ಬುಲ್‌ಬುಲ್ ಉತ್ಸವ 2015-16

ಮೂಲ್ಕಿ: ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮನಾಳುತ್ತಿದ್ದ ಬ್ರಿಟೀಷರ ಕಾರ್ಯಕ್ರಮಗಳಿಗೆ ಯುವ ಸಮುದಾಯವನ್ನು ಸಿದ್ದಪಡಿಸುವ ನೆಲೆಯಲ್ಲಿ ಪ್ರಾರಂಭಗೊಂಡ ಸ್ಕೌಟ್ ಮತ್ತು ಗೈಡ್ಸ್ ಸ್ವಾತಂತ್ರ್ಯದ ಬಳಿಕ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಶಿಸ್ತುಬದ್ದ ನಾಗರೀಕರನ್ನಾಗಿ ರೂಪಿಸುವ ಸಂಸ್ಥೆಯಾಗಿ ಬೆಳೆಯಿತು ಎಂದು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಕೆ.ನಾರಾಯಣ ಶೆಣೈ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮಂಗಳೂರು, ಮೂಲ್ಕಿ ಸ್ಥಳಿಯ ಸಂಸ್ಥೆ ಮತ್ತು ಮೆಡಲಿನ್ ಪ್ರೌಢ ಶಾಲೆಯ ಸಂಯೋಜನೆಯಲ್ಲಿ ರೋವರ್‍ಸ್-ರೇಂಜರ್‍ಸ್ ಸಮಾಗಮ, ಸ್ಕೌಟ್ಸ್_ಗೈಡ್ಸ್ ಮೇಳ ಮತ್ತು ಕಬ್ಸ್ ಬುಲ್‌ಬುಲ್ ಉತ್ಸವ 2015-16ನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ನಾಯಕತ್ವದ ಗುಣಗಳು ಶಿಸ್ತು ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ಮಾತ್ರ ಪ್ರಾಪಂಚಿಕ ಜ್ಞಾನದೊಂದಿಗೆ ಸದೃಡರಾಗುತ್ತಾರೆ ಈ ಕಾರ್ಯವನ್ನು ಸ್ವಾರ್ಥ ರಹಿತವಾಗಿ ಶಿಕ್ಷಕರು ಸ್ತುತ್ಯರ್ಹರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮುಖ್ಯ ಆಯುಕ್ತರಾದ ಎನ್.ಜಿ.ಮೋಹನ್ ಮಾತನಾಡಿ, ವಿದ್ಯಾರ್ಥಿಗಳನ್ನು ಸ್ವಾವಲಂಭಿಗಳನ್ನಾಗಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಕರ್ನಾಟಕ ಸರ್ಕಾರ ೪ಕೋಟಿ ಅನುದಾನ ನೀಡಿದ್ದರಿಂದ ಮುಂದಿನ ವರ್ಷಗಳಲ್ಲಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ ಈ ಬಗ್ಗೆ ಶಿಕ್ಷಕರು ಹೆಚ್ಚಿನ ಆಸಕ್ತಿಯಿಂದ ಸಹಕರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ,ಉದ್ಯಮಿ ರಾಜೇಶ್ ಡಿಸೋಜಾ,ಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ ಕೆಂಚನಕೆರೆ,ಮೂಲ್ಕಿ ಠಾಣಾ ಎಎಸ್‌ಐ ವಾಮನ್ ಸಾಲ್ಯಾನ್, ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು. ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಶಂಕರ್,ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ಸರೋಜಿನಿ ಸುವರ್ಣ,ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಕದ್ರಿ,ವಾಸುದೇವ ಬೋಳೂರು,ಜಿಲ್ಲಾ ಆಯುಕ್ತರಾದ ಐರಿನ್ ಡಿಕುನ್ಹ,ಸಹಾಯಕ ಆಯುಕ್ತ ಸರ್ವೋತ್ತಮ ಅಂಚನ್, ಮೆಡಲಿನ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ. ವಿದ್ಯಾ ಪಿಂಟೋ ಅತಿಥಿಗಳಾಗಿದ್ದರು. ಈ ಸಂದರ್ಭ ಪ್ರತಿಭಾಸ್ವಿತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ ಕೆಂಚನಕೆರೆ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಭಗಿನಿ.ಲೋಲಿಟಾ ಸ್ವಾಗತಿಸಿದರು. ಸ್ಥಳಿಯ ಸಂಸ್ಥೆ ಅಧ್ಯಕ್ಷ ಸರ್ವೋತ್ತಮ ಅಂಚನ್ ಪ್ರಸ್ತಾವಿಸಿದರು. ಮಧುಕರ ನಾಯಕ್ ನಿರೂಪಿಸಿದರು. ಸ್ಥಳಿಯ ಸಂಸ್ಥೆ ಕಾರ್ಯದರ್ಶಿ ಹರಿಶ್ಚಂದ್ರ ವಂದಿಸಿದರು.

Mulki-09041504

Comments

comments

Comments are closed.

Read previous post:
Mulki-09041503
ಶ್ರೀ ನವದುರ್ಗಾ ಯುವಕ ವೃಂದ ವಾರ್ಷಿಕೋತ್ಸವ

ಮೂಲ್ಕಿ: ಭಗವಂತನ ಆರಾಧನೆಯಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಲು ಸಾಧ್ಯವಿದ್ದು ಧರ್ಮ ಜಾಗೃತಿ ಮೂಡಿದಾಗ ಗ್ರಾಮದಲ್ಲಿ ಸುಭಿಕ್ಷೆಯಾಗಲು ಸಾಧ್ಯವೆಂದು ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಹೇಳಿದರು. ಮೂಲ್ಕಿಯ ವಿಜಯ...

Close