅಮೀನ್, ಧಮಪಾಲ ಎಂ.ಟಿ,ಗಗನ್ ಸುವರ್ಣ,ವಿಜಯಕುಮಾರ್ ಕುಬೆವೂರು, ಅತಿಥಿಗಳಾಗಿದ್ದರು. ಅಧ್ಯಕ್ಷ ಡಾ.ಗಣೇಶ್ ಅಮಿನ್ ಸಂಕಮಾರ್ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು. ಕಾರ್ಯದರ್ಶಿ ಜಯಂತಿ ಸಂಕಮಾರ್ ವಂದಿಸಿದರು.

Bhagyavan Sanil

Paavanje-0504201501

Comments

comments

Comments are closed.

Read previous post:
Mulki-0504201502
ಚಂದ್ರಗ್ರಹಣ ಪ್ರಯುಕ್ತ ದೀಪಾರಾಧನೆ

ಮೂಲ್ಕಿ: ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಂದ್ರಗ್ರಹಣ ಪ್ರಯುಕ್ತ ನಡೆದ ದೀಪಾರಾಧನೆ ಮತ್ತು ಭಜನಾ ಸಂಕೀರ್ಥನೆಯನ್ನು ದೇವಳದ ಅರ್ಚಕ ವೇದಮೂರ್ತಿ ಶ್ರೀನಿವಾಸ ಭಟ್ ಚಾಲನೆ ನೀಡಿದರು. ಈ ಸಂದರ್ಭ...

Close