ಧಾರ್ಮಿಕ ಸ್ಥಳ: ಜ್ಞಾನ, ಸಂಸ್ಕೃತಿ, ಸಂಸ್ಕಾರ ಕೇಂದ್ರ

ಕಿನ್ನಿಗೋಳಿ : ಧಾರ್ಮಿಕ ಸ್ಥಳಗಳು ಸುಜ್ಞಾನ, ಸಂಸ್ಕೃತಿ, ಸಂಸ್ಕಾರದ ಕೇಂದ್ರಗಳಾಗಿ ಸಮಾಜದ ಒಳಿತಿಗಾಗಿ ಶ್ರಮಿಸುವ ತಾಣಗಳಾಗಬೇಕು ಎಂದು ಏಳಿಂಜೆ ಶ್ರೀಧರ ಭಟ್ ಹೇಳಿದರು.
ಬುಧವಾರ ಪಟ್ಟೆ ಶ್ರೀ ಕೋರ್‍ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದ ಅಂಗವಾಗಿ ಪಟ್ಟೆ ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಪಟ್ಟೆ ಜಾರಂದಾಯ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ರಫುರಾಮ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಾಧಕರಾದ ಗಂಪಮನೆ ಜಯರಾಮ ಶೆಟ್ಟಿ, ಲಕ್ಷಣ ಪೂಜಾರಿ, ಸುದೀರ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಜಯಂತ್, ಪ್ರಕಾಶ್ ಜೆ. ಸುವರ್ಣ , ಪರಮಾನಂದ ಸಾಲ್ಯಾನ್ ಅವರನ್ನು ಗೌರವಿಸಲಾಯಿತು.
ನಿವೃತ್ತ ಉಪತಹಶೀಲ್ದಾರ ವೈ. ಯೋಗೀಶ್ ರಾವ್, ಪಟ್ಟೆ ಭಂಡಾರ ಮನೆ ಉಜ್ಜು ಪೂಜಾರಿ, ಕೋರ್‍ದಬ್ಬು ದೈವಸ್ಥಾನದ ಅರ್ಚಕ ಚಲ್ಲು ಮುಖಾರಿ, ಐಕಳ ಗ್ರಾ. ಪಂ. ಅಧ್ಯಕ್ಷೆ ಪದ್ಮಿನಿ ವಸಂತ್, ಅಂಗನವಾಡಿ ಶಿಕ್ಷಕಿ ಮಮತಾ, ಸುಧಾಕರ ಸಾಲ್ಯಾನ್, ರಘುರಾಮ ಶೆಟ್ಟಿ, ನಾಗೇಶ್ ಪೂಜಾರಿ, ಜಯಂತ ಪೂಜಾರಿ, ಉಪಸ್ಥಿತರಿದ್ದರು.
ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-09041502

Comments

comments

Comments are closed.

Read previous post:
Kinnigoli-09041501
ಪುನರೂರು : ಖಾಝೀ ಅಧಿಕಾರ ಸ್ವೀಕಾರ

ಕಿನ್ನಿಗೋಳಿ : ಪುನರೂರು ಮಹಮ್ಮದಿಯಾ ಜುಮ್ಮಾ ಮಸೀದಿ ಮತ್ತು ಮುಹ್‌ಯದ್ದೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ೮ ನೇ ವರ್ಷದ ಸ್ವಲಾತ್ ವಾರ್ಷಿಕ, ಜಲಾಲಿಯ್ಯಾ ರಾತೀಬ್ ಹಾಗೂ ಖಾಝೀ ಅಕಾರ...

Close