ಕಿಲ್ಪಾಡಿ : ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ

ಮೂಲ್ಕಿ : ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ,ಕುಡಿಯುವ ನೀರು ಸೇರಿದಂತೆ ಮೂಲ ಭೂತ ಸೌಕರ್ಯಗಳಿಗೆ ಜನ ಪ್ರತಿನಿಧಿಗಳು ಹೆಚ್ಚಿನ ಒತ್ತು ನೀಡಿದಾಗ ಅಭಿವೃದ್ದಿ ಸಾಧ್ಯವೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ಶಾಸಕರ ಕ್ಷೇತ್ರದ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಹತ್ತು ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡ ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಗೇರುಕಟ್ಟೆಯಿಂದ ಕಿಲ್ಪಾಡಿಯ ಕೋರ್‍ದಬ್ಬು ದೈವಸ್ತಾನದ ರಸ್ತೆಯ ಕಾಂಕ್ರೀಟಿಕರಣ ಕಾಮಾಗಾರಿಯನ್ನು ಉದ್ಘಾಟಿಸಿ  ಮಾತನಾಡಿದರು.
ಕಿಲ್ಪಾಡಿ ಪಂಚಾಯತ್ ಅಧ್ಯಕ್ಷೆ ಶಾರದಾ ವಸಂತ್,ಉಪಾಧ್ಯಕ್ಷ ಮೋಹನ್ ಕುಬೆವೂರು, ಸದಸ್ಯರಾದ ಗೋಪಿನಾಥ ಪಡಂಗ,ಮನೋಹರ್ ಕೋಟ್ಯಾನ್,ಜಿಲ್ಲಾ ಪಂಚಾಯತ್ ಇಂಜಿನಿಯರ್,ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಸಾಲ್ಯಾನ್ ಪಯ್ಯೊಟ್ಟು ಮತ್ತಿತರರು ಉಪಸ್ಥಿತರಿದ್ದರು.
Prakash Suvarna 

Mulki-09041501

Comments

comments

Comments are closed.

Read previous post:
Haleyangadi-0504201501
ತಡೆ ರಹಿತ ಬಸ್ಸು ನಿಲುಗಡೆ ಹೋರಾಟ

ಮೂಲ್ಕಿ: ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿಯ ಕೊರತೆ ಪರಿಣಾಮ ಹಳೆಯಂಗಡಿ ಗ್ರಾಮಸ್ಥರ ಬಹಳ ವರ್ಷದ ಕೂಗು ಅಧಿಕಾರಿ ವರ್ಗಕ್ಕೆ ಕೇಳಿಸುತ್ತಿಲ್ಲ ಎಂದು ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್...

Close